Friday, 7th May 2021

ಭ್ರಷ್ಟತೆಯೆಂಬುದು ಸಮಾಜದ್ದೇ ಸೃಷ್ಟಿ!

ಟಿ. ದೇವಿದಾಸ್
ರಾಜಕೀಯವನ್ನು ಬಿಟ್ಟು ಬದುಕುವುದು ಯಾರಿಗೂ ಸಾಧ್ಯವಿಲ್ಲ. ಆದರೆ ರಾಜಕೀಯದ ಹೊರತಾಗಿ ಉಳಿಯುವುದಕ್ಕೆೆ ಸಾಧ್ಯವಿದೆ. ಹಾಗೆ ಬದುಕುತ್ತಿಿರುವವರು ಅಸಂಖ್ಯ ಪ್ರಮಾಣದಲ್ಲಿ ಈ ದೇಶದಲ್ಲಿದ್ದಾಾರೆ. ಅದು ಹೇಗೆಂದರೆ ನಮ್ಮ ಪಾಡಿಗೆ ನಾವು ಬದುಕಿದರಾಯಿತು. ಆದರೆ ಹೀಗೆ ಬದುಕುವಾಗಲೂ ಕೂಡ ನೂರಕ್ಕೆೆ ನೂರು ರಾಜಕಾರಣದ ಸ್ಪರ್ಶವೇ ಇಲ್ಲದೆ ಹೊರಗಿರಲು ಸಾಧ್ಯವಿಲ್ಲ. ಮನೆಯಿಂದ ಹೊರಗೆ ಕಾಲಿಟ್ಟರೆ ಈ ರಾಜಕೀಯವೆಂಬುದು ಬ್ರೂಟಲ್ ಬಾಸ್ ನಂತೆ ನಮ್ಮನ್ನು ಹಿಂಬಾಲಿಸುತ್ತದೆ. ಹೋಗಲಿ ಬಿಡಿ ಅಂತ ಬಿಟ್ಟರೂ ಬಿಡದ ಇದರ ಬಂಧನದಿಂದ ಯಾರಿಗೂ ಬಿಡುಗಡೆಯೇ ಇಲ್ಲ. ಯಾಕೆಂದರೆ, ನಾವೆಲ್ಲ ಕೇವಲ ಒಂದು ವ್ಯಕ್ತಿಿಯಾಗಿ ಬದುಕಲಾರೆವು.

ನಮ್ಮನ್ನು ಕೇಂದ್ರವಾಗಿರಿಸಿಕೊಂಡೇ ಕುಟುಂಬ-ಸಮಾಜ-ಗ್ರಾಾಮ-ತಾಲೂಕು-ಜಿಲ್ಲೆ-ರಾಜ್ಯ-ದೇಶ ರಚನೆಯಾಗಿ ಈ ಬಂಧದಲ್ಲೇ ನಾವೆಲ್ಲಾ ಬದುಕುತ್ತಿಿದ್ದೇವೆ. ನಾವೇ ರಚಿಸಿ ಒಪ್ಪಿಿ ಸ್ವೀಕರಿಸಿದ ಸಂವಿಧಾನವು ನಿರ್ದಿಷ್ಟ ಪಡಿಸಿದ ಹಕ್ಕು ಬಾಧ್ಯತೆಗಳ ಅಡಿಯಲ್ಲಿ ಕಾನೂನುಗಳ ವ್ಯಾಾಪ್ತಿಿಯಲ್ಲಿ ಬದುಕುತ್ತಿಿದ್ದೇವೆ. ಹೌದು. ದೇಶದ ಪ್ರಜೆಯಾಗಿ ಪ್ರತಿಯೊಬ್ಬರೂ ಬದುಕುವುದು ಹೀಗೆಯೇ. ಬದುಕಬೇಕಾಗಿರುವುದು ಹೀಗೆಯೇ. ನಾವು ರಚಿಸಿಕೊಂಡ ಪ್ರಜಾಪ್ರಭುತ್ತ್ವ ವ್ಯವಸ್ಥೆೆಯಲ್ಲಿ ಇದು ಸರಿಯಾದ ಸೂಕ್ತವಾದ ಕ್ರಮವೇ ಆಗಿ ದೃಢವಾಗಿದೆ. ಪ್ರಜೆಗಳಾಗಿ ನಾವೇ ಪ್ರಭುಗಳಾಗಿ ಈ ವ್ಯವಸ್ಥೆೆಯನ್ನು ಬಲಪಡಿಸಿಕೊಳ್ಳುವ ಜವಾಬ್ದಾಾರಿಯನ್ನು ಹೊತ್ತಿಿದ್ದೇವೆ. ಈ ಜವಾಬ್ದಾಾರಿಯ ನಿರ್ವಹಣೆಗಾಗಿ ನಾವೇ ಆರಿಸಿ ಕಳಿಸಿದ ನಮ್ಮ ಪ್ರತಿನಿಧಿಗಳೇ ಸೇರಿ ಮಾಡಿಕೊಂಡ ಸರಕಾರವನ್ನು ಬೆಂಬಲಿಸುತ್ತಾಾ ನಮ್ಮ ಜವಾಬ್ದಾಾರಿಯನ್ನು ನಿರ್ವಹಿಸುತ್ತೇವೆ. ಈ ಪ್ರಜಾಪ್ರಭುತ್ವ ಶ್ರೇಷ್ಠವಾದ ಆಡಳಿತದ ಮಾದರಿಯೆಂಬುದರಲ್ಲಿ ಎರಡು ಮಾತಿಲ್ಲ.

ಅದೇ ಸಂದರ್ಭದಲ್ಲಿ ಇದು ಅವ್ಯವಸ್ಥೆೆಯನ್ನು ಹುಟ್ಟುಹಾಕುವುದಕ್ಕೂ ಶ್ರೇಷ್ಠವಾಗಿಯೇ ಇದೆ. ನಮ್ಮಿಿಂದ ಆಯ್ಕೆೆಯಾದ ಜನಪ್ರತಿನಿಧಿಯೊಬ್ಬ ಸರಿಯಾಗಿ ತನ್ನ ಕಾರ್ಯ ನಿರ್ವಹಿಸುತ್ತಿಿಲ್ಲ ಅಥವಾ ಭ್ರಷ್ಟನಾಗಿದ್ದಾನೆ ಎಂಬುದು ನಮಗೆ ಗೊತ್ತಾಾದಾಗ ಅವನನ್ನು ಆ ಸ್ಥಾಾನದಿಂದ ಕೆಳಗಿಳಿಸುವ ಅಧಿಕಾರ ಈ ವ್ಯವಸ್ಥೆೆಯಲ್ಲಿಲ್ಲ. ಈ ಹಿಂಪಡೆಯುವ ಅಥವಾ ಕೆಳಗಿಸುವ ಅವಕಾಶ ಜನರಲ್ಲಿ ನೇರವಾಗಿ ಇಲ್ಲದ ಕಾರಣ ರಾಜಕಾರಣಿಗಳು ತ್ರಾಾಸದಾಯಕವಿಲ್ಲದೆ ಭ್ರಷ್ಟರಾಗುವುದು ಹೆಚ್ಚುತ್ತಲೇ ಇದೆ. ತಾನು ಎಂಎಲ್ಲೆ ಆಗಬೇಕು ಎಂಬ ಹಪಹಪಿ ಎಲ್ಲ ರಾಜಕೀಯ ಪಕ್ಷದಲ್ಲೂ ಇದೆ. ರಾಜಕಾರಣಿಯಾಗ ಬಯಸುವ ಎಲ್ಲರಲ್ಲೂ ಇದೆ. ಇದಕ್ಕೆೆ ಜಾತಿ ಮತ್ತು ಹಣದ ಅಗತ್ಯ ಮತ್ತು ಅನಿವಾರ್ಯತೆ ಇದೆಯೆಂಬುದೂ ಎಲ್ಲರಿಗೂ ಗೊತ್ತಿಿದೆ.

