Friday, 13th December 2024

ವಲಸಿಗರ ರೈಲುಗಳಿಗೆ ಅವಕಾಶ ನೀಡದಿರುವುದು ಅನ್ಯಾಯ

ದೆಹಲಿ:

ಸಿಲುಕಿಬಿದ್ದ ವಲಸಿಗರು ವಾಪಸ್ಸಾಗುವುದಕ್ಕೆ ಪಶ್ಚಿಮ ಬಂಗಾಳ ಮುಖ್ಯ ಮಂತ್ರ ಮಮತಾ ಬ್ಯಾನರ್ಜಿ ಕೇಂದ್ರಕ್ಕೆ ಸಹಕಾರ ನೀಡುತ್ತಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಆರೋಪಿಸಿದ್ದಾರೆ.

ಎರಡು ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರನ್ನು ಸ್ವಂತ  ಸ್ಥಳಗಳಿಗೆ ಕಳುಹಿಸಲು ಕೇಂದ್ರಕ್ಕೆ ಸಹಕಾರ ನೀಡುತ್ತಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಆರೋಪಿಸಿದ್ದಾರೆ. ಎರಡು ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರನ್ನು ಸ್ವಂತ ಸ್ಥಳಗಳಿಗೆ ಕಳುಹಿಲು ಕೇಂದ್ರ ಸರಕಾರ ಸೌಲಭ್ಯ ಕಲ್ಪಿಸಿದರೂ ಸಹ ಪಶ್ಚಿಮ ಬಂಗಾಳ ಸರಕಾರ ರೈಲುಗಳ ಪ್ರವೇಶಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಅಮಿತ್ ಷಾ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿಗೆ ಪತ್ರದ ಮೂಲಕ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದ ವಲಸಿಗರು ತಮ್ಮ ಮನೆಗೆ ವಾಪದಸ್ಸಾಗಲು ಕಾಯುತ್ತಿದ್ದಾರೆ. ಆದರೆ ರೈಲುಗಳಿಗೆ ಪ್ರವೇಶ ನಿರಾಕರಿಸಿರುವುದು ತುಂಬಾ ಅನ್ಯಾಯ. ಇದು ವಲಸಿಗರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ತಿಳಿಸಿದ್ದಾರೆ.