Friday, 7th October 2022

ಅ.11 ರಂದು ಕೊರೋನಾ ವಾರಿಯರ್ಸರಿಗೆ ನಿವೃತ್ತ ಸೈನಿಕರ ಒಕ್ಕೂಟದಿಂದ ಸನ್ಮಾನ

ಹೊಸಕೋಟಿ: ರಾಮದುರ್ಗ ತಾಲೂಕಿನ ಗುತ್ತಿಗೋಳಿ-ಹೊಸಕೋಟಿ ಗ್ರಾಮದ ನಿವೃತ್ತ ಸೈನಿಕರ ಒಕ್ಕೂಟದಿಂದ ಹೊಸಕೋಟಿ ವಲಯ ಮಟ್ಟದ ಕೊರೋನಾ ವಾರಿಯರ್ಸರಿಗೆ ಅಭಿನಂದನಾ ಮತ್ತು ಸತ್ಕಾರ ಸಮಾರಂಭವನ್ನು ಅ.11ರಂದು ಮುಂಜಾಣೆ 9-30ಕ್ಕೆ ಹೊಸಕೋಟಿಯ ಶ್ರೀ ರೇವಯ್ಯ ಶಿವಯೋಗಿಗಳ ಮಠದ ಆವರಣದಲ್ಲಿ ಏರ್ಪಡಿಸಲಾಗಿದೆ ಎಂದು ಸಂಘಟಕರು ಪ್ರಕಟನೆ ಯಲ್ಲಿ ತಿಳಿಸಿದ್ದಾರೆ.

ಸಮಾರಂಭದ ದಿವ್ಯ ಸಾನಿಧ್ಯವನ್ನು ಕುಳ್ಳೂರ ಶ್ರೀ ಶಿವಯೋಗಿಶ್ವರ ಮಠದ ಶ್ರೀ ಬಸವಾನಂದ ಸ್ವಾಮೀಜಿ, ತೊಂಡಿಕಟ್ಟಿ ಗಾಳೇಶ್ವರ ಮಠದ ಶ್ರೀ ಅಭೀನವ ವೆಂಕಟೇಶ್ವರ ಮಹಾರಾಜರು ವಹಿಸುವರು, ಗು-ಹೊಸಕೋಟಿಯ ಶ್ರೀ ರೇವಯ್ಯ ಶಿವಯೋಗಿ ಗಳ ಮಠದ ಶ್ರೀ ರೇವಯ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು.

ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಎಚ್.ಆರ್.ಮುದಿಗೌಡರ, ಎಸ್.ಆರ್.ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಚಾರ್ಯ ರಾದ ಎಲ್.ಎಸ್.ಕೊಳಚಿ, ವ್ಹಿ.ಎಲ್.ಮಲೇಣ್ಣಿ, ಪ್ರಗತಿ ಪರ ರೈತ ಬಿ.ಟಿ.ಪಾಟೀಲ, ರಾಮದುರ್ಗ ತಾಲೂಕಾ ವೈದ್ಯಾಧಿಕಾರಿ ಡಾ.ಮಹೇಶ ಚಿತ್ತರಗಿ, ಕಟಕೋಳ ಪಿಎಸ್‍ಐ ಶರಣೇಶ ಜಾಲಿಹಾಳ ಭಾಗಹಿಸುವರು. ವಿಷೇಶ ಉಪನ್ಯಾಸಕರಾಗಿ ಗೋಕಾಕ ಕೆ.ಎಲ್.ಇ.ಪಿಯು ಕಾಲೇಜು ಉಪನ್ಯಾಸಕಿ ಶಾಂತಾ ಬುಜನ್ನವರ ಭಾಗವಹಿಸುವರು.