Saturday, 14th December 2024

ಮೇಘಾಲಯದಲ್ಲಿ ವಿಷಪೂರಿತ ಅಣಬೆ ಸೇವಿಸಿ 5 ಮಂದಿ ಸಾವು

ಶಿಲ್ಲಾಾಂಫ್:

ಮೇಘಾಲಯದ ಪಶ್ಚಿಮ ಭಾಗದ ಪರ್ವತ ಜಿಲ್ಲೆಯಾದ ಜೈತಿಂಯಾದಲ್ಲಿ  ವಿಪೂರಿತ ಅಣಬೆ  ಸೇವಿಸಿ ಮೃತಪಟ್ಟವರ ಸಂಖ್ಯೆ ಐದಕ್ಕೇರಿದೆ.

ಸ್ಥಳೀಯವಾಗಿ ಕರೆಯಲ್ಪಡುವ ಟಿಟ್ ಬಿಸೆನ್ ಅಣಬೆ ಸೇವಿಸಿ ಅಸ್ವಸ್ಥಗೊಂಡಿದ್ದ 23 ವರ್ಷದ ಖೊಂಗ್ಲಾ ಎಂಬ ಯುವಕ ಇಲ್ಲಿನ ಈಶಾನ್ಯ ಪ್ರಾದೇಶಿಕ  ಇಂದಿರಾಗಾಂಧಿ ಆರೋಗ್ಯ ಮತ್ತು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ದಾಖಲಾಗಿದ್ದು, ಮೇ.3ರ ಮಧ್ಯಾಹ್ನ ಆತ ಮೃತಪಟ್ಟಿದ್ದಾನೆ ಎಂದು ಲಮಿನ್ ಗ್ರಾಮದ ಗೋಲ್ಡನ್ ಗಷಂಗ ಮೂಲಗಳು ತಿಳಿಸಿವೆ.

ಭಾರತ ಬಾಂಗ್ಲಾದೇಶ ಗಡಿಯ ಅಮ್ಲಾರೆಮ್ ಉಪ ವಿಭಾಗದ ಲಮಿನ್ ಗ್ರಾಮದ ಮೂರು ಕುಟುಂಬಗಳ 18 ಜನರು ಕಾಡು ಅಣಬೆ ಸೇವಿಸಿದ ನಂತರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.