Saturday, 14th December 2024

ವಿದೇಶದಲ್ಲಿ ಸಿಲುಕಿರುವ ಭಾರತೀಯನ್ನು  ಕರೆತರಲು ಸಿದ್ದತೆ

ದೆಹಲಿ:

ಕರೋನಾ ಸಂಕಷ್ಟದ ಸಮಯದಲ್ಲಿ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಮೇ.7 ರಿಂದ ವಾಪಸ್ ಕರೆತರಲಾಗುವುದು ಎಂದು ಕೇಂದ್ರ ಸರಕಾರ ಮಂಗಳವಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠವು ನೇಪಾಳದಲ್ಲಿ ಸಿಲಿಕಿರುವ ಭಾರತೀಯರನ್ನು ಮರಳಿ ಕರೆತರಲು ಕೇಂದ್ರಕ್ಕೆ ನಿರ್ದೇಶನ ಕೋರಿ ವಕೀಲ ಗಂಗಾ ಗಿರಿ ಸಲ್ಲಿಸಿದ ಮನವಿಯನ್ನು ಕೈಗೆತ್ತಿಕೊಂಡಿತ್ತು.
=================