ಚುನಾವಣೆಗೆ ಲಕ್ಷ, ಕೋಟಿಗಟ್ಟಲೆ ಸುರಿಯುವವನು ಗೆದ್ದ ಮೇಲೆ ಒಳ್ಳೆೆಯ ರಾಜಕಾರಣಿ ಆಗುವುದಾದರೂ ಹೇಗೆ? ಅವನು ಭ್ರಷ್ಟನಾಗದೇ ಇರುವುದಾದರೂ ಹೇಗೆ ಸಾಧ್ಯ? ಸ್ವಚ್ಛ ಮಾಡಲು ಸಾಧ್ಯವೇ ಇಲ್ಲದಷ್ಟು ಮಲಿನವಾದ ಸರಿಹೊತ್ತಿಿನ ರಾಜಕೀಯದಲ್ಲಿ ಅವನು ನಿಷ್ಪಾಾಪಿಯಾಗಿರಲು ಹೇಗೆ ಸಾಧ್ಯ? ಅಥವಾ ಅವನಿಂದ ಕಾಸು ಹಣವನ್ನೂ ಪಡೆಯದೆ ಓಟು ಹಾಕುವ ಮನಸ್ಸು ಎಷ್ಟು ಮಂದಿ ಮತದಾರರಿಗೆ ಇದೆ? ಹಣ ಪಡೆಯದೆ ಓಟು ಹಾಕುವವರು ಇಲ್ಲವೇ ಇಲ್ಲ ಎಂದು ಹೇಳುವುದಕ್ಕೆೆ ನಾನು ಸಿದ್ಧನಿಲ್ಲ. ನನ್ನ ತಂದೆ ತಾಯಂದಿರು, ನಾನು, ನನ್ನಕ್ಕ ಈವರೆಗೂ ಒಬ್ಬೇ ಒಬ್ಬ ಅಭ್ಯರ್ಥಿಯಿಂದಲೂ ಹಣ ಪಡೆಯದೆ ನಮಗೆ ಯೋಗ್ಯರೆನಿಸಿದವರಿಗೆ ಓಟು ಹಾಕಿದ್ದೇವೆಂದು ಧೈರ್ಯವಾಗಿ ನಾನು ಹೇಳುತ್ತೇನೆ. ನಮ್ಮಂತೆಯೇ ಎಷ್ಟೋೋ ಸಾವಿರ ಲಕ್ಷ ಕೋಟಿಗಟ್ಟಲೆ ಜನ ಯೋಗ್ಯರಿಗೆ ಮತದಾನ ಮಾಡಿದವರಿದ್ದಾಾರೆ.

ಹೀಗೆ ಮತ ಹಾಕಿದವರು ತಮ್ಮ ಮತವನ್ನು ಯಾವತ್ತೂ ಯಾರಿಗೂ ಮಾರಿಕೊಳ್ಳದವರು. ಹೀಗಿರುವಾಗ ಯೋಗ್ಯರೇ ಆದರೂ ಜನಸೇವೆಯ ಹೆಸರಲ್ಲಿ ರಾಜಕಾರಣಕ್ಕೆೆ ಬಂದವರು ಹೆಚ್ಚಿಿನವರು ಭ್ರಷ್ಟರಾಗುವುದಕ್ಕೆೆ ಏನು ಕಾರಣ? ಅವರು ಹೀಗಾಗುವುದಕ್ಕೆೆ ಅವರು ಮಾತ್ರ ಕಾರಣರೇ? ಅಲ್ಲವೇ ಅಲ್ಲ.

ಭ್ರಷ್ಟತೆಯೆಂಬುದು ಸಮಾಜದ್ದೇ ಸೃಷ್ಟಿಿ. ಆದರೂ ಇಡಿಯ ಸಮಾಜ ಇದಕ್ಕೆೆ ಹೊಣೆಯಾಗುವುದಕ್ಕೆೆ ಸಾಧ್ಯವಿಲ್ಲ. ಅಧಿಕಾರ ರಾಜಕೀಯಕ್ಕೆೆ ಸ್ಪರ್ಧಿಸುವವರು ಎಲ್ಲರಿಗೂ ಹಣ, ಹೆಂಡದ ಆಮಿಷ ತೋರುವುದಿಲ್ಲ. ಓದು ಬರೆಹ ಬಾರದ ನಿರಕ್ಷರಿಗಳನ್ನು, ಹಳ್ಳಿಿಯ ಜನರನ್ನು ಹುಡುಕಿಕೊಂಡು ಹೋಗಿ ಅಂಥವರಿಗೆ ಮಾತ್ರ ಇಂಥ ಆಮಿಷ ಒಡ್ಡುತ್ತಾಾನೆ. ನಗರಗಳಲ್ಲೂ ಇಂಥವರು ಇದ್ದೇ ಇರುತ್ತಾಾರೆ. ಇಂಥವರಿಗೆ ದಿನದಿನದ ಬದುಕನ್ನು ದೂಡುವುದಷ್ಟೇ ಜೀವನದ ದೊಡ್ಡ ಚಿಂತೆಯೂ ಚಿಂತನೆಯೂ ಆಗಿರುತ್ತದೆ. ಆದ್ದರಿಂದ ಇವರನ್ನು ಎನ್ ಕ್ಯಾಾಶ್ ಮಾಡಿಕೊಂಡು ಯಾರೂ ಮೋಸ ಮಾಡಬಲ್ಲರು.

ಸುಲಭವಾಗಿ ಮೋಸಗೊಳಿಸಿ ಯಾವುದಕ್ಕೂ ಇಂಥವರನ್ನು ಬಳಸಿಕೊಳ್ಳಲು ಸಾಧ್ಯವಿದೆಯೆಂಬುದು ರಾಜಕಾರಣಿಗಳಿಗೆ ಪಕ್ಕಾಾ ಗೊತ್ತಿಿರುತ್ತದೆ. ಕೇವಲ ರಾಜಕಾರಣಿಗಳು ಮಾತ್ರವಲ್ಲ, ಯಾರೂ ಇವರನ್ನು ವಂಚಿಸಬಹುದು. ಆದ್ದರಿಂದ ಈ ದೇಶಕ್ಕೆೆ ಇಂಥವರ ಅಗತ್ಯ ಅನಿವಾರ್ಯತೆ ಯಾವಾಗಲೂ ಇರುವಂತೆ ರಾಜಕಾರಣಿಗಳು ನೋಡಿಕೊಳ್ಳುತ್ತಾಾರೆ. ಯಾಕೆಂದರೆ ಮುಖ್ಯವಾಗಿ ಇಂಥವರ ಅಗತ್ಯ ಮತ್ತು ಅನಿವಾರ್ಯತೆ ರಾಜಕಾರಣಗಳಿಗೆ ಇದ್ದೇ ಇರುತ್ತದೆ. ಮತ್ತು ಇವರನ್ನು ಹೀಗೆಯೇ ಇರುವಂತೆ ಅಂದರೆ ಇವರ ಬೇಕುಗಳಿಗೆ ಸದಾಕಾಲ ಕೊರತೆಯನ್ನಿಿಟ್ಟೇ ರಾಜಕಾರಣಿಗಳು ಸ್ಪಂದಿಸುತ್ತಾಾರೆ.

ಮುಖ್ಯವಾಗಿ ಇವರು ಶಾಲೆಗೆ ಹೋಗುವವರಲ್ಲ. ತಮ್ಮ ಬದುಕನ್ನು ಉದ್ಧರಿಸಿಕೊಳ್ಳಬೇಕೆಂಬ ಪ್ರಜ್ಞೆ ಇವರಲ್ಲಿ ಹುಟ್ಟಲಾರದು. ತಮ್ಮ ಬದುಕಿನಲ್ಲಿ ಇಂಥ ಅವಕಾಶವಾದಿ ರಾಜಕಾರಣಿಗಳಿಗೆ ಪ್ರವೇಶ ಕೊಡಬಾರದೆಂಬ ಎಚ್ಚರವೂ ಇವರಲ್ಲಿ ಇರುವುದಿಲ್ಲ. ಈ ಬಗೆಯ ಅರಿವು ಅವರಲ್ಲಿ ಎಂದೂ ಹುಟ್ಟದಂತೆ ರಾಜಕಾರಣಿಗಳು ಇವರಿಗೆ ಶಿಕ್ಷಣವನ್ನು ಕೊಡುವುದಿಲ್ಲ. ಹಾಗಂತ ಕೇವಲ ಭ್ರಷ್ಟ ರಾಜಕೀಯಕ್ಕೆೆ ಮಾತ್ರ ಇವರು ಬಲಿಪಶು ಆಗುವುದಿಲ್ಲ. ಮತಾಂತರವೆಂಬ ಹುನ್ನಾಾರಕ್ಕೆೆ ಬಲಿಯಾಗುವವರು ಇಂಥವರೇ! ಮತಾಂತರದ ತೆವಲಿರುವವರಿಗೆ ಇವರುಗಳೇ ಭೂರಿ ಭೋಜನವಾಗುತ್ತಾಾರೆ.

