Wednesday, 1st December 2021

ಮತಾಂತರ ಪಿಡುಗಿಗೆ ನಮ್ಮ ಸ್ವಾಮೀಜಿಗಳೂ ಕಾರಣ

ಆಚರಣೆ

ದೇವಿ ಮಹೇಶ್ವರ ಹಂಪಿನಾಯ್ಡು, ಬೆಂಗಳೂರು

ಮತಾಂತರವನ್ನು ಗಂಭೀರವಾಗಿ ಪರಿಗಣಿಸದಿದ್ದರೆ, ಇನ್ನು ಕೆಲವರ್ಷಗಳ ನಂತರ ನಮ್ಮ ಸ್ವಾಾಮೀಜಿಳನ್ನು ಆರಾಧಿಸಲು, ಪಾದಪೂಜೆ ಮಾಡಲು, ಕೊನೆಗೆ ಪಲ್ಲಕ್ಕಿಿ ಹೊರಲು ನಾಲ್ಕು ಮಂದಿ ಭಕ್ತರೂ ಸಿಗದಂತಾದರೆ ಆಚ್ಚರಿ ಪಡಬೇಕಿಲ್ಲ!

ಮೊನ್ನೆೆ ಬೇಲೂರಿನಲ್ಲಿ ಆದಿಚುಂಚನಗಿರಿ ಶ್ರೀಮಠದ ಪದ್ಮಭೂಷಣ ಶ್ರೀ ಬಾಲಗಂಗಾಧರನಾಥ ಸ್ವಾಾಮೀಜಿಗಳ ಸಂಸ್ಮರಣೋತ್ಸವ ಹಾಗೂ ಪ್ರಸ್ತುತ ಪೀಠಾಧೀಶರಾದ ಶ್ರೀ ನಿರ್ಮಲಾನಂದನಾಥ ಸ್ವಾಾಮೀಜಿಗಳ ಗುರುವಂದನಾ ಸಮಾರಂಭವು ಜರುಗಿತು. ನಾಡಿನ ಪ್ರಬಲ ಒಕ್ಕಲಿಗ ಗೌಡ ಸಮುದಾಯದ ಆದಿಚುಂಚನಗಿರಿ ಮಠವು ಏರ್ಪಡಿಸಿದ್ದ ಈ ಸಮಾರಂಭದಲ್ಲಿ ನಾಡಿನ ಬಹುತೇಕ ಎಲ್ಲಾಾ ಜಾತಿಯ ಮಠಾಧೀಶರು ಪಾಲ್ಗೊೊಂಡಿದ್ದುದು ಈ ಸಮಾರಂಭದ ವಿಶೇಷವೆನಿಸಿತ್ತು. ಇದರ ಹಿರಿಮೆ ಶ್ರೀ ನಿರ್ಮಾಲಾನಂದನಾಥ ಸ್ವಾಾಮೀಜಿಗಳಿಗೆ ಸಲ್ಲಬೇಕು. ಏಕೆಂದರೆ ಶ್ರೀಗಳು ಬರಿಯ ಒಕ್ಕಲಿಗ ಮಠದ ಸ್ವಾಾಮೀಜಿಗಳಾಗಿ ಮಾತ್ರವಲ್ಲ, ಅವರು ಜಾತ್ಯತೀತವಾಗಿ ಈ ದೇಶದ ಪರಂಪರೆ ಧರ್ಮ ಸಂಸ್ಕೃತಿ ಆಚಾರ ವಿಚಾರಗಳನ್ನು ಸ್ವತಃ ಪ್ರೀತಿಸುವ ಹೆಮ್ಮೆೆ ಪಡುವಂತಹ ಸಹಜ ಮಹತ್ತರ ಜ್ಞಾಾನವನ್ನು ಹೊಂದಿದ್ದಾಾರೆ. ಅದನ್ನೇ ಅಂದು ವೇದಿಕೆಯಲ್ಲಿ ಭಕ್ತರಿಗೆ ಹಂಚಿದ್ದಾಾರೆ.

