Wednesday, 11th December 2024

ಸಿಕ್ಕೀಂನಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ

ಗ್ಯಾಾಂಗ್ಟಕ್:

ಸಿಕ್ಕೀಂನ ಉತ್ತರ ಭಾಗದ ಗಡಿಯಲ್ಲಿ ಭಾನುವಾರ ಬೆಳಗಿನ ಜಾವ ಭಾರತ ಮತ್ತು ಚೀನಾ ಸೈನಿಕ ನಡುವೆ ತೀವ್ರ ಘರ್ಷಣೆ ನಡೆದಿರುವ ಘಟನೆ ನಡೆದಿದೆ.  ಘರ್ಷಣೆಯಲ್ಲಿ ಅನೇಕ ಚೀನಾ ಭಾರತೀಯ ಯೋಧರು ಗಂಭೀರವಾಗಿ
ಗಾಯಗೊಂಡಿದ್ದಾರೆ.

ಉತ್ತರ ಸಿಕ್ಕೀಂನಲ್ಲಿ ಸಮುದ್ರಮಟ್ಟದಿಂದ 5ಸಾವಿರ ಮೀಟರ್ ಎತ್ತರದ ಮುಗುತಾಂಗ್ ಪ್ರದೇಶದ ನಾಕು ಸೆಕ್ಟರ್‌ನಲ್ಲಿ
ಭಾರತಿ ಮತ್ತು ಚೀನಾ ಸೇನಾ ಪಡೆಗಳ ನಡುವೆ ಸಂಘರ್ಷ ಸಂಭವಿಸಿದೆ. ಈ ಘಟನೆಯಲ್ಲಿ ನಾಲ್ವರು ಭಾರತೀಯ
ಯೋಧರು ಹಾಗೂ ಏಳು ಚೀನಾ ಸೈನಿಕರು ಗಾಯಗೊಂಡಿದ್ದಾರೆ. ಒಟ್ಟಾರೆ  ಈ ಸಂಘರ್ಷದಲ್ಲಿ ಎರಡೂ ಕಡೆಯ 150 ಸೈನಿಕರು ತೊಡಗಿದ್ದರು ಎಂದು ಮೂಲಗಳು ತಿಳಿಸಿವೆ.