ತಮ್ಮ ಧರ್ಮದ ಸಂಖ್ಯೆೆಯನ್ನು ಹೆಚ್ಚಿಿಸಿಕೊಳ್ಳಬೇಕೆಂಬ ಧರ್ಮಾಂಧರು ಹುಡುಕುವುದು ಇಂಥ ಅಸಹಾಯಕ ಸ್ಥಿಿತಿಯಲ್ಲಿರುವ ಬಡವರನ್ನೇ! ಯಾಕೆಂದರೆ ಇಂಥವರಿಗೆ ಹಣದ ಅಗತ್ಯ ಅನಿವಾರ್ಯತೆ ಇರುತ್ತದೆ. ಅವರ ಈ ದೌರ್ಬಲ್ಯವನ್ನು ಅಂದರೆ ಬಡತನ, ನಿರಕ್ಷರತೆಯು ಅವರನ್ನು ದಾರಿ ತಪ್ಪಿಿಸುತ್ತದೆ. ದಾರಿ ತಪ್ಪುುವುದಕ್ಕೆೆ ಪ್ರೇರಣೆಯನ್ನು, ಪ್ರಚೋದನೆಯನ್ನು ನೀಡುತ್ತದೆ. ದಾರಿ ತಪ್ಪಿಿಸುವವರೇ ಸುತ್ತಲೂ ಇರುವಾಗ ಇವರಾದರೂ ಏನು ಮಾಡಲು ಸಾಧ್ಯವಿದೆ?

ಇವರಷ್ಟು ಬಡತನವಿಲ್ಲದ ಇವರಿಗಿಂತ ಸ್ವಲ್ಪ ಅನುಕೂಲ ಇರುವ ಬಡವರೆನಿಸಿಕೊಂಡ ಒಂದು ವರ್ಗ ಈ ದೇಶದಲ್ಲಿ ತುಂಬಾ ಪ್ರಮಾಣದಲ್ಲಿದ್ದಾರೆ. ಇವರಿಗೆ ಮೋಸ ಮಾಡುವುದು ಗೊತ್ತು, ಆದರೆ ತಾವು ಮೋಸ ಹೋಗುವುದೂ ಮಾತ್ರ ಗೊತ್ತಾಾಗುವುದಿಲ್ಲ. ಆದ ಮೋಸದಿಂದ ತಪ್ಪಿಿಸಿಕೊಳ್ಳಲೂ ಇವರಿಗೆ ಸಾಧ್ಯವಾಗುವುದಿಲ್ಲ. ಆಮಿಷಕ್ಕೆೆ ಒಳಗಾಗಿ ಮತವೇನೋ ಹಾಕುವ ಇವರಿಗೆ ಯಾರಿಗೆ ಮತ ಹಾಕಬಾರದೆಂಬ ಅರಿವು ಇರುವುದಿಲ್ಲ. ಯಾಕೆಂದರೆ ಪ್ರಾಾಥಮಿಕ ಹಂತದ ಓದು ಬರೆಹವನ್ನು ಅರ್ಧಂಬರ್ಧ ಮಾಡಿಕೊಂಡ ಇವರಲ್ಲಿ ಜ್ಞಾನವೂ ಅಷ್ಟೇ, ಪರಿಜ್ಞಾನವೂ ಅಷ್ಟಕ್ಕಷ್ಟೇ.

ಬೌದ್ಧಿಿಕವಾಗಿ ಇವರು ಬಲಿತಿರುವುದಿಲ್ಲ. ಮಾನಸಿಕವಾಗಿ ಇವರು ಪ್ರಬುದ್ಧರಾಗಿರುವುದಿಲ್ಲ. ದೇಶಪ್ರೇಮಕ್ಕೆೆ ಇವರಲ್ಲಿ ಮೌಲ್ಯವಿರುವುದಿಲ್ಲ. ಯಾವುದೇ ಜೀವನ ಮೌಲ್ಯಗಳ ಪ್ರಜ್ಞೆಯಿಲ್ಲದ ಈ ಎರಡೂ ವರ್ಗಗಳಲ್ಲಿ ದೇಶಪ್ರೇಮವನ್ನು ಹುಡುಕುವುದು ಅಪರಾಧವಾಗುತ್ತದೆ. ಈ ಎರಡೂ ವರ್ಗದ ಜನರನ್ನು ದುರುಪಯೋಗ ಪಡಿಸಿಕೊಳ್ಳಲು ಅಥವಾ ಸ್ವಾಾರ್ಥಕ್ಕೆೆ ಬಳಸಿಕೊಳ್ಳಲು ಇವರುಗಳ ಜಾತಿಯ ಅಗತ್ಯವಂತೂ ಖಂಡಿತ ಇರುವುದೇ ಇಲ್ಲ.

ಈ ಎರಡೂ ವರ್ಗಗಳನ್ನು ಹೊರತು ಪಡಿಸಿದ ಒಂದು ವರ್ಗ ಈ ದೇಶದಲ್ಲಿದೆ. ಆ ವರ್ಗಕ್ಕೆೆ ಉಳಿಯುವುದಕ್ಕೆೆ ಒಂದು ಮನೆ, ಎರಡು ಹೊತ್ತಿಿನ ಊಟಕ್ಕೆೆ ಕೊರತೆಯಿರುವುದಿಲ್ಲ. ಸರಕಾರ ಕಾಲಕಾಲಕ್ಕೆೆ ನೀಡುವ ಸೌಲಭ್ಯವನ್ನು ಬಳಸಿಕೊಳ್ಳುತ್ತಾಾ ಇದ್ದುದರಲ್ಲಿಯೇ ಹಾಸಿಗೆಯಿದ್ದಷ್ಟು ಕಾಲು ಚಾಚು ಎಂಬಂತೆ ಬದುಕುವ ವರ್ಗವಿದು. ಇವರುಗಳೇ ಈ ದೇಶದ ಅಸ್ಮಿಿತೆಯೆಂಬಷ್ಟು ದೊಡ್ಡ ಪ್ರಮಾಣದ ಸಂಖ್ಯೆೆ ಇವರದ್ದು. ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸಿ, ಇರುವ ಪಿತ್ರಾಾರ್ಜಿತವಾದ ಆಸ್ತಿಿಯಲ್ಲಿ ಕೃಷಿ ಮಾಡಿಕೊಂಡು ಬಂದ ಉತ್ಪನ್ನದಲ್ಲಿ ನಿತ್ಯದ ಬದುಕಿಗೆ ಬೇಕಾದಷ್ಟು ಖರ್ಚು ಮಾಡಿಕೊಂಡು ಉಳಿಕೆಯನ್ನೂ ಮಾಡಿ, ನದಿಗಳಲ್ಲಿ ಮಿಂದುಟ್ಟು ನಂಬಿಕೊಂಡ ದೇವರಿಗೆ ಹರಕೆಯನ್ನು ತೀರಿಸಿ ಬದುಕಿನ ಸಾರ್ಥಕ್ಯವನ್ನು ಕಾಣುವ ಇವರಲ್ಲಿ ದೇಶಹಿತದ ಚಿಂತೆ ಇದ್ದೇ ಇರುತ್ತದೆ.

