Wednesday, 11th December 2024

ನೀಟ್ ಮತ್ತು ಜೆಇಇ ಪರೀಕ್ಷೆಗಳಿಗೆ ದಿನಾಂಕ ನಿಗದಿ

ದೆಹಲಿ:

ವೈದ್ಯಕೀಯ  ಶಿಕ್ಷಣ ಕುರಿತ ಸೀಟ್ ಹಂಚಿಕೆ ಕುರಿತಂತೆ ದೇಶಾದ್ಯಂತ ಜುಲೈ 26 ರಂದು ನೀಟ್ ಪರೀಕ್ಷೆ ನಡೆಯಲಿದೆ ಎಂದು ಕೇಂದ್ರ ಸರಕಾರ ಮೇ.5 ರಂದು ಘೋಷಿಸಿದೆ.

ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪ್ರೊಕ್ರಿಯಾಲ್ ನಿಶಾಂತ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಪಾರದರ್ಶಕ ಹಾಗೂ ನಿಸ್ಪಕ್ಷವಾಗಿ ಈ ಪರೀಕ್ಷೆಗಳು ನಡೆಯಲಿವೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಜೆಇಇ ಪರೀಕ್ಷೆ ಜು.18  ರಿಂದ 23ರವರೆಗೆ ನಡೆಯಲಿದ್ದು, ಯುಪಿಎಸ್‌ಸಿ  ಪರೀಕ್ಷೆಗಳ ಬಗ್ಗೆೆ ಸದ್ಯದಲ್ಲಿಯೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.