Saturday, 14th December 2024

ಮರುಪಾವತಿಯ ಭರವಸೆ ನೀಡುವ ನಕಲಿ ಲಿಂಕ್‌ಗಳನ್ನು ತೆರೆಯಬೇಡಿ- ಆದಾಯ ತೆರಿಗೆ ಇಲಾಖೆ

ದೆಹಲಿ:

ತೆರಿಗೆ  ಪಾವತಿದಾರರು ಮರುಪಾವತಿ ಭರವಸೆ ನೀಡುವ ನಕಲಿ ಲಿಂಕ್‌ಗಳ ಮೇಲೆ ಕ್ಲಿಿಕ್ ಮಾಡಬಾರದು ಎಂದು ಆದಾಯ ತೆರಿಗೆ ಇಲಾಖೆ ಮೇ.3 ರಂದು ಎಚ್ಚರಿಕೆ ನೀಡಿದೆ.

ತೆರಗೆದಾರರೆ ಎಚ್ಚರಿಕೆ ದಯವಿಟ್ಟು ಮರುಪಾವತಿಯ ಭರವಸೆ ನೀಡುವ ಯಾವುದೇ ನಕಲಿ ಲಿಂಕ್ ಮೇಲೆ ಕ್ಲಿಿಕ್ ಮಾಡಬೇಡಿ. ಇವುಗಳು ನಕಲಿ ಸಂದೇಶಗಳಾಗಿದ್ದು, ಆದಾಯ ತೆರಿಗೆ  ಇಲಾಖೆಯಿಂದ ಕಳುಹಿಸಿದ ಸಂದೇಶಗಳಲ್ಲ ಎಂದು ಸ್ಪಷ್ಟಪಡಿಸಿದೆ.

ತಾವು ಇ ಮೇಲ್ ಮೂಲಕ ಯಾವುದೇ ತೆರಿಗೆ ಪಾವತಿದಾರರ ವಿಸ್ತೃತ ವೈಯಕ್ತಿಿಕ ಮಾಹಿತಿ ಕೇಳುವುದಿಲ್ಲ ಎಂದು ಇಲಾಖೆ ತಿಳಿಸಿದೆ. ಆದಾಯ ತೆರಿಗೆ ಇಲಾಖೆ ಪಿನ್ ಸಂಖ್ಯೆೆಗಳು, ಪಾಸ್‌ವರ್ಡ್ ಅಥವಾ ಕ್ರೆೆಡಿಟ್ ಕಾರ್ಡ್‌ಗಳು, ಬ್ಯಾಾಂಕುಗಳು ಇತರ ಹಣಕಾಸು ಖಾತೆಗಳ ವಿವರಗಳನ್ನು ಕೇಳುವುದಿಲ್ಲ ಎಂದು ತಿಳಿಸಿದೆ.

ನಿಮಗೆ ಆದಾಯ ತೆರಿಗೆಯಿಂದ ಮಾಹಿತಿ ಕೇಳುವ ರೀತಿಯಲ್ಲಿ ಇಲ್ಲವೇ ಇಲಾಖೆಯಿಂದ ಅಧಿಕೃತ ಒಪ್ಪಿಿಗೆ  ಪಡೆದಿರುವುದಾಗಿ ಇಮೇಲ್‌ಗಳು ಬಂದಲ್ಲಿ ಅದಕ್ಕೆೆ ಪ್ರತಿಕ್ರಿಿಯೆ ನೀಡಬೇಡಿ ಎಂದು ಎಚ್ಚರಿಕೆ ನೀಡಿದೆ. ಜತೆಗೆ ಯಾವುದೇ ದುರುದ್ದೇಶದ ಕೋಡ್ ಹೊಂದಿರುವ ಲಗತ್ತುಗಳನ್ನು ತೆರೆಯಬೇಡಿ ಎಂದು ಇಲಾಖೆ ತಿಳಿಸಿದೆ.