ಜಾತಿಯ ಪ್ರಜ್ಞೆ ಮಡುಗಟ್ಟಿಿರುವ ಇವರುಅಪಾರವಾದ ಜಾತಿ ಅಭಿಮಾನ ಉಳ್ಳವರು. ಅಷ್ಟು ಸುಲಭವಾಗಿ ಇವರು ಜಾತಿಗೆಡುವವರಲ್ಲ. ಜಾತಿಯನ್ನು ಬಿಟ್ಟು ಬದುಕುವ ಶಕ್ತಿಿ ಇವರಿಗಿರುವುದಿಲ್ಲ. ಕಷ್ಟಕಾಲದಲ್ಲಿ ಜಾತಿ ಬಾಂಧವರು ಕೈಹಿಡಿಯುತ್ತಾಾರೆಂದು ಬಲವಾಗಿ ನಂಬಿ ಬದುಕುವ ಇವರು ತಮ್ಮ ಜಾತಿಯನ್ನು, ಅದರ ಮುಖಂಡನನ್ನು ಯಾವ ಸಂದರ್ಭದಲ್ಲೂ ಕೈ ಬಿಡಲಾರರು. ಆದರೆ ಇವರ ಜಾತಿಯ ಪ್ರೀತಿ ಮತ್ತು ಅಭಿಮಾನಕ್ಕೆೆ ವೈಚಾರಿಕ ಸ್ಪರ್ಶ ಇರುವುದಿಲ್ಲ. ಬಹುಮುಖ್ಯವಾದ ಸಂಗತಿಯೇನೆಂದರೆ, ಇವರಲ್ಲಿರುವ ಜಾತಿ ಮೋಹದ ಕಾಠಿಣ್ಯವೇ ರಾಜಕಾರಣಿಗಳಿಗೆ ಚುನಾವಣೆಯ ಹೊತ್ತಲ್ಲಿ ಪ್ರಬಲ ಅಸ್ತ್ರವಾಗಿ ಗೆಲ್ಲುವುದಕ್ಕೆೆ ಪ್ರಧಾನ ಜಾಡಾಗಿದೆ.

ಈ ಜಾಡನ್ನೇ ಹಿಡಿದುಕೊಂಡು ಜಾತಿ ಹೆಸರಿನಲ್ಲಿ ಬ್ಲಾಾಕ್ ಮೇಲ್ ಮಾಡುತ್ತಾಾ ಎಷ್ಟೋೋ ರಾಜಕಾರಣಿಗಳು ತಮ್ಮ ಕ್ಷೇತ್ರದಲ್ಲಿ ನಿರಂತರವಾಗಿ ಮೂರು ನಾಕು ಐದು ಆರು ಏಳೆಂಟು ಸಲ ಗೆಲ್ಲುತ್ತಿಿರುವುದು. ಆದರೆ ಇದು ಜಾತಿಯನ್ನು ಹುಚ್ಚರಂತೆ ಅಂಧರಾಗಿ ಪ್ರೀತಿಸುವವರಿಗೆ ಮಾತ್ರ ಅರ್ಥವಾಗಲೇ ಇಲ್ಲ! ಪ್ರಾಾಯಃ ಅರ್ಥವಾಗುವುದೂ ಇಲ್ಲ! ಜಾತಿಯ ಬಲದಿಂದ ಗೆಲ್ಲುವವನು ಎಷ್ಟೇ ದೊಡ್ಡ ಭ್ರಷ್ಟನಾದರೂ ಲಫಂಗನಾದರೂ ಅನೈತಿಕನಾದರೂ ಕೊಲೆಗಾರನಾದರೂ ಈ ಜಾತಿ ಬಾಂಧವರು ಮಾತ್ರ ಕುರುಡರಂತೆ ಅವನನ್ನು ಬೆಂಬಲಿಸುವುದನ್ನು ಮಾತ್ರ ಬಿಡಲಾರರು! ಹಾಗೆ ಬೆಂಬಲಿಸುವ ಇವರಿಗೆ ಬೇಕಾದುದನ್ನು ಮಾಡಿಕೊಟ್ಟ, ಮಾಡಿಕೊಡುವ ಅವನು ಪರಮ ಸಾತ್ವಿಿಕನಂತೆ ಕಂಡರೆ ತಪ್ಪೇನಿಲ್ಲ.

ದೇವರಂತೆ ಕಂಡು ಆರಾಧಿಸುವವರು ಇದ್ದಾರೆ. ತಾನು ಮಾಡಿದ ಭ್ರಷ್ಟಾಾಚಾರದಲ್ಲಿ ರೆಡ್ ಹ್ಯಾಾಂಡಾಗಿ ಸಿಕ್ಕಿಿಬಿದ್ದು ಕಾನೂನಿನಿಂದ ಬಚಾವಾಗಲು ಸಾಧ್ಯವೇ ಇಲ್ಲ ಎಂದು ಇಡಿ ಜಗತ್ತಿಿಗೇ ಗೊತ್ತಾಾದರೂ ಈ ಜಾತಿ ಮೋಹಿಗಳಿಗೆ ಮಾತ್ರ ಅದು ಅರ್ಥವೇ ಆಗುವುದಿಲ್ಲವೆ ಅಂತ ಯಾರಿಗೇ ಆದರೂ ಅನಿಸುತ್ತದೆ. ಖಂಡಿತವಾಗಿಯೂ ಅನಿಸುತ್ತದೆ. ಆದರೆ ನಿಜಾರ್ಥವೇನೆಂದರೆ ಅದೆಲ್ಲವೂ ಇಂಥ ಜಾತಿಮೋಹಿಗಳಿಗೆ ನಿಜಕ್ಕೂ ಅರ್ಥವಾಗಿರುತ್ತದೆ. ಅವನನ್ನು ವಿರೋಧಿಸಬೇಕು ಖಂಡಿಸಲೇಬೇಕು ಅಂತ ಮನಸ್ಸು ಹೇಳುತ್ತಿಿರುತ್ತದೆ.

ಇವರಿಗೆ ಪರಿಸ್ಥಿಿತಿ ಅರಿವಾಗುತ್ತದೆ. ಆದರೆ ಮನಸ್ಥಿಿತಿ ಬದಲಾಗುವುದಿಲ್ಲ. ಮುಖ್ಯವಾಗಿ ಇವರಲ್ಲಿ ನೈತಿಕವಾದ ಧೈರ್ಯ ಮಾತ್ರ ಸತ್ತು ಹೋಗಿರುತ್ತದೆ. ಯಾಕೆಂದರೆ ಅವನ ಭ್ರಷ್ಟಾಾಚಾರದಲ್ಲಿ ಇವರದೂ ಪಾಲೂ ಇರುತ್ತದೆ. ಅಪರೋಕ್ಷವಾಗಿ ಅವನು ಮಾಡಿದ ಭ್ರಷ್ಟಾಾಚಾರಕ್ಕೆೆ ಇವರೇ ಕಾರಣೀಭೂತರಾಗಿರುತ್ತಾಾರೆ. ತನ್ನ ಜಾತಿಯವರ ಆಸೆ ದುರಾಸೆಗಳನ್ನು ನೀಗಿಸಲು ಅವನಿಗೆ ಕೇವಲ ಜಾತಿಮೋಹದಿಂದ ಸಾಧ್ಯವಿಲ್ಲ.

ಹಣವೇ ಅಲ್ಲಿ ಮುಖ್ಯವಾಗಿ ಕೆಲಸ ಮಾಡಿರುತ್ತದೆ. ತನ್ನ ಜಾತಿಯವರಿಗೂ ಹಣ ಕೊಡಬೇಕು. ಅಲ್ಲದವರಿಗಂತೂ ಕೊಡಲೇಬೇಕು. ಇನ್ನು ಸದಾಕಾಲ ತನ್ನ ಸುತ್ತಲ ತಿರುಗುವ ಪಟಾಲಮ್ಮಿಿನ ಮೋಜು ಮಸ್ತಿಿಗೆ ಹಣ ಕೊಡಲೇಬೇಕು. ತನ್ನ ಕುಟುಂಬವನ್ನು ಮೊದಲಿಗಿಂತಲೂ ಚೆನ್ನಾಾಗಿ ನಿರ್ವಹಿಸಬೇಕು. ನಾಕು ಜನ ನಿಂತು ನೋಡುವಂಥ ಮನೆಯಾಗಬೇಕು. ಈಗ ತಾನೇ ಮಾರ್ಕೆಟ್ಟಿಿಗೆ ಬಂದ ಕೋಟಿ ಬೆಲೆಯ ಉತ್ತಮವಾದ ಕಾರು ತಗೋಬೇಕು.

