Friday, 18th June 2021

ಇಂಧನ ಬೆಲೆಯೇರಿಕೆ ಖಂಡಿಸಿ ಕಾಂಗ್ರೆಸ್ ಒಬಿಸಿ ಘಟಕ ಪ್ರತಿಭಟನೆ

ತುಮಕೂರು: ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ವತಿಯಿಂದ ಶುಕ್ರವಾರ ನಗರದ ಕೋತಿತೋಪಿನಲ್ಲಿರುವ ಪೆಟ್ರೋಲ್ ಬಂಕ್ ಎದುರು ಒಬಿಸಿ ಘಟಕದ ಅಧ್ಯಕ್ಷ ಪುಟ್ಟರಾಜು ಅವರ ನೇತೃತ್ವದಲ್ಲಿ ಇಂಧನ ಬೆಲೆಗಳ ಹೆಚ್ಚಳ ಖಂಡಿಸಿ ಪ್ರತಿಭಟನೆ ನಡೆಸಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಮಾವೇಶಗೊಂಡ ನಂತರ ಕೋತಿತೋಪಿನಲ್ಲಿರುವ ಪೆಟ್ರೋಲ್ ಬಂಕ್ ಬಳಿ ತೆರಳಿ ಕೇಂದ್ರ ಸರಕಾರದ ವಿರುದ್ದ ಘೋಷಣೆ ಕೂಗುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಮಾತನಾಡಿದ ಒಬಿಸಿ ಘಟಕದ ಅಧ್ಯಕ್ಷ ಪುಟ್ಟರಾಜು,ಜನಸಾಮಾನ್ಯರಿಗೆ ಒಳ್ಳೆಯ ದಿನಗಳನ್ನು ನೀಡುವ ಭರವಸೆ ನೀಡಿ,ಅಧಿಕಾರಕ್ಕೆ ಬಂದ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರಕಾರ ಜನಸಾಮಾನ್ಯರ ಹಿತ ಕಾಯುವಲ್ಲಿ ವಿಫಲವಾಗಿದೆ. ಅವೈಜ್ಞಾನಿಕ ನೊಟ್‌ಬ್ಯಾನ್, ಜಿ.ಎಸ್.ಟಿ ಯಂತಹ ಯೋಜನೆಗಳ ಮೂಲಕ ಜನಸಾಮಾನ್ಯರ ಬದುಕು ಬೀದಿಗೆ ತಂದಿದ್ದಾರೆ.33 ರೂ ಮೂಲ ಪೆಟ್ರೋಲ್ ಬೆಲೆಗೆ 60 ರೂಗಳಿಗೆ ಹೆಚ್ಚಿನ ಸೆಸ್ ವಿಧಿಸುವ ಮೂಲಕ ಲೀಟರ್ ಬೆಲೆ 100 ರೂ ದಾಟುವಂತೆ ಮಾಡಿ,ಜನಸಾಮಾನ್ಯರು ಕಣ್ಣೀರು ಹಾಕು ವಂತೆ ಮಾಡಿದ್ದಾರೆ ಎಂದು ದೂರಿದರು.
ಇಂಧನ ಬೆಲೆಗಳ ಹೆಚ್ಚಳದಿಂದ ದಿನನಿತ್ಯ ಬಳಸುವ ಆಹಾರ ಪದಾರ್ಥಗಳಾದ ಅಡುಗೆ ಎಣ್ಣೆ, ಬೆಳೆ, ಅಕ್ಕಿ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ ಬೆಲೆ ಕೂಡ ಹೆಚ್ಚಳವಾಗಿದೆ.ಕೃಷಿಗೆ ಸಂಬAಧಿಸಿದ ಬೀಜ, ರಸಗೊಬ್ಬರಗಳು ಸಹ ದುಬಾರಿಯಾಗಿ ರೈತರು ಪರದಾಡು ವಂತಾಗಿದೆ. ಇದರ ಜೊತಗೆ ರಾಜ್ಯ ಸರಕಾರ ವಿದ್ಯುತ್‌ದರ ಹೆಚ್ಚಳ ಮಾಡಿ, ಬಡವರ ಹೊಟ್ಟೆಯ ಮೇಲೆ ಪ್ರಹಾರ ನಡೆಸಿದೆ. ಇದರ ವಿರುದ್ದ ದೇಶದ ಜನರು ಹೋರಾಡಬೇಕಾಗಿದೆ ಎಂದು ಪುಟ್ಟರಾಜು ತಿಳಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಒಬಿಸಿ ಘಟಕದ ಮುಖಂಡರಾದ ಸೋಮಶೇಖರ್, ಮಂಜುನಾಥ್, ನಾರಾಯಣಪ್ಪ, ದಾದಾಪೀರ್, ರಿಯಾಜ್ ಮತ್ತಿತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *