Saturday, 14th December 2024

ಸೂಚ್ಯಂಕದಲ್ಲಿ 254 ಅಂಕಗಳ ಏರಿಕೆ: ವಹಿವಾಟು ಅಂತ್ಯ

ನವದೆಹಲಿ/ಮುಂಬಯಿ: ಐಟಿ, ಆಟೋ ಷೇರುಗಳು ಖರೀದಿ ಹೆಚ್ಚಳವಾಗಿದ್ದು, ಬುಧವಾರ ಷೇರುಪೇಟೆಯ ಸಂವೇದಿ ಸೂಚ್ಯಂಕ 254 ಅಂಕಗಳ ಏರಿಕೆ ದಾಖಲಿಸಿ ದಿನಾಂತ್ಯದ ವಹಿವಾಟು ಅಂತ್ಯಗೊಳಿಸಿದೆ.

ಷೇರುಪೇಟೆ ಸಂವೇದಿ ಸೂಚ್ಯಂಕ 254.03 ಅಂಕಗಳ ಏರಿಕೆ ದಾಖಲಿಸಿ 51,279.51ರಲ್ಲಿ ದಿನಾಂತ್ಯದ ವಹಿವಾಟು ಮುಕ್ತಾಯ ಕಂಡಿದೆ. ಎನ್ ಎಸ್ ಇ ನಿಫ್ಟಿ 76.40 ಅಂಕಗಳ ಏರಿಕೆ ಕಂಡು 15,174.80 ಅಂಕಗಳೊಂದಿಗೆ ವಹಿವಾಟು ಕೊನೆಗೊಳಿಸಿದೆ.

ಬಜಾಜ್ ಫೈನಾನ್ಸ್, ಸನ್ ಫಾರ್ಮಾ, ಟೆಕ್ ಮಹೀಂದ್ರಾ, ಆಯಕ್ಸಿಸ್ ಬ್ಯಾಂಕ್, ಬಜಾಜ್ ಆಟೋ ಮತ್ತು ಇನ್ಫೋಸಿಸ್ ಷೇರುಗಳು ಲಾಭ ಗಳಿಸಿವೆ.