ಹೆಂಡತಿ ಮಕ್ಕಳಲ್ಲಿ ಆವರೆಗೂ ಇಲ್ಲದ ಅತ್ಯಾಾಸೆಗಳನ್ನು ಈಡೇರಿಸಬೇಕು. ಮತ್ತು ಈ ತೀರದ ಅತ್ಯಾಾಸೆಗಳಿಗೆ ಪೂರ್ಣವಿರಾಮ ಇಡುವುದಕ್ಕೆೆ ಪ್ರಯತ್ನಿಿಸುತ್ತಲೇ ಇರಬೇಕು. ಅಂದರೆ ಈ ಪ್ರಯತ್ನಕ್ಕೆೆ ಪೂರಕವಾಗಿ ಹಣ ಸಂಗ್ರಹ ಮಾಡುವಂತೆ ಭ್ರಷ್ಟನಾಗೇ ಇರಬೇಕು. ಲಂಪಟ ಸುಖವನ್ನು ಆರೋಪಿಸಿಕೊಳ್ಳುತ್ತಾಾ ದಿನಗಳೆದಂತೆ ಲಂಪಟತನದಲ್ಲೇ ಸುಖವನ್ನು ಕಾಣಬಯಸುವ ರಾಜಕಾರಣಿಗೆ ಬರಬರುತ್ತಾಾ ತಾನು ತನ್ನವರು ಮಾತ್ರ ಸುಖಿಯಾಗಿರಬೇಕು ಎಂಬ ಸ್ವಾಾರ್ಥ ಗೊತ್ತಿಿಲ್ಲದೇ ಅಡರಿಕೊಳ್ಳುತ್ತದೆ. ವಾಮಮಾರ್ಗದಲ್ಲಿ ಹೊಂದಿದ ತನ್ನ ಪ್ರಾಾಪಂಚಿಕವಾದ ಐಹಿಕ ಸುಖಭೋಗಗಳ ಔನ್ನತ್ಯವನ್ನು ಪ್ರಶ್ನಿಿಸದವನನ್ನು, ಹೇಸಿಗೆ ಪಡದವನನ್ನು ತನ್ನ ಹಿಂಬಾಲಕರನ್ನಾಾಗಿ ಹುಡುಕಿಕೊಂಡು ನಿಯೋಜಿಸಿಕೊಳ್ಳುತ್ತಾಾನೆ.

ಕಾರಣ ತನ್ನ ಸಂಪತ್ತಿಿನ ರಕ್ಷಣೆಗಾಗಿ, ಕಷ್ಟಕಾಲದಲ್ಲಿ ತನ್ನ ಪರ ನಿಲ್ಲುವುದಕ್ಕೆೆ, ವಾದಿಸುವುದಕ್ಕೆೆ, ಸಮರ್ಥಿಸುವುದಕ್ಕೆೆ! ಸಮಾಜದಲ್ಲಿ ತಿರುಗುವಾಗ ಇಂಥ ಬಾಲಬಡುಕರನ್ನು ಆಚೆ ಈಚೆ, ಹಿಂದೆ ಮುಂದೆ ಇಟ್ಕೊೊಂಡು ಓಡಾಡುವ ಜನಪ್ರತಿನಿಧಿಗಳನ್ನು ಯಾರು ನೋಡಿಲ್ಲ ಹೇಳಿ? ಅವನು ಏನೇ ಅಸಂಬದ್ಧ ಹೇಳಿಕೆ ನೀಡಿದರೂ ಕೋಲೇ ಬಸವನಂತೆ ತಲೆಯಾಡಿಸುವ, ನಕ್ಕರೆ ನಗುವ, ಬಿದ್ದರೆ ಎತ್ತುವ, ಆಕ್ರಮಣವಾದರೆ ರಾಕ್ಷಸೀ ರೂಪವನ್ನು ಪ್ರದರ್ಶಿಸುವ ಈ ಪಡಪೋಷಿಗಳಿಗೆ ದುಡಿದು ತಿನ್ನುವ ತಾಕತ್ತು ಇರುವುದಿಲ್ಲ! ಅಷ್ಟಕ್ಕೂ ಚಮಚಾಗಿರಿ ಮಾಡಿ ಅಧರ್ಮದ ಸಂಪತ್ತನ್ನು ತಿಂದು ಬೆಳೆಸಿಕೊಂಡ ಕೊಬ್ಬಿಿನ ದೇಹಕ್ಕೆೆ ಶ್ರಮ ಸಂಸ್ಕೃತಿ ಹೇಗೆ ಗೊತ್ತಾಾಗಬೇಕು ಹೇಳಿ?

ತನ್ನೊೊಳಗಿನ ಭ್ರಷ್ಟತೆಯನ್ನು ಈಡೇರಿಸಿಕೊಳ್ಳಲು ಒಬ್ಬ ಭ್ರಷ್ಟನನ್ನು (ಜಾತಿಗೊಂದರಂತೆ) ಬೆಳೆಸಿಕೊಂಡ ಸಮಾಜಕ್ಕೆೆ ತಾನು ಬೆಳೆಸಿದ ಭ್ರಷ್ಟನಿಂದ ಮುಕ್ತಿಿಯನ್ನು ಪಡೆಯುವುದಕ್ಕೆೆ ಮೇಲ್ನೋೋಟಕ್ಕೆೆ ಪ್ರಯತ್ನಿಿಸಿದರೂ ಒಳಮನಸ್ಸು ಅಪ್ರಯತ್ನಪೂರಕವಾಗೇ ಇರುವಂತೆ ನೋಡಿಕೊಳ್ಳುತ್ತದೆ. ಇದಕ್ಕೆೆ ಕಾರಣ ಪ್ರತಿ ಸಮಾಜದಲ್ಲೂ ಸ್ವಾಾಭಾವಿಕವಾಗೇ ಇರುವ ಗುಣವಾದ ಸ್ವಾಾರ್ಥ.

ಇದರ ಅಭಿವ್ಯಕ್ತಿಿಯೇ ಭ್ರಷ್ಟತೆ. ಮಿತಿ ಮೀರಿದ ಹಣದಾಹ, ಐಹಿಕ ಭೋಗದ ಹಪಹಪಿ ಮತ್ತು ದುರಾಸೆಯನ್ನು ತನ್ನ ಗರ್ಭದಲ್ಲೇ ಇಟ್ಟುಕೊಂಡ ಸಮಾಜ ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೆ ಅಂಥ ಸಮಾಜದಲ್ಲಿ ಭ್ರಷ್ಟಾಾಚಾರಿಗಳು ಸೃಷ್ಟಿಿಯಾಗುತ್ತಲೇ ಇರುತ್ತಾಾರೆ. ರಕ್ತ ಬೀಜಾಸುರನಿಂದ ಹುಟ್ಟಿಿದ ಅಸುರ ಸಂತಾನದಂತೆ! ತಾನೇ ಸೃಷ್ಟಿಿಸಿದ ಭ್ರಷ್ಟಾಾಚಾರಿಗಳಿಗೆ ಬಿರುದು ಬಾವಲಿಗಳನ್ನು ಔದಾರ್ಯದಿಂದ ಅದೇ ಸಮಾಜ ದಯಪಾಲಿಸುತ್ತದೆ. ಕಟ್ಟಿಿಕೊಂಡ ಕೋಟೆ ಕೊತ್ತಲುಗಳು ಹಾಗೇ ಇರುವಂತೆ ರಾಜ ಮಹಾರಾಜರುಗಳು ನೋಡಿಕೊಳ್ಳುವ ರೀತಿಯಲ್ಲಿ ಸಮಾಜವೇ ತಮ್ಮ ಜಾತಿಯೆಂಬ ಕೋಟೆಯೊಳಗೆ ಒಬ್ಬ ಭ್ರಷ್ಟನನ್ನು ಸಾಕುತ್ತಿಿರುತ್ತದೆ. ಆದರೆ ಆ ಭ್ರಷ್ಟ ಮಾಡಿದ ಪಾಪ ಎಲ್ಲಿಗೆ ಹೋಗಬೇಕು? ಅದು ಎಲ್ಲಿಗೂ ಹೋಗುವುದಿಲ್ಲ! ಕಾದು ಕುಳಿತ ಚಾತಕ ಪಕ್ಷಿಯಂತೆ ಕಾದು ಕುಳಿತು ಒಂದು ದಿನ ಬಂದು ಆ ಪಾಪಿಯನ್ನೇ ಗಬಕ್ಕನೆ ಅಪ್ಪಿಿಕೊಳ್ಳುತ್ತದೆ.

