Friday, 13th December 2024

ಇರಾಕ್‌ನಲ್ಲಿ 6 ಸಾವಿರ ವರ್ಷಗಳ ಪ್ರಾಚೀನ ರಾಮ, ಹನುಮಾನ್ ಕೆತ್ತನೆ ಪತ್ತೆ

ಸಿಲೇಮಾನಿಯಾ:  

ಹಿಂದೂ  ಧರ್ಮ ವಿಶ್ವದ ಅತ್ಯಂತ ಪ್ರಾಚೀನ ಸಂಸ್ಕೃತಿಯೆಂಬುದು ಮತ್ತೊಮ್ಮೆ ಸಾಭೀತಾಗಿದೆ. ಸಿಲೇಮಾನಿಯಾ ಪ್ರದೇಶದಲ್ಲಿ 6  ಸಾವಿರ ವರ್ಷಗಳಿಗಿಂತಲೂ ಹಳೆಯದಾದ ರಾಮ ಮತ್ತು ಹನುಮಾನ ಕೆತ್ತನೆ ಚಿತ್ರಗಳು ಪತ್ತೆಯಾಗಿರುವುದೇ ಇದಕ್ಕೆ ಸಾಕ್ಷಿ.

ಕೆನಡಾದ ಖ್ಯಾತ ಸಂಶೋಧಕ ಸರ್. ಲಿಯೋನಾರ್ಡ್ ವೂಲ್ಲೇ ಅವರ ನೇತೃತ್ವದ ತಂಡವೊಂದು ಈ ಪ್ರದೇಶದಲ್ಲಿ ಉತ್ಕನನ ನಡೆಸುತ್ತಿದ್ದ ವೇಳೆ  ಶ್ರೀ ರಾಮ ಮತ್ತು ಹನುಮಂತನ ಸುಂದರ ಕೆತ್ತನೆ ಶಿಲ್ಪ ಚಿತ್ರಗಳು ಪತ್ತೆಯಾದವು. ಇದು ಭಾರತದ ಭವ್ಯ ಹಿಂದು ಧರ್ಮ ಮತ್ತು ಸಂಸ್ಕೃತಿಯ  ಆಳವಾದ ಬೇರಿನ ಬಗ್ಗೆ ಮತ್ತಷ್ಟು ಸಂಶೋಧನೆ ನಡೆಸಲು ಬೆಳಕು ಚಲ್ಲಿದೆ.

ಪ್ರಾಚೀನ ಸಂಸ್ಕೃತಿ ಮತ್ತು  ಆಚರಣೆಗಳ ಮೇಲೆ ಆಗಾಗ ಹೊಸ ಜಗತ್ತಿಗೆ ಅನೇಕ ಸ್ವರಸ್ಯಕ  ಸಂಗತಿಗಳನ್ನು ಬಯಲುಗೊಳಿಸುತ್ತಿರುವ ಮೆಸಪೋಟೋನಿಯಾದ ಯುರ್ ಪ್ರದೇಶದಲ್ಲಿ ಅತ್ಯಂತ ಅಪರೂಪದ ಈ ಸುಂದರ ಕೆತ್ತನೆ ಶಿಲ್ಪ ಕಲಾಕೃತಿಗಳು ಪತ್ತೆಯಾಗಿರುವುದು ಹೊಸ ವಿದ್ಯಾಮಾನವಾಗಿದೆ.

ಇದು 6 ಸಾವಿರಕ್ಕೂ ಹೆಚ್ಚು ವರ್ಷಗಳ ಹಿಂದೆ ರಚಿಸಲ್ಪಟ್ಟ ಶಿಲ್ಪ ಕಲಾಕೃತಿಗಳು ಎಂಬುದು ದೃಢಪಟ್ಟಿದೆ. ಈ ಮಹತ್ವದ ಸಂಶೋಧನೆ ಬೆಳಕಿಗೆ ಬಂದಿರುವುದರಿಂದ ಹಿಂದೂ ಧರ್ಮ ಏಷ್ಯಾ ಶತಮಾನಗಳ ಹಿಂದೆಯೇ ಬಹು ಆಳವಾಗಿ ಬೇರುರಿತ್ತು ಎಂಬುದು ದೃಢಪಟ್ಟಿದೆ.\

ಇಸ್ಲಾಾಂ ಧರ್ಮ ಪ್ರಬಲ್ಯವಿರುವ ಇರಾಕ್‌ನಲ್ಲಿ ಹಿಂದೂ ಧರ್ಮದ ಈ ಪ್ರಮುಖ ಕೆತ್ತನೆ ಶಿಲ್ಪಗಳು ಪತ್ತೆಯಾಗಿರುವುದು ಕೂಡ ಇಲ್ಲಿ ಗಮನರ್ಹ. ಮುಸ್ಲಿಿಂರ ಅತ್ಯಂತ ಪುಣ್ಯ ಕ್ಷೇತ್ರ ಮೆಕ್ಕಾದಲ್ಲಿ ಶತಮಾನಗಳ ಹಿಂದೇಯೇ ಶಿವಲಿಂಗ ಪತ್ತೆಯಾಗಿತ್ತು ಎಂಬ ಕೆಲ ಉಲ್ಲೇಖನಗಳಿವೆ.