ಅಂದು ವೇದಿಕೆಯಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ‘ಇತಿಹಾಸ ಪುಟವನ್ನು ತಿರುವಿದರೆ ಭಾರತ ಸಂಸ್ಕೃತಿ, ಸಂಸ್ಕಾಾರದ ಚಿತ್ರಣವೇ ಬೇರೆ ಇದೆ. ಅದು ವಿಶ್ವಕ್ಕೇ ಮಾದರಿ. ನಮ್ಮದು ಆಗರ್ಭ ಶ್ರೀಮಂತ ಸಾಂಸ್ಕೃತಿಕ ರಾಷ್ಟ್ರ. ಮನುಷ್ಯರಾದ ನಾವುಗಳು ಜ್ಞಾಾನ ಪಡೆಯಲು ಜಗತ್ತಿಿಗೆ ಬಂದ್ದಿದ್ದೇವೆ. ಜ್ಞಾಾನ ಬೆಳೆಸಿಕೊಂಡರೆ ಜಗತ್ತಿಿಗೆ ಅದು ಶಕ್ತಿಿಯಾಗಲಿದೆ’ ಎಂದು ಕರೆ ನೀಡಿರುವುದು ಎಲ್ಲಾಾ ಪ್ರಜೆಗಳಿಗೂ ಅನ್ವಯಿಸುತ್ತದೆ. ಅವರ ವೈಚಾರಿಕತೆ ಹೀಗಿರುವುದರಿಂದಲೇ ತಿಂಗಳುಗಳ ಹಿಂದೆ ರಕ್ಷಣಾ ವೇದಿಕೆಯ ಟಿ. ನಾರಾಯಣಗೌಡರ ನೇತೃತ್ವದಲ್ಲಿ ಒಕ್ಕಲಿಗ ಮುಖಂಡರಾದ ಡಿ.ಕೆ ಶಿವಕುಮಾರ್, ಮೃತರಾದ ಕಾಫೀ ಡೇ ಸಿದ್ಧಾಾರ್ಥ್ ಹಾಗೂ ಮಾಜಿ ಮುಖ್ಯಮಂತ್ರಿಿ ಎಚ್.ಡಿ. ಕುಮಾರಸ್ವಾಾಮಿ ಪರವಾದ ಜಾತಿ ಆಧರಿತ ಪ್ರತಿಭಟನಾ ವೇದಿಕೆಯಲ್ಲಿ ಪಾಲ್ಗೊೊಳ್ಳದೇ ತಮ್ಮ ಸಹಜ ಧಾರ್ಮಿಕ ನಿಲುವನ್ನು ತೋರಿರುವುದು.

ಸಮಾಜಕ್ಕೆೆ ಇಂತಹ ನೈಜ ಜಾತ್ಯತೀತ ನೀತಿಯುಳ್ಳ ಶ್ರೀಗಳು ಬೇಕಿದೆಯೇ ಹೊರತು ಕಾವಿಯನ್ನು ತೊಟ್ಟು ಇತರೆ ಜಾತಿಗಳನ್ನು ತೆಗಳುವ, ಇದೇ ಮಣ್ಣಿಿನ ಆಚಾರ-ವಿಚಾರ, ನಂಬಿಕೆ, ಶ್ರದ್ಧೆೆಗಳನ್ನು ಅವಹೇಳನ ಮಾಡುವ, ದೇವರುಗಳನ್ನೇ ದೂಷಿಸುವ, ಕಾವಿ ಧರಿಸಿದ ಕೂಡಲೇ ಸಾಕ್ಷಾತ್ ವರ್ಲ್‌ಡ್‌ ಫೇಮಸ್ ಸ್ವಾಾಮೀಜಿಗಳಂತೆ ಭಾವಿಸಿಕೊಂಡು ಉನ್ಮಾಾದದ ಹೇಳಿಕೆ ನೀಡುವ, ಸಿನಿಮಾ ನಟನಟಿಯರ ಕುರಿತು ಚಿಲ್ಟುಗಳಂತೆ ಮಾತನಾಡುವ ರೆಡಿಮೇಡ್ ಸ್ವಾಾಮೀಜಿಗಳಂಥ ತಲೆಕೆಟ್ಟ, ವಿಕೃತ, ತಿಕ್ಕಲು ಸ್ವಾಾಮೀಜಿಗಳಲ್ಲ. ಇದೇ ಆದಿಚುಂಚನಗಿರಿಯ ಹಿಂದಿನ ಶ್ರೀಗಳಾದ ಶ್ರೀಬಾಲಗಂಗಾಧರನಾಥ ಸ್ವಾಾಮೀಜಿಗಳು ತಮ್ಮ ಅವಧಿಯಲ್ಲಿ ಮಾಡಿದ ಬಹುದೊಡ್ಡ ಧರ್ಮ ಕರ್ತವ್ಯವೆಂದರೆ ಕುತಂತ್ರದ ಬಲೆಗೆ ಸಿಲುಕಿ ಕೈಸ್ತ ಧರ್ಮಕ್ಕೆೆ ಮತಾಂತರ ಹೊಂದಿದ್ದ ಸುಮಾರು ಐದುಸಾವಿರ ಹಿಂದುಗಳನ್ನು ಮರಳಿ ಮಾತೃಧರ್ಮಕ್ಕೆೆ ಕರೆತಂದದ್ದು. ಇದು ಸಾಮಾನ್ಯ ಕಾರ್ಯವಲ್ಲ. ಇಂತಹ ಕಾರ್ಯವನ್ನು ಇಂದಿನ ಎಲ್ಲಾಾ ಜಾತಿಯ ಸ್ವಾಾಮೀಜಿಗಳು ಮಾಡಿ ತೋರಿಸುವ ಬದ್ಧತೆಯನ್ನು ತೋರಬೇಕಿದೆ. ಅದರ ಮನ್ನುಡಿಯಾಗಿ ಮೊನ್ನೆೆಯಂತೆ ಎಲ್ಲಾಾ ಜಾತಿಯ ಮಠದ ಸ್ವಾಾಮೀಜಿಗಳು ಒಂದೇ ವೇದಿಕೆಯಲ್ಲಿ ಸೇರುವ ಧರ್ಮ ಸಂಸತ್‌ನ್ನು ನಿಗದಿತವಾಗಿ ನಡೆಸಬೇಕಾದ ಅಗತ್ಯವಿದೆ.

