Thursday, 19th May 2022

ಕೊಡಗಿನಲ್ಲಿ ನಿರಂತರ ಮಳೆ, ರೆಡ್ ಅಲರ್ಟ್ ಘೋಷಣೆ

ಕೊಡಗು ಜಿಲ್ಲೆೆಯಲ್ಲಿ ಸೆ.5 ರವರೆಗೆ ಭಾರಿ ಮಳೆಯಾಗುವ ಸಾಧ್ಯತೆಗಳಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನೆೆಲೆ ಜಿಲ್ಲಾಾಡಳಿತ ಜಿಲ್ಲೆೆಯಾದ್ಯಂತ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಮುಂಜಾಗೃತಾ ಕ್ರಮವಾಗಿ ಜಿಲ್ಲೆೆಯ ಎಲ್ಲ ಶಾಲಾ, ಕಾಲೇಜು ಹಾಗೂ ಅಂಗನವಾಡಿಗಳಿಗೆ ಗುರುವಾರ ರಜೆ ಘೋಷಿಸಿ ಜಿಲ್ಲಾಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಆದೇಶಿಸಿದ್ದಾಾರೆ.

ಆಗಸ್‌ಟ್‌‌ನಲ್ಲಿ ಜಿಲ್ಲೆೆಯಲ್ಲಿ ಬಿದ್ದ ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿಿತಿ ಉಂಟಾಗಿ ಕೆಲವು ಪ್ರದೇಶಗಳಲ್ಲಿ ಭೂಕುಸಿತದಿಂದ ರಸ್ತೆೆ ಸಂಪರ್ಕಗಳು ಕಡಿತಗೊಂಡಿತ್ತು. ಜೀವಹಾನಿ, ಜಾನುವಾರು ಹಾನಿ ಸಂಭವಿಸಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಜಿಲ್ಲೆೆಯಲ್ಲಿ ಮತ್ತೆೆ ಮಳೆಯ ಪ್ರಮಾಣ ಏರಿಕೆಯಾಗುತ್ತಿಿರುವುದರಿಂದ ಸಾರ್ವಜನಿಕರು ಹಾಗೂ ಪ್ರವಾಸಿಗರು ಎಚ್ಚರಿಕೆಯಿಂದಿರಲು ಜಿಲ್ಲಾಾಡಳಿತ ಮನವಿ ಮಾಡಿದೆ.

ಕಳೆದ ಮೂರು ದಿನಗಳಿಂದ ಕೊಡಗು ಜಿಲ್ಲಾಾ ವ್ಯಾಾಪ್ತಿಿಯಲ್ಲಿ ಸುರಿಯುತ್ತಿಿರುವ ಮಳೆ ಬುಧವಾರ ತೀವ್ರತೆಯನ್ನು ಪಡೆದುಕೊಂಡಿದೆ. ಜೀವನದಿ ಕಾವೇರಿ ಮತ್ತೆೆ ಉಕ್ಕಿಿ ಹರಿಯಲಾರಂಭಿಸಿದ್ದು, ತ್ರಿಿವೇಣಿ ಸಂಗಮ ಭರ್ತಿಯಾಗಿರುವುದರಿಂದ ಭಾಗಮಂಡಲವನ್ನು ಸಂಪರ್ಕಿಸುವ ರಸ್ತೆೆಗಳು ಜಲಾವೃತಗೊಂಡಿವೆ. ಕಾವೇರಿಯ ಉಗಮ ಸ್ಥಾಾನ ತಲಕಾವೇರಿಯಲ್ಲಿ ಧಾರಾಕಾರ ಮಳೆಯಾಗುತ್ತಿಿದೆ.

ನಾಪೋಕ್ಲುವಿಗೆ ಸಂಪರ್ಕ ಕಲ್ಪಿಿಸುವ ರಸ್ತೆೆಯ ಮೇಲೆ ಪ್ರವಾಹದ ನೀರು ಹರಿಯುತ್ತಿಿದ್ದು, ಸಂಪರ್ಕ ಕಡಿತಗೊಂಡಿದೆ. ಮಳೆಯ ತೀವ್ರತೆ ಇದೇ ರೀತಿ ಮುಂದುವರಿದಲ್ಲಿ ಭಾಗಮಂಡಲ ಮತ್ತೊೊಮ್ಮೆೆ ಸಂಪೂರ್ಣವಾಗಿ ಜಲಾವೃತಗೊಳ್ಳುವ ಆತಂಕ ಎದುರಾಗಿದೆ.

ಕಾವೇರಿ ನದಿ ಪಾತ್ರದ ನಾಪೋಕ್ಲು, ಮೂರ್ನಾಡು ಬಲಮುರಿ, ಸಿದ್ದಾಾಪುರ ವಿಭಾಗಗಳಲ್ಲಿ, ವೀರಾಜಪೇಟೆ, ಬಾಳೆಲೆ ವ್ಯಾಾಪ್ತಿಿಯಲ್ಲಿ ಹಾಗೂ ಸೋಮವಾರಪೇಟೆ ತಾಲೂಕಿನಲ್ಲೂ ನಿರಂತರವಾಗಿ ಮಳೆಯಾಗುತ್ತಿಿದೆ.

ಮತ್ತೆೆ ಆತಂಕ ಸೃಷ್ಟಿಿ
ಎಡೆಬಿಡದೆ ಸುರಿಯುತ್ತಿಿರುವ ಗಾಳಿ, ಮಳೆೆ ಮಳೆಯಿಂದ ಜಿಲ್ಲೆೆಯಲ್ಲಿ ಮತ್ತೆೆ ಆತಂಕ ಸೃಷ್ಟಿಿಯಾಗಿದೆ. ಈಗಾಗಲೇ ಜಿಲ್ಲೆೆಯಲ್ಲಿ ಬಿದ್ದ ಭಾರೀ ಮಳೆಯಿಂದ ಪ್ರವಾಹ ಪರಿಸ್ಥಿಿತಿ ಉಂಟಾಗಿದ್ದು, ಮಡಿಕೇರಿ-ಮಂಗಳೂರು ಮುಖ್ಯ ರಸ್ತೆೆಯ ಜೋಡುಪಾಲದಲ್ಲಿ ಭಾರಿ ಗಾತ್ರದ ಮರ ಉರುಳಿ ಬಿದ್ದಿದೆ. ರಸ್ತೆೆಯ ಕೆಲವೆಡೆಗಳಲ್ಲಿ ಬರೆ ಕುಸಿತ ಸಂಭವಿಸಿ ವಾಹನ ಸಂಚಾರಕ್ಕೆೆ ತೊಡಕುಂಟಾಗಿತ್ತು. ಅಧಿಕಾರಿಗಳ ತಂಡ ಸ್ಥಳಕ್ಕೆೆ ಆಗಮಿಸಿ ಮರ ಮತ್ತು ಮಣ್ಣನ್ನು ತೆರವುಗೊಳಿಸಿ ಸಂಚಾರವನ್ನು ಸುಗಮಗೊಳಿಸಲು ಕ್ರಮ ಕೈಗೊಂಡರು.

ತುರ್ತು ಸೇವೆಗೆ
ಟ್ರೋಲ್ ಫ್ರೀ ಸಂಖ್ಯೆೆ: 08272-221077
ವಾಟ್ಸಾಾಪ್ ನಂ. 8550001077 ಸಂಪರ್ಕಿಸಿ