Friday, 7th October 2022

ಅಲ್ಪಸಂಖ್ಯಾತರ ಓಲೈಕೆಯೇ ಕಾಂಗ್ರೆಸ್ ಪಕ್ಷಕ್ಕೆ ಸೋಲು: ಪ್ರಭಾಕರ

ಶಿರಾ: ಶಿರಾ ಮತ ಕ್ಷೇತ್ರದಲ್ಲಿ ಹಿಂದುಗಳೇ ಗೆಲುವಿನ ನರ‍್ಣಾಯಕರು. ಇಲ್ಲಿ ಅಲ್ಪಸಂಖ್ಯಾತರನ್ನು ಓಲೈಕೆ ಮಾಡುವ ಸಲುವಾಗಿ ಹಿಂದೂಗಳನ್ನು ಕೇವಲವಾಗಿ ಕಂಡಂತ ಕಾಂಗ್ರೆಸ್ ಪಕ್ಷ ಈ ಬಾರಿ ಇಲ್ಲಿ ಧೂಳಿಪಟವಾಗಲಿದೆ ಎಂದು ರಾಜ್ಯದ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಮಾಜಿ ನರ‍್ದೇಶಕ ಪ್ರಭಾಕರ್ ತಿಳಿಸಿದರು.

ಇಂದು ಶಿರಾ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಕರ‍್ಯಕ್ರಮದಲ್ಲಿ ಭಾಗವಹಿಸಿ ಪ್ರಭಾಕರ್ ಮಾತನಾಡಿದರು. ಶಿರಾ ಇತಿಹಾಸ ಇರುವ ಕಸ್ತೂರಿ ರಂಗಪ್ಪ ನಾಯಕ ಕಟ್ಟಿದ ನಾಡು ಇಲ್ಲಿ ಹಿಂದೂಗಳನ್ನು ಕೇವಲವಾಗಿ ತುಚ್ಛವಾಗಿ ನಡೆಸಿಕೊಂಡಂತ ಕಾಂಗ್ರೆಸ್ ಪಕ್ಷಕ್ಕೆ ಜನತೆ ಪಾಠ ಕಲಿಸಬೇಕು ಎಂದರೆ ತಾವೆಲ್ಲರೂ ಬಿಜೆಪಿಗೆ ಮತ ನೀಡಬೇಕು ಎಂದು ಪ್ರಭಾಕರ್ ಜನತೆಯಲ್ಲಿ ಮನವಿ ಮಾಡಿದರು.

ಶಿರಾ ಮತಕ್ಷೇತ್ರದಲ್ಲಿ ನಡೆಯುತ್ತಿರುವಂತಹ ಉಪಚುನಾವಣೆಯಲ್ಲಿ ಬಿಜೆಪಿ ಅಭ್ರ‍್ಥಿ ಜಡಿ ರಾಜೇಶ್ ಗೌಡ ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಲಿದ್ದಾರೆ ಎಂದು ಪ್ರಭಾಕರ್ ವಿಶ್ವಾಸ ವ್ಯಕ್ತಪಡಿಸಿದರು.

ಶಿರಾ ಮತಕ್ಷೇತ್ರದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿದ್ದು ಕಳೆದ ಲೋಕಸಭಾ ಚುನಾವಣೆಯಲ್ಲೂ ಕೂಡ 80000 ಸಾವಿರ ಮತಗಳನ್ನು ನೀಡಿದ ಕ್ಷೇತ್ರ ಇದಾಗಿದೆ ಈ ಬಾರಿಯೂ ಕೂಡ ಭಾರತೀಯ ಜನತಾ ಪರ‍್ಟಿಯ ಕೈಹಿಡಿಯುವ ವಿಶ್ವಾಸ ಇದೆ.

ಇಲ್ಲಿ ಅಲ್ಪಸಂಖ್ಯಾತರ (ಮುಸ್ಲಿಮರ) ತುಷ್ಟೀಕರಣ ನೀತಿಯನ್ನು ಮೈಗೂಡಿಸಿಕೊಂಡಂತಹ ಮಾಜಿ ಸಚಿವರಿಂದ ಹಿಂದೂಗಳಿಗೆ ರಕ್ಷಣೆ ಇಲ್ಲದಂತಾಗಿದೆ.

ಇಲ್ಲಿನ ಹಿಂದೂಗಳೆಲ್ಲ ಒಂದಾಗಬೇಕು ಹಿಂದೂಗಳನ್ನು ರಕ್ಷಣೆ ಮಾಡುವಂತ ಕೆಲಸ ಭಾರತೀಯ ಜನತಾ ಪಕ್ಷ ಮಾಡುತ್ತಿದೆ. ಹಾಗಾಗಿಯೇ ಕಳೆದ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳನ್ನು ನೀಡಿದಂತ ಉದಾಹರಣೆ ನಮ್ಮ ಕಣ್ಮುಂದಿವೆ.

ಇದೇ ಇತಿಹಾಸದ ಹಿನ್ನೆಲೆಯಲ್ಲಿ ನಾವು ಈ ಬಾರಿ ಶಿರಾ ಮತಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಧ್ವಜ ಅರಳಲಿದೆ ಎಂದು ಪ್ರಭಾಕರ್ ತಿಳಿಸಿದರು. ಕೇಂದ್ರದಲ್ಲಿ ನರೇಂದ್ರ ಮೋದಿ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ರ‍್ಕಾರ ಎಲ್ಲಾ ಸಮುದಾಯಗಳ ಅಭಿವೃದ್ಧಿಗಾಗಿ ಬಡವರ ಏಳಿಗೆಗಾಗಿ ಕೆಲಸ ಮಾಡುವಂತಹ ರ‍್ಕಾರ ಬಿಜೆಪಿ ರ‍್ಕಾರ ಎಂದು ತಿಳಿಸಿದರು.

ಈಗಾಗಲೇ ಕಾಡುಗೊಲ್ಲರ ಅಭಿವೃದ್ಧಿ ನಿಗಮದ ಸ್ಥಾಪನೆಗೆ ಹಸಿರು ನಿಶಾನೆ ತೋರಿಸಿರುವ ಯಡಿಯೂರಪ್ಪನವರು ಹಿಂದುಳಿದ ರ‍್ಗಗಳ ನಾಯಕ ಎಂಬ ಹೆಸರಿಗೆ ಪೂರಕವಾಗಿದ್ದಾರೆ.

ಕರ‍್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷರಾದ ವಿಜಯೇಂದ್ರ ಬಿಜೆಪಿ ಅಧ್ಯಕ್ಷರಾದ ಬಿ ಸುರೇಶ್ ಗೌಡ ಶಾಸಕರಾದ ಜ್ಯೋತಿ ಗಣೇಶ್ ಅಭ್ರ‍್ಥಿ ಡಾಕ್ಟರ್ ರಾಜೇಶ್ ಗೌಡ ಕರ‍್ಯರ‍್ಶಿ ಕೆ ಎನ್ ರವಿ, ಮಾರಣ್ಣ ಪ್ರಕಾಶ್ ಮಂಜುನಾಥ್ ಕುಮಾರಸ್ವಾಮಿ ನಿಂಗಯ್ಯ ತೋಟಪ್ಪ ತಳವಾರಯ್ಯ ನಾಗಲಿಂಗೇಗೌಡ ಇತರರು ಉಪಸ್ಥಿತರಿದ್ದರು.