ಏಕೆಂದರೆ ಹಿಂದು ದಲಿತ ಕುಟುಂಬದವರು ತಮಗೆ ದೇವಾಲಯದೊಳಗೆ ಪ್ರವೇಶ ಸಿಗದೇ ಹೋದರೆ ಮತಾಂತರಗೊಳ್ಳುವುದಾಗಿ ಸಮಾಜಕ್ಕೆೆ ಮತ್ತು ಮೇಲ್ವರ್ಗದ ಮಡಿವಂತರಿಗೆ ಕಾಲಕಾಲಕ್ಕೆೆ ಎಚ್ಚರಿಕೆ ನೀಡುತ್ತಲೇ ಬಂದಿದ್ದಾಾರೆ. ಮೊನ್ನೆೆಯಷ್ಟೇ ಚಿತ್ರದುರ್ಗದ ಸಂಸದರಿಗೇ ಕೇರಿಯೊಳಗೆ ಪ್ರವೇಶ ನಿಷೇಧಿಸಿದ್ದಾಾರೆ ಎಂದರೆ ಇನ್ನು ಸಾಮಾನ್ಯ ಅನಕ್ಷರಸ್ಥರ ಗತಿಯೇನು?. ಇದು ನಿಜಕ್ಕೂ ಹಿಂದು ಧರ್ಮದೊಳಗಿನ ದುರಂತ. ಇಸ್ಲಾಾಮ್‌ನಲ್ಲಿ ಭಯೋತ್ಪಾಾದನೆ, ಹಿಂಸೆ, ಹತ್ಯೆೆಗಳಂತೆ, ಕ್ರಿಿಶ್ಚಿಿಯನ್ ಧರ್ಮದಲ್ಲಿನ ಅಭದ್ರತೆ, ಮತಾಂತರವೆಂಬ ಕಳಂಕದ ಕೃತ್ಯದಷ್ಟೇ ಹಿಂದು ಧರ್ಮದಲ್ಲಿ ಈ ಅಸ್ಪಶ್ಯತೆ ಮಡಿವಂತಿಕೆ ಎಂಬುದು ಧರ್ಮಕ್ಕೇ ಗಂಡಾಂತರವಾಗಿ ಕಾಡುತ್ತಿಿದೆ.