ಆಗಲೂ ಈ ಸಮಾಜ ಆ ಕಡುಭ್ರಷ್ಟನನ್ನೇ ಬೆಂಬಲಿಸಿ ಸಮರ್ಥಿಸುತ್ತಾಾ ಹೂಳಿಡುತ್ತಾಾ ಗೂಳಿಡುತ್ತಾಾ ಅವನ ಪರ ಜಯ ಘೋಷಗಳನ್ನು ಕೂಗುತ್ತಾಾ ಸಾರ್ವಜನಿಕ ವಸ್ತುಗಳಿಗೆ ಬೆಂಕಿಯಿಡುತ್ತಾಾ ದೊಂಬಿಯೆಬ್ಬಿಿಸುತ್ತದೋ ಅಂಥ ಸಮಾಜದಲ್ಲಿ ಯಾವ ಮೌಲ್ಯವೂ ಜೀವಂತವಾಗಿರಲಾರದು. ಅಂಥ ಸಮಾಜವು ಭವಿಷ್ಯದ ದಕ್ಷ, ಪ್ರಬುದ್ಧ ನಾಯಕರನ್ನು ಸೃಷ್ಟಿಿಸಲಾರದು. ಒಮ್ಮೆೆ ಸರಿಹೊತ್ತಿಿನ ರಾಜಕಾರಣವನ್ನು ರಾಜಕೀಯ ಪಕ್ಷಗಳ ಸ್ಥಿಿತಿಗಳನ್ನು ಒಮ್ಮೆೆ ಸೂಕ್ಷ್ಮವಾಗಿ ಅವಲೋಕಿಸಿ ನೋಡಿ. ಬಿಜೆಪಿಯನ್ನು ಹೊರತು ಪಡಿಸಿದರೆ ಕೇಂದ್ರದ ಮಟ್ಟದಲ್ಲಿ ಯಾವ ರಾಜಕೀಯ ಪಕ್ಷಗಳಲ್ಲಿ ಪ್ರಬಲ ದಕ್ಷ ಪ್ರಬುದ್ಧ ನಾಯಕನನ್ನು ಗುರುತಿಸಲು ಸಾಧ್ಯವಾಗುತ್ತದೆ? ದಶಕಗಳ ಇತಿಹಾಸವಿರುವ ಕಾಂಗ್ರೆೆಸ್ ತನ್ನ ಪಕ್ಷದ ಅಧ್ಯಕ್ಷ ಹುದ್ದೆಗೆ ಒಬ್ಬ ಸಮರ್ಥ ನಾಯಕನಿಗಾಗಿ ಪರದಾಡುತ್ತಿಿದೆ. ನೆಹರೂ ಮನೆತನದಿಂದ ನಮಗೆ ಮುಕ್ತಿಿ ಬೇಡವೆಂದು ಆ ಪಕ್ಷದ ನೇತಾರರು ಸೋನಿಯಾ ಅವರಿಗೇ ಅಧ್ಯಕ್ಷರಾಗಲು ದುಂಬಾಲು ಬಿದ್ದಿದ್ದಾರೆ. ಎಂಥಾ ವಿಚಿತ್ರ ನೋಡಿ!

ಮೊನ್ನೆೆ ಬೆಳಬೆಳಗ್ಗೇನೇ ಬೆಂಗಳೂರಿನ ಇಸ್ರೋೋ ಕೇಂದ್ರದಲ್ಲಿ ಮೋದಿ ಚಂದ್ರಯಾನ-2 ಚಂದ್ರನ ಕಕ್ಷೆಯನ್ನು ತಲುಪುವಲ್ಲಿ ವಿಫಲವಾದ ಸಂದರ್ಭದಲ್ಲಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡುತ್ತಿಿದ್ದರು. ದೇಶವೇ ಹೆಮ್ಮೆೆ ಮತ್ತು ಅಭಿಮಾನ ಪಡಬೇಕಾದ ಹನ್ನೆೆರಡು ವರ್ಷಗಳ ಇಸ್ರೋೋ ತಪಸ್ಸಿಿನ ಸಾಧನೆಯನ್ನು ಶ್ಲಾಾಸುತ್ತಾಾ ಭಾವುಕರಾಗಿ ಮಾತಾಡುತ್ತಿಿದ್ದರು. ಪ್ರತಿಯೊಬ್ಬ ವಿಜ್ಞಾನಿಯ ಕೈಕುಲುಕಿ ಅವರ ಅಪ್ರತಿಮ ಸಾಧನೆಯನ್ನು ಕೊಂಡಾಡಿ ಧೈರ್ಯವನ್ನು ತುಂಬುತ್ತಿಿದ್ದರು. ಲಕ್ಷ ಕೋಟಿಗಟ್ಟಲೆ ಭಾರತೀಯರು ಇದನ್ನು ಕಣ್ತುಂಬಿ ಕೊಂಡರು. ನಮ್ಮ ದೇಶದ ನಿಜ ಹೀರೋಗಳ ಪರಿಶ್ರಮವನ್ನು ಜಗತ್ತಿಿಗೆ ಮೋದಿ ಮನವರಿಕೆ ಮಾಡುತ್ತಿಿದ್ದರು. ಕೊನೆಯಲ್ಲಿ ಇಸ್ರೋೋದಿಂದ ಬೀಳ್ಕೊೊಡುವಾಗ ಅಧ್ಯಕ್ಷ ಸಿವನ್ ಅವರನ್ನು ದೇಶದ ಪ್ರಧಾನಿಯೇ ಬರಸೆಳೆದು ಆಲಂಗಿಸಿಕೊಂಡು ಬೀಳ್ಕೊೊಟ್ಟಿಿದ್ದಂತೂ ಎಲ್ಲರ ಕಣ್ಣಲ್ಲೂ ಆನಂದಬಾಷ್ಪ ಸುರಿಸಿತು. ಆ ರೋಮಾಂಚನವಾದ ಭಾವನಾತ್ಮಕ ದೃಶ್ಯವನ್ನು ಮರೆಯಲು ಸಾಧ್ಯವೇ! ಒಬ್ಬ ನಿಜ ನಾಯಕನ ಮನಸು ಎಷ್ಟೊೊಂದು ಸೂಕ್ಷ್ಮಸಂವೇದಿಯಾಗಿರುತ್ತದೆ ಎಂದು ಅದು ಪ್ರತ್ಯಕ್ಷವಾಗಿ ಹೇಳುತ್ತಿಿತ್ತು.

