Wednesday, 9th October 2024

ಅಮೆರಿಕಾದಲ್ಲಿ ಕರೋನಾಗೆ 67 ಸಾವಿರ ಮಂದಿ ಬಲಿ

ವಾಷಿಂಗ್‌ಟ್‌‌ನ್:

ಅಮೆರಿಕದಲ್ಲಿ ಕರೋನಾ ವೈರಸ್‌ನ ಅಟ್ಟಹಾಸ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ ಮಹಾಮಾರಿ ಕರೋನಾ ವೈರಸ್‌ಗೆ 1,185 ಮಂದಿ ಮೃತಪಟ್ಟಿದ್ದಾರೆ.

ಇನ್ನು ವಿಶ್ವದಾದ್ಯಂತ ಕರೋನಾ ವೈರಸ್‌ನಿಂದ ಗುಂಮುಖರಾದವರ ಸಂಖ್ಯೆ 11 ಲಕ್ಷಕ್ಕೆ ಏರಿಕೆಯಾಗಿದೆ.
ದೇಶದಲ್ಲಿ ಕರೋನಾ ಸೋಂಕುನಿಂದ  ಮೃತಪಟ್ಟವರ ಸಂಖ್ಯೆ 67 ಸಾವಿರ ದಾಟಿದೆ. ಅಮೆರಿಕಾದಲ್ಲಿ ಕರೋನಾ ವೈರಸ್‌ಗೆ ಏನಿಲ್ಲವೆಂದರೂ ಪ್ರತಿದಿನ 2 ಸಾವಿರ ಜನ ಸಾವನ್ನಪ್ಪುತ್ತಿದ್ದಾರೆ.

ಇದುವರೆಗೆ ಒಟ್ಟು 67 ಸಾವಿರ ಜನರು ಕರೋನಾ ಸೋಂಕಿಗೆ ಮೃತಪಟ್ಟಿದ್ದು, 11.60 ಲಕ್ಷ ಮಂದಿಗೆ ಕರೋನಾ ಸೋಂಕು ದೃಢಪಟ್ಟಿದೆ. ಇನ್ನು ವಿಶ್ವದಾದ್ಯಂತ ಕರೋನಾ ಭೀತಿ ಹೆಚ್ಚಾಗಿದ್ದು, ವಿಶ್ವದಲ್ಲ ಇದುವರೆಗೆ 2.44 ಲಕ್ಷಮಂದಿ ಕರೋನಾ ಸೋಂಕಿನಿಂದ ಹತರಾಗಿದ್ದಾರೆ. 38.84 ಲಕ್ಷ ಜನರಿಗೆ ಕರೋನಾ ವೈರಸ್ ಸೋಂಕು ತಗುಲಿದ್ದು, ಗುಣಮುಖರಾದವರ ಸಂಖ್ಯೆ 11.21 ಲಕ್ಷಕ್ಕೆ ಏರಿಕೆಯಾಗಿದೆ.