ಕಳೆದ ವಾರವಷ್ಟೇ ಕೊಳ್ಳೆೆಗಾಲ ಹನೂರಿನಲ್ಲಿ ‘ನಿಲ್ಲದ ಮತಾಂತರ’ ಎಂಬ ವರದಿಗಳಾಗಿವೆ. ದಲಿತರ ಮೇಲಿನ ದೌರ್ಜನ್ಯಗಳ ಕುರಿತು ವರದಿಯಾಗಿವೆ. ದಲಿತರಿಗೆ ದೇವಾಲಯದೊಳಗೆ ಪ್ರವೇಶ ನಿಷೇಧಿಸಿರುವಂತಹ ಪ್ರಕರಣಗಳು ಹಿಂದು ಧರ್ಮದ ಬುಡಕ್ಕೇ ಪೆಟ್ಟಾಾಗುವಂಥದ್ದು. ಇಂತವರ ನಿರಾಶೆಗಳನ್ನೇ ಬಂಡವಾಳವಾಗಿಸಲು ಮತಾಂತರದ ಸಮಯಸಾಧಕರು ಬಕಪಕ್ಷಿಯಂತೆ ಕಾಯುತ್ತಿಿರುತ್ತಾಾರೆ. ಇವರ ಕುತಂತ್ರಕ್ಕೆೆ ದಲಿತ, ಪರಿಶಿಷ್ಟ ಪಂಗಡ ಕೆಳವರ್ಗವೆಂಬುದು ಮೊದಲ ಆದ್ಯತೆ ಅಷ್ಟೆೆ.

ಆದರೆ ಮುಗ್ಧ, ಅನಕ್ಷರಸ್ಥ ಅಮಾಯಕ, ಯಾವ ವ್ಯಕ್ತಿಿ ಸಿಕ್ಕಿಿ ಬಿದ್ದರೂ, ಅವರಿಗೆ ಶಿಲುಬೆಯೇ ಗತಿ. ‘ನೀವು ಪೂಜಿಸುವ ಮಾರಮ್ಮ, ಕಬ್ಬಾಾಳಮ್ಮ, ಅಣ್ಣಮ್ಮ ಇವರೆಲ್ಲ ದೇವರಲ್ಲ. ಏಕೆಂದರೆ ದೇವರು ಯಾವತ್ತೂ ರಕ್ತ ಕುಡಿಯೋಲ್ಲ, ರಕ್ತ ಕುಡಿಯೋದೇನಿದ್ರು ರಾಕ್ಷಸರು. ನೀವು ರಾಕ್ಷಸರಿಗೆ ಪೂಜೆ ಮಾಡ್ತೀರಿ, ಇನ್ನು ನೀವು ದೇವಸ್ಥಾಾನಕ್ಕೆೆ ಹೋಗ್ತೀರಿ. ಅಲ್ಲಿಗೆ ತೆಂಗಿನಕಾಯಿ, ಬಾಳೇಹಣ್ಣು, ಹೂವು, ಕರ್ಪೂರಕಡ್ಡಿಿ ಇದಕೆಲ್ಲ ಹಣಕೊಟ್ಟು, ನಂತರ ಪೂಜಾರಿಯ ತಟ್ಟೆೆಗೆ ಕಾಸು ಹಾಕಿ, ಹುಂಡಿಗೂ ಹಾಕಿ ಕೊನೆಗೆ ಚಪ್ಪಲಿ ಕಾಯುವವರಿಗೂ ಹಣ ಕೊಡ್ತೀರಿ. ಅದರಲ್ಲೂ ಕೆಲ ದೇವಸ್ಥಾಾನಗಳಲ್ಲಿ ನಿಮಗೆ ಪ್ರವೇಶನೇ ಕೊಡಲ್ಲ. ಆದರೆ ನಮ್ಮ ದೇವಸ್ಥಾಾನದಲ್ಲಿ ಆಗಿಲ್ಲ, ನಿಮ್ಮ ಕಷ್ಟ ನೋಡಿ ನಮ್ಮ ದೇವರ ದೇಹದಿಂದಲೇ ರಕ್ತ ಹರಿಯುತ್ತೆೆ. ನಮ್ಮ ದೇವಸ್ಥಾಾನಕ್ಕೆೆ ಬನ್ನಿಿ. ಅಲ್ಲಿ ನಿಮಗೆ ಯಾವ ಖರ್ಚು ಇಲ್ಲ, ನಿಮ್ಮ ಕಾಯಿಲೆ ಕಷ್ಟ ದುಖಃ ಎಲ್ಲವನ್ನೂ ನಮ್ಮ ಏಸಪ್ಪ ಕಳಿತಾನೆ. ನೀವು ಬಂದು ಏಸಪ್ಪನಿಗೆ ಪ್ರಾಾರ್ಥನೆ ಮಾಡಿದ್ರೆೆ ಸಾಕು, ನಿಮ್ಮ ಸಕ್ಕರೆ ಕಾಯಿಲೆ ವಾಸಿ ಆಗುತ್ತೆೆ.