ಸಮರ್ಥ ನಾಯಕನಲ್ಲಿ ಮಾತ್ರ ತಾಯೀಭಾವ ಇರುತ್ತದೆಂಬುದನ್ನು ಅದು ಸಾರಿ ಸಾರಿ ಹೇಳುತ್ತಿಿತ್ತು! ನಮ್ಮ ವಿಜ್ಞಾನಿಗಳ ಬಹುಶ್ರುತ ಸಾಧನೆಗೆ ಸಂದ ಮೋದಿಯ ಅಪ್ಪುುಗೆಯಲ್ಲಿ ಅಸಂಖ್ಯ ಭಾರತೀಯ ಮನಸುಗಳು ಅಭಿವ್ಯಕ್ತಿಿಸಿದ ಪ್ರೀತಿ ವಾತ್ಸಲ್ಯವಿತ್ತು. ಧೈರ್ಯವಿತ್ತು. ಸಾಂತ್ವನವಿತ್ತು. ಮತ್ತಷ್ಟು ಸಾಧನೆಗೆ ಪ್ರೇರಣೆಯಾಗಿತ್ತು. ಮೋದಿಯವರು ಸಿವನ್ ಅವರನ್ನು ಅಪ್ಪಿಿಕೊಂಡು ಹೇಳಿದ ಸಾಂತ್ವನದಲ್ಲಿ ದೇಶವೇ ಕಾಣುತ್ತಿಿತ್ತು. ಆ ಸನ್ನಿಿವೇಶದಲ್ಲಿ ಅವರ ಕಂಬನಿಗೆ ಸ್ಪಂದಿಸಿ ದೇಶವೇ ಕಂಬನಿ ಸುರಿಸಿದ್ದು ಮಾತ್ರ ಸುಳ್ಳಲ್ಲ!

ನಾ ಮಾಡಿದ ಕರ್ಮ ಬಲವಂತವಾದರೆ ನೀ ಮಾಡುವುದೇನು ಹರಿ ಎಂದಿದ್ದನಂತೆ ಹಿಂದೊಮ್ಮೆೆ! ಇದನ್ನೆೆಲ್ಲ ನೋಡುತ್ತಿಿರುವ ಸ್ವಲ್ಪವೇ ಹೊತ್ತಿಿನ ಮುಂಚೆ ಒಂದು ಚಾನೆಲಿನಲ್ಲಿ ಇಡಿಯಿಂದ ಬಂಧನಕ್ಕೊೊಳಗಾದ ಡಿಕೆಶಿ ಕಣ್ಣೀರು ಹಾಕುತ್ತಿಿದ್ದ ದೃಶ್ಯವೂ ಪ್ರಸಾರವಾಗುತ್ತಿಿತ್ತು! ಜನ್ಮ ಕೊಟ್ಟ ತಂದೆ-ತಾಯಿಗಳೊಂದಿಗೆ ಹಬ್ಬವನ್ನು ಆಚರಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಅಲವತ್ತುಕೊಂಡು ಡಿಕೆಶಿ ಅಳುತ್ತಿಿದ್ದ ದೃಶ್ಯವದು. ಡಿಕೆಶಿ ಕಣ್ಣೀರಲ್ಲಿ ಸ್ವಾಾರ್ಥದ ಲೇಪವನ್ನು ಬಿಟ್ಟರೆ ಬೇರೇನನ್ನು ಕಾಣಲು ಸಾಧ್ಯವಿದೆ ಹೇಳಿ? ಆದರೆ ಇವರೀರ್ವರ ಕಣ್ಣೀರಲ್ಲಿ ಏನನ್ನು ಕಾಣಲು ಸಾಧ್ಯವಿದೆ ಎಂದು ಹೇಳಲು ಯಾರಿಗೆ ಸಾಧ್ಯವಿದೆ? ಇವರದೇ ಸರಕಾರ ಅಸ್ತಿಿತ್ವದಲ್ಲಿದ್ದಾಗ ಇವರು ಮಂತ್ರಿಿಯಾಗಿಯೂ ಇದ್ದಾಾಗ ರೈತರನೇಕರು ಆತ್ಮಹತ್ಯೆೆಗೆ ಶರಣಾದರು. ಕೊಡಗಿನಲ್ಲಿ ಭೀಕರ ಜಲಪ್ರಳಯವಾಗಿ ಬದುಕನ್ನೇ ಕಳೆದುಕೊಂಡವರು ಕಣ್ಣೀರು ಬತ್ತು ಹೋಗುವಂತೆ ಕಣ್ಣೀರಿಟ್ಟರು. ಸಜೀವವಾಗಿ ಎಷ್ಟೋೋ ಜನರು ಮಣ್ಣುಪಾಲಾದರು. ಮೊನ್ನೆೆ ಮೊನ್ನೆೆ ನಡೆದ ಪ್ರಕೃತಿ ವಿಕೋಪದಲ್ಲಿ ಮತ್ತದೇ ದೃಶ್ಯಗಳು ರಾಜ್ಯವನ್ನು ದೇಶವನ್ನು ಹಿಂಜಿ ಹಿಪ್ಪೆೆ ಮಾಡಿಬಿಟ್ಟಿಿತು. ಆಗ ಡಿಕೆಶಿಯ ಕಣ್ಣಲ್ಲಿ ನೀರು ಸುರಿಯಲೇ ಇಲ್ಲ!

ಮಾಡಿದ ಪಾಪ ಯಾರನ್ನು ಬಿಟ್ಟಿಿದೆ ಹೇಳಿ! ಮಣ್ಣು ತಿನ್ನೋೋ ಕೆಲಸ ಮಾಡಿದ ಯಾವುದೇ ಪಕ್ಷವಿರಲಿ, ಎಷ್ಟೇ ದೊಡ್ಡ ವ್ಯಕ್ತಿಿಯಾಗಿರಲಿ ಒಂದಲ್ಲ ಒಂದು ದಿನ ಮಣ್ಣು ತಿನ್ನಲೇಬೇಕು. ಆಗ ಅಂಥ ಸಂದರ್ಭದಲ್ಲಿ ಧೈರ್ಯ ತುಂಬಿ ಸಾಂತ್ವನ ಪಡಿಸಲು ಬರುವವರೂ ಕೂಡ ಅಂಥದ್ದೇ ಮಣ್ಣು ತಿನ್ನೋೋ ಕೆಲಸ ಮಾಡುವವರೇ ಆಗಿರಬೇಕು. ಆಗಿರುತ್ತಾಾರೆ. ಈಗ ನಡೆಯುತ್ತಿಿರುವುದೂ ಅದೇ! ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಅಕ್ರಮ ಆಸ್ತಿಿ, ಹಣವನ್ನು ಲೂಟಿ ಮಾಡಿದವರಿಗೆ ಇಡಿಯವರು ಕಾನೂನಿನ ಗಾಳವನ್ನು ಬೀಸಿದ್ದಕ್ಕೆೆ ಆಗಬಾರದ ಅನಾಹುತವೇ ಸಂಭವಿಸಿ ಬಿಟ್ಟಿಿತು ಎಂದೂ ಪ್ರಜಾಪ್ರಭುತ್ವದ ಕಗ್ಗೊೊಲೆಯೇ ಆಯಿತೆಂದೂ ಊಳಿಡುವವರಿಗೆ ಅಕ್ರಮವಾದ ಸಂಪತ್ತನ್ನು ದೋಚುವಾಗ ಪ್ರಜಾಪ್ರಭುತ್ವ ನೆನಪಾಗುವುದೇ ಇಲ್ಲ. ಬಡವರ ಕಂಬನಿ ನೆನಪಾಗುವುದೇ ಇಲ್ಲ. ಯಾವುದೂ ಅರ್ಥವಾಗುವುದಿಲ್ಲ.

