Sunday, 1st December 2024

ಗುಜರಾತ್‌: ಕಾರಿಗೆ ಟ್ರಕ್​ ಡಿಕ್ಕಿ, 10 ಮಂದಿ ದಾರುಣ ಸಾವು

ಆನಂದ್ (ಗುಜರಾತ್‌): ಗುಜರಾತ್‌ನ ಆನಂದ್ ಜಿಲ್ಲೆಯ ಇಂದ್ರನಾಜ್ ಗ್ರಾಮದ ಬಳಿ ಕಾರಿಗೆ ಟ್ರಕ್​ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ 10 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಆನಂದ್ ಜಿಲ್ಲೆಯ ತಾರಾಪುರದಿಂದ ಅಹಮದಾಬಾದ್ ಜಿಲ್ಲೆಯ ವಟಮನ್ ಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ  ಅಪಘಾತ ಸಂಭವಿಸಿದೆ. ಕಾರು ಮತ್ತು ಟ್ರಕ್​ ಮುಖಾಮುಖಿಯಾಗಿ ಡಿಕ್ಕಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರು ವಾಟಾಮನ್​​ಗೆ, ಟ್ರಕ್​ ವಾಟಾಮನ್​ ಕಡೆಯಿಂದ ಬರುತ್ತಿತ್ತು. ವಾಹನಗಳ ಮುಖಾಮುಖಿ ಡಿಕ್ಕಿಯಾಗಿ ಮೃತದೇಹಗಳು ನಜ್ಜುಗುಜ್ಜಾಗಿವೆ. ಮೃತರ ಗುರುತು ಪತ್ತೆಹಚ್ಚುವ ಕೆಲಸ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.