ನಮ್ಮ ದೇವಸ್ಥಾಾನದಲ್ಲಿ ನಿತ್ಯ ಬ್ರೆೆಡ್ಡು, ಹಾಲು ಕೊಡ್ತಿಿವಿ. ನೀವು ಬನ್ನಿಿ, ನಿಮ್ಮ ಮನೆಯವರನ್ನೂ ಕರ್ಕೊೊಂಡು ಬನ್ನಿಿ, ನಿಮ್ಮ ಅಕ್ಕಪಕ್ಕದವರಿಗೂ ಇದೆಲ್ಲಾಾ ಹೇಳಿ. ನಿಮ್ಮ ಮಾರಮ್ಮನೇ ನಮ್ಮ ಮೇರಿಯಮ್ಮ, ನಿಮ್ಮ ತಿಮ್ಮಪ್ಪಾಾನೇ ನಮ್ಮ ಏಸಪ್ಪ. ನಮ್ಮ ಮೇರಿಯಮ್ಮ ನಿಮ್ಮನ್ನ ನರಕದಿಂದ ಸ್ವರ್ಗಕ್ಕೆೆ ಕಳಿಸ್ತಾಾರೆ ಬೇಕಾದರೆ ನಿಮ್ಮ ಮನಗೆ ಬಂದು ನಾವೆಲ್ಲಾಾ ಅರ್ಥಮಾಡಿಸ್ತಿಿವಿ’

ಹೀಗಿರುತ್ತದೆ, ನಮ್ಮ ಬೆಂಗಳೂರಿನಲ್ಲೇ ನಡೆಯುತ್ತಿಿರುವ ಸೌಮ್ಯ ಮತಾಂತರದ ಮೊದಲ ಅಸ್ತ್ರ. ಇವುಗಳನ್ನೆೆಲ್ಲಾಾ ಸಮಗ್ರವಾಗಿ ತಿಳಿಯಬೇಕಾದರೆ, ನಾವು ಕಳೆದ ಇಪ್ಪತ್ತೈದು ವರ್ಷಗಳ ನಂತರ ನಿರ್ಮಾಣವಾದ ಚರ್ಚ್ ಅಥವಾ ದಿಢೀರ್ ಪ್ರಾಾರ್ಥನಾ ಮಂದಿರಗಳ ಇತಿಹಾಸವನ್ನು ಅವಲೋಕಿಸಿದರೆ ಸಾಕು. ಹಿಂದೆ ಕೇವಲ ಗುಡಿ ಇದ್ದ ಪ್ರದೇಶದಲ್ಲಿ ಕ್ರಿಿಶ್ಚಿಿಯನ್‌ರೇ ಇಲ್ಲದಿದ್ದಾಾಗ ನಂತರ ಹತ್ತಾಾರು ವರ್ಷಗಳಲ್ಲಿ ಇಲ್ಲಿ ಚರ್ಚ್ ಒಂದರ ಅವಶ್ಯಕತೆ ಕೂಡಿಬರುತ್ತದೆಂದರೆ, ಅದರ ಹಿಂದಿನ ಬೆಳವಣಿಗೆಯೇ ಮತಾಂತರದ ಯಶಸ್ಸಿಿನ ಒಟ್ಟಾಾರೆ ಸಾಧನೆಯೇ ಆಗಿರುತ್ತದೆ.