ತಾವು ಮಾಡುವುದು, ಮಾಡುತ್ತಿಿರುವುದು ಸಮಾಜದ್ರೋಹವೆಂದು ಅನಿಸುವುದಿಲ್ಲ. ಅಂದರೆ ಇವರಿಗೆಲ್ಲಾ ಆದರ್ಶ, ದೇಶಹಿತ, ಕಾಳಜಿಯೇ ಮುಂತಾದವುಗಳು ನೆನಪಾಗುವುದು ತಮಗೇನಾದರೂ ಕಷ್ಟ ಅಮರಿಕೊಂಡಾಗ ಮಾತ್ರ! ತಾವು ಮಾಡಿದ ಆಸ್ತಿಿಗಳೆಲ್ಲಾ ಸಕ್ರಮವಾಗಿಯೇ ಇದೆಯೆಂಬ ನೈತಿಕ ಧೈರ್ಯ ಇವರಿಗಿದ್ದರೆ ಯಾರ ಭಯವೇಕೆ? ಧೈರ್ಯವಾಗಿ ಎದುರಿಸಿದರೆ ಮುಗಿತು. ಅಷ್ಟಕ್ಕೂ ಡಿಕೆಶಿಯವರನ್ನು ಅಪರಾಧಿಯೆಂದೇನೂ ಇಡಿಯವರು ಹೇಳಿಲ್ಲ ತಾನೆ? ತನಿಖೆಗೆ ಸ್ಪಂದಿಸುತ್ತಿಿಲ್ಲ ಎಂಬುದಷ್ಟೇ ಅವರ ಆಪಾದನೆ, ಆರೋಪ. ಅಷ್ಟಕ್ಕೇ ಡಿಕೆಶಿಯವರ ಅಭಿಮಾನಗಳ ಹಾರಾಟವೇಕೆ? ಹೋರಾಟವೇಕೆ? ಬಸ್ಸುಗಳನ್ನು ಸುಟ್ಟುಹಾಕಿ ರೋಷಾವೇಶ ವ್ಯಕ್ತಪಡಿಸುವುದೇಕೆ? ಬಂದ್‌ಗೆ ಕರೆ ಕೊಡುವುದೇ ಏಕೆ? ಶಾಲಾ ಕಾಲೇಜುಗಳಲ್ಲಿ ಪಾಠವನ್ನು ನಿಲ್ಲಿಸುವಂತೆ ಮಾಡುವುದೇಕೆ? ಇದೆಲ್ಲಾ ಹೇಡಿತನದ, ದೌರ್ಬಲ್ಯದ ಅಭಿವ್ಯಕ್ತಿಿಯಲ್ಲವೇ?

ಕೊನೆಯ ಮಾತು: ಈ ಮಧ್ಯೆೆ ಫೋನ್ ಕದ್ದಾಲಿಕೆ ವಿಷಯವಂತೂ ಸಖತ್ತಾಾಗೇ ಸದ್ದು ಮಾಡುತ್ತಿಿದೆ. ಮಜಾ ಏನೆಂದರೆ ರಾಜಕಾರಣಿಗಳ ಹೆಸರಿನೊಂದಿಗೆ ಕೆಲವು ಸ್ವಾಾಮೀಜಿಗಳೂ ಇದ್ದಾಾರೆಂದು ಸುದ್ದಿ ಮಾಧ್ಯಮದಲ್ಲಿ ಕೇಳಿ ಬರುತ್ತಿಿದೆ. ಕೆಲವು ಭ್ರಷ್ಟಾಾಚಾರದ ಹಸಿಬಿಸಿ ಸುದ್ದಿಗಳು ಬೆಳಕಿಗೆ ಬಂದು ಅವುಗಳ ವಿರುದ್ಧ ಸಿಬಿಐ ಮೆಟ್ಟಿಿಲೇರಿದವರು ಇದ್ದಾರೆ. ಅಂತೂ ಇಡಿ, ಸಿಬಿಐದವರಿಗೆ ಪುರುಸೊತ್ತೇ ಇಲ್ಲದಂತೆ ತನಿಖೆ ಆರಂಭವಾಗುವುದಂತೂ ಗ್ಯಾಾರಂಟಿ. ಮೋದಿ ಸರಕಾರದ ಆರ್ಥಿಕ ಕ್ರಮಗಳನ್ನು ಖಂಡಿಸುವ, ಟೀಕಿಸುವ ಭರದಲ್ಲಿ ತೊಡಗಿದ್ದಾರೆ. ಜಿಡಿಪಿ ಕುಸಿದ ಬಗ್ಗೆೆ ನಿರಂತರವಾಗಿ ಅವಹೇಳನ ನಡೆಯುತ್ತಲೇ ಇದೆ. ಇವರಿಗೆಲ್ಲಾ ದೇಶದ ಬಗ್ಗೆೆ ಈ ಪ್ರಮಾಣದ ಕಾಳಜಿ, ಚಿಂತೆ, ಚಿಂತನೆ ಕಂಡು ಅಚ್ಚರಿಯಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಇದೆಲ್ಲಾ ಮಾಮೂಲಿ ವಿಚಾರವೇ. ಅಧಿಕಾರ ರಾಜಕೀಯದ ಮತ್ತೊೊಂದು ಪ್ರಹಸನವೆಂದು ಭಾವಿಸಬೇಕಾಗುತ್ತದೆ ಅಷ್ಟೆೆ.

ಇದಲ್ಲ ಮಹತ್ವದ ವಿಚಾರ. ಇವೆಲ್ಲದರ ಮಧ್ಯೆೆ ಸಂತೋಷದ ಸಂಗತಿಯೆಂದರೆ, ಕೇವಲ 978 ಕೋಟಿ ರೂಪಾಯಿಯ ವೆಚ್ಚದಲ್ಲಿ ನಿರ್ಮಾಣದಲ್ಲಿ ಕೈಗೊಂಡ ಚಂದ್ರಯಾನ-2 ದ ವಿಕ್ರಮ ಪತನವಾಗಲಿಲ್ಲವೆಂದು ಇಸ್ರೋೋ ಹೇಳಿದೆ. ಆರ್ಬಿಟರ್ ಮತ್ತು ಲ್ಯಾಾಂಡರ್ ನಡುವೆ ಸಂಪರ್ಕ ಸಾಧ್ಯವಿದೆಯೆಂದು ಅದು ಮಾಹಿತಿ ರವಾನಿಸಿದೆ. ಯೋಜನೆಯ 5% ಮಾತ್ರ ನಷ್ಟವಾಗಿದ್ದು 95% ಭಾಗಕ್ಕೆೆ ಯಾವುದೇ ಇಸ್ರೋೋ ನಷ್ಟವಿಲ್ಲ ಹೇಳಿದೆ. ಒಂದು ವರ್ಷದ ಜೀವಿತಾವಧಿ ಹೊಂದಿರುವ ಈ ಆರ್ಬಿಟರ್ ಚಂದ್ರನ ಸುತ್ತಲೂ ಪ್ರದಕ್ಷಿಣೆ ಹಾಕುತ್ತಾಾ ಅದರ ಚಿತ್ರಗಳನ್ನು ಇಸ್ರೋೋಗೆ ಕಳಿಸುವ ಕೆಲಸ ಮಾಡಲಿದೆ.

ಇದು ಇಸ್ರೋೋದ ಮುಂದಿನ ಪ್ರಯೋಗಗಳಿಗೆ ಅನುಕೂಲವಾಗಲಿದೆಯಂತೆ. ಭಾರತದ ವಿಜ್ಞಾನಿಗಳ ಇಷ್ಟು ದೊಡ್ದ ಸಾಧನೆಗೆ ದೇಶವೇ ಶ್ಲಾಾಸಿ ಬೆಂಬಲಿಸಿದ್ದು ಮಾತ್ರ ಅವಿಸ್ಮರಣೀಯ! ಇಸ್ರೋೋದ ಅಧ್ಯಕ್ಷರನ್ನು ಮೋದಿಯವರು ತಬ್ಬಿಿಕೊಂಡು ಸಂತೈಸಿದ ಆ ಕ್ಷಣ ಇದೆಯಲ್ಲ, ಅದು ಎಲ್ಲರನ್ನೂ ಆರ್ದ್ರಗೊಳಿಸಿದ್ದು ಹೇಗೆ ಮರೆತೀತು! ದೇಶ ನಡೆಸುವ ಮುಖಂಡನಿಗೆ ಇರಬೇಕಾದ ತಾಯಿಗುಣವನ್ನು ಮೋದಿಯವರಲ್ಲಿ ಜಗತ್ತು ಅಂದು ಕಂಡಿತು. ನಮ್ಮ ಪ್ರಧಾನಿ ನಮ್ಮ ಹೆಮ್ಮೆೆ ಎನ್ನುವ ಹಲವು ಕಾರಣಗಳಲ್ಲಿ ಇದೊಂದು ಸೇರಿಬಿಟ್ಟಿಿತು.

Leave a Reply

Your email address will not be published. Required fields are marked *