ಒಂದು ಪ್ರಾಾರ್ಥನಾ ಮಂದಿರ ನಿರ್ಮಾಣದ ಹಿಂದೆ ಹಲವು ವರ್ಷಗಳ ಧರ್ಮ ಪರಿವರ್ತಕರ ಪರಿಶ್ರಮದ ಒಟ್ಟಾಾರೆ ಫಲಿತಾಂಶವಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಇದಕ್ಕೆೆ ತಾಜಾ ಉದಾಹರಣೆ, ಒಂದು ಕಾಲದಲ್ಲಿ ಹಿಂದು ಧರ್ಮದ ಹೃದಯವೆನಿಸಿದ್ದ ಇಂದಿನ ಹಂಪಿ-ಹೊಸಪೇಟೆ ರಸ್ತೆೆಯಲ್ಲಿ ಇಷ್ಟು ವರ್ಷಗಳು ಇಲ್ಲದಿದ್ದ ಜಾಗದಲ್ಲಿ ರಾತ್ರೋೋರಾತ್ರಿಿ ಅಲ್ಲಿ ಚರ್ಚ್ ಒಂದು ತಲೆ ಎತ್ತಿಿ ನಿಂತಿದೆ. ಒಂದು ಕಡೆ ಇಸ್ಲಾಾಂ ಭಯೋತ್ಪಾಾದಕರು ದಾಳಿ, ಬಾಂಬ್ ಸ್ಫೋೋಟಗಳ ಮೂಲಕ ಹಿಂದುಗಳನ್ನು ಗುರಿಯಾಗಿಸಿಕೊಂಡು ಹಿಂದುಗಳನ್ನು ಕೊಲ್ಲುತ್ತಿಿದ್ದರೆ, ಇನ್ನೊೊಂದೆಡೆ ಕ್ರಿಿಶ್ಚಿಿಯನ್ ಮಿಷನರಿಗಳು ಮತಾಂತರದ ಮೂಲಕ ಹಿಂದು ಧರ್ಮವನ್ನೇ ಕೊಲ್ಲುತ್ತಿಿದೆ. ನಮ್ಮ ದೇಶದಲ್ಲಿ ಭ್ರಷ್ಟಾಾಚಾರದಂತೆ ಮತಾಂತರವೂ ಅಸಹ್ಯ ಮತ್ತು ಸಹ್ಯವಾಗಿ ನಡೆಯುತ್ತಲೇ ಇದೆ.

ಭಾರತದ ಸಂವಿಧಾನದಲ್ಲಿ ಒಬ್ಬ ವ್ಯಕ್ತಿಿ ಒಂದು ಧರ್ಮದಿಂದ ಇನ್ನೊೊಂದು ಧರ್ಮಕ್ಕೆೆ ಸ್ವ ಇಚ್ಛೆೆಯಿಂದ ಮತಾಂತರಗೊಳ್ಳುವುದನ್ನು ಒಪ್ಪಿಿದೆಯೇ ಹೊರತು ಇನ್ನೊೊಂದು ಧರ್ಮಕ್ಕೆೆ ಮತಾಂತರಿಸುವುದನ್ನು ಒಪ್ಪುುವುದಿಲ್ಲ. ಯಾವುದೇ ಧರ್ಮದ ಯಾವುದೇ ವ್ಯಕ್ತಿಿಯು ತನ್ನ ಧರ್ಮವನ್ನು ಪೂಜಿಸುವುದು ಪರಧರ್ಮವನ್ನು ಪ್ರೀತಿಸುವುದು ಸೃಷ್ಟಿಿ ಧರ್ಮ. ಆದರೆ ಒಂದು ಧರ್ಮ ಮತ್ತೊೊಂದು ಧರ್ಮದ ಮೇಲೆ ಹುನ್ನಾಾರವಿರಿಸಿ ಆಕ್ರಮಣ ಮಾಡುವುದು, ಹಾಗೆಯೇ ಬಲವಂತ ಅಥವಾ ಆಮಿಷ ಅಥವಾ ಪ್ರಚೋದನಾತ್ಮಕ ಮತಾಂತರ ಕಾನೂನಿನ ದೃಷ್ಟಿಿಯಲ್ಲಿ ಅಕ್ರಮ ಹಾಗೂ ಅಪರಾಧ.

ಒಬ್ಬ ಮನುಷ್ಯನಿಗೆ ಒಂದು ಜನ್ಮ, ಒಂದು ತಾಯಿ ಹಾಗೂ ಒಂದು ಧರ್ಮವೂ ಪ್ರಾಾಪ್ತವಾಗಿರುತ್ತದೆ. ಹಾಗೇ ಕಷ್ಟ-ಕಾರ್ಪಣ್ಯಗಳು ರೋಗ-ರುಜಿನ ಕಾಯಿಲೆಗಳು ಇಲ್ಲಾಾ ಧರ್ಮದ ಶ್ರೀಮಂತರಿಗೂ, ಬಡವರಿಗೂ ಅಭೇದವಾಗಿ ಬರುತ್ತದೆ. ಹಾಗೇ ಹೆತ್ತ ತಾಯಿ ಹೊತ್ತ ನೆಲದೊಂದಿಗೆ ಧರ್ಮವು ವ್ಯಕ್ತಿಿಯನ್ನು ರೂಪಿಸುತ್ತದೆ. ಆದರೆ ಇದು ಭಾರತ. ಈ ನೆಲದ ಮೂಲ ಧರ್ಮ ಸನಾತನ ಧರ್ಮ (ಹಿಂದುಧರ್ಮ). ಇಲ್ಲಿರುವ ಬಹುಸಂಖ್ಯಾಾತ ಹಿಂದುಗಳಿಗೆ ಇರುವುದು ಇದೊಂದೇ ದೇಶ. ಇಲ್ಲಿ ಹಿಂದುಗಳು ಅಲ್ಪ ಸಂಖ್ಯಾಾತರಾದರೆ, ಅದು ವಿಶ್ವದ ಭೂಪಟದಲ್ಲೇ ನಾಶವಾದಂತೆ.

ಒಂದು ಕಠೋರ ಸತ್ಯವೆಂದರೆ ಹಿಂದು ಧರ್ಮದ ಮೇಲಿನ ಇಷ್ಟೆೆಲ್ಲಾಾ ಅಪಮಾನಗಳು, ದಾಳಿಗಳು, ದೌರ್ಜನ್ಯಗಳಿಗೆ ಮೂಲ ಕಾರಣ ಬೇರಾರೂ ಅಲ್ಲ, ಕೇವಲ ಹಿಂದುಗಳೇ ಹೊರತು ಅನ್ಯರಲ್ಲ. ಹಿಂದುಗಳ ನಿರಭಿಮಾನ, ಸತ್ತ ಸ್ವಾಾಭಿಮಾನ, ತಿಳಿಗೇಡಿಗಳ ಮಡಿತನ, ಸ್ವಯಂದೌರ್ಬಲ್ಯಗಳೇ ಇಂದು ಹಿಂದುಗಳು ಜಾಗತಿಕ ಅಲ್ಪಸಂಖ್ಯಾಾತರಾಗುವ ದಿಕ್ಕಿಿನತ್ತ ಸಾಗುತ್ತಿಿದೆ. ಸದ್ಯಕ್ಕೆೆ ಹಿಂದು ಧರ್ಮದೊಳಗಿನ ಅಸ್ಪಶ್ಯತೆಗಳನ್ನು ನಿವಾರಿಸಬೇಕಾದ ಗುರುತರ ಹೊಣೆಗಾರಿಕೆಯನ್ನು ಇಂದಿನ ಎಲ್ಲಾಾ ಜಾತಿಗಳ ಮಠಾಧೀಶರು ಹೊರಬೇಕಾದ ಅನಿವಾರ‌್ಯತೆ ಇದೆ.

ಎಲ್ಲಾಾ ಜಾತಿಯ ಮಠಾಧೀಶರು ಒಂದೇ ವೇದಿಕೆಯಲ್ಲಿ ಕಲೆತು ಧರ್ಮವನ್ನು ಗಟ್ಟಿಿಗೊಳಿಸುವ ಉದಾರತೆಯನ್ನು ತೋರಿ ಜಾತೀಯತೆಯನ್ನು ದೂರಮಾಡಿ ಪರಸ್ಪರ ಮನೆಯ ಆಚೆಗಾದರೂ, ಹಿಂದುಗಳೆಲ್ಲ ಒಂದೇ ಎಂಬ ಮನಸ್ಥಿಿತಿಯನ್ನು ನಿರ್ಮಿಸಬೇಕಾದ ನೈತಿಕತೆ ತೋರಬೇಕಿದೆ. ನಮ್ಮ ನಾಡಿನಲ್ಲಿ ಜಾತಿಗೊಂದು ಉಪಜಾತಿಗೊಬ್ಬರು ಸ್ವಾಾಮೀಜಿಗಳು, ವೇದಿಕೆಗಳು, ಹಿತರಕ್ಷಣೆಗಳು ಜಾರಿಯಲ್ಲಿದ್ದರೂ, ಈ ಮತಾಂತರದ ಪಿಡುಗು ಕಾಣಿಸಿದರೂ ಕಾಣದ ಹಾಗೆ ಕಾರ್ಯನಿರತವಾಗಿರುವುದು ಸತ್ಯ. ಆದರೆ ನಮ್ಮ ಜಾತಿ ಸ್ವಾಾಮೀಜಿಗಳು ಇದನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಇನ್ನು ಕೆಲವರ್ಷಗಳ ನಂತರ ಇವರನ್ನು ನಮ್ಮ ಸ್ವಾಾಮೀಜಿಗಳು ಎಂದು ಆರಾಧಿಸುವ, ಪಾದಪೂಜೆ ಮಾಡುವ, ಕೊನೆಗೆ ಪಲ್ಲಕ್ಕಿಿ ಹೊರಲು ನಾಲ್ಕು ಮಂದಿ ಭಕ್ತರೂ ಸಿಗದಂತಾದರೆ ಆಶ್ಚರ್ಯವಿಲ್ಲ. ಇಂದಿನ ಮಡೆಸ್ನಾಾನ, ಪ್ರಾಾಣಿಬಲಿ ಇನ್ನಿಿತರ ಹಿಂದುಧರ್ಮದ ಪುರಾತನ ಜಾನಪದ ಪ್ರತೀತಿಗಳು, ಮೌಢ್ಯ, ನಂಬಿಕೆಗಳನ್ನು ನಿಷೇಧಿಸಲು ಯಾವುದೇ ಸರಕಾರ ಕಾನೂನು ಅಥವಾ ಬುದ್ಧಿಿಜೀವಿಗಳ ಅವಶ್ಯಕತೆಗಳೇ ಬೇಡ. ಕೇವಲ ಮತಾಂತರ ಒಂದೇ ಸಾಕು ಇವುಗಳನ್ನೇಲ್ಲಾಾ ತೊಡೆದು ಹಾಕುತ್ತದೆ.

ಆದ್ದರಿಂದ ಇವೆಲ್ಲಾಾ ಬೆಳವಣಿಗೆಗಳನ್ನು ಸರಕಾರ ಸೂಕ್ಷ್ಮವಾಗಿ ಅರ್ಥೈಸಿಕೊಂಡು ಹಿಂದುಧರ್ಮದ ಶ್ರೇಷ್ಠ ಕಾವಿಯನ್ನು ತೊಟ್ಟ ಎಲ್ಲಾಾ ಜಾತಿ, ಉಪಜಾತಿ ಸ್ವಾಾಮೀಜಿಗಳೂ ಪರಸ್ಪರ ವಿಶ್ವಾಾಸ ಬೆಳೆಸಿಕೊಂಡು ವಾರದಲ್ಲೊೊಮ್ಮೆೆ ಅನ್ಯಮಠ ಎಂಬ ಯೋಜನೆಯನ್ನು ತಂದು ಬೇರೆಬೇರೆ ಮಠಗಳಿಗೆ ಭೇಟಿ ನೀಡುವ ಪ್ರವೃತ್ತಿಿಯನ್ನು ರೂಢಿಸಿಕೊಂಡರೆ, ಸಮಾಜಕ್ಕೆೆ ಉತ್ತಮ ಸಂದೇಶ ರವಾನೆಯಾಗುತ್ತದೆ. ಜತೆಗೆ ಕಡ್ಡಾಾಯವಾಗಿ ದಲಿತ ಕೇರಿಗಳಲ್ಲಿ ಓಡಾಡಿ ಅಥವಾ ಅವರನ್ನು ಆಹ್ವಾಾನಿಸಿ ಅವರೊಂದಿಗೆ ಸ್ಪಂದಿಸುವ ತಾತ್ವಿಿಕತೆ ತೋರಿದರೆ ಅದಕ್ಕಿಿಂತ ದೊಡ್ಡ ಶ್ರಮ ಖಂಡಿತಾ ಸ್ವಾಾಮೀಜಿಗಳಿಗೆ ಇರಲಿಕ್ಕಿಿಲ್ಲ. ಜತೆಗೆ ಬದಲಾಗುತ್ತಿಿರುವ ಭಾರತಕ್ಕೆೆ ತ್ರಿಿವಳಿ ತಲಾಕ್ ನಿಷೇಧ ಕಾಯಿದೆಯಂತೆ ಮತಾಂತರ ನಿಷೇದ ಕಾಯಿದೆಯನ್ನೂ ಜಾರಿಗೆ ತರಲು ಸರಕಾರಗಳಿಗೆ ಒಕ್ಕೊೊರಲಿನ ಒತ್ತಾಾಯ ಮಾಡಬೇಕಾದ ಅವಶ್ಯಕತೆ ಇದೆ. ಅದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರು, ಮಾದರ ಚನ್ನಯ್ಯ ಮಠದ ಶ್ರೀ ಬಸವಮೂರ್ತಿ ಮಾದರಚನ್ನಯ್ಯ ಸ್ವಾಾಮೀಜಿಗಳು, ಶ್ರೀ ನಿರ್ಮಲಾನಂದನಾಥ ಶ್ರೀಗಳಂಥ ನೈಜ ಧಾರ್ಮಿಕ ಗುರುಗಳಿಂದ ಖಂಡಿತಾ ಸಾಧ್ಯ.