Saturday, 23rd November 2024

ನಷ್ಟದೊಂದಿಗೆ ವಹಿವಾಟು ಆರಂಭ: 1000 ಅಂಕ ಕುಸಿತ

ಮುಂಬೈ: ಷೇರು ಮಾರುಕಟ್ಟೆ, ಸೋಮವಾರ ಆರಂಭಿಕ ವಹಿವಾಟಿನಲ್ಲೂ ನಷ್ಟ ದೊಂದಿಗೆ ವಹಿವಾಟು ಆರಂಭಿಸಿದೆ. ಪ್ರಮುಖ ವಾಗಿ ಹಣದುಬ್ಬರವು ಷೇರು ಮಾರು ಕಟ್ಟೆಯ ಮೇಲೆ ಭಾರೀ ಪರಿಣಾಮ ಉಂಟು ಮಾಡುತ್ತಿದೆ.

ಬಿಎಸ್‌ಇ ಸೆನ್ಸೆಕ್ಸ್ 1000 ಅಂಕ ಕುಸಿದು 52,990ದಲ್ಲಿ ವಹಿವಾಟು ಆರಂಭಿಸಿದರೆ, ನಿಫ್ಟಿ ಶೇ.2ರಷ್ಟು ಕುಸಿದು 15,830ರಲ್ಲಿ ವಹಿ ವಾಟಿಗೆ ಇಳಿದಿದೆ. ಬ್ಯಾಂಕ್‌ ನಿಫ್ಟಿ ಭಾರೀ ಕೆಳಕ್ಕೆ ಕುಸಿದಿದೆ. ಸುಮಾರು 900ಕ್ಕಿಂತ ಅಧಿಕ ಅಂಕ ಅಥವಾ ಶೇಕಡ 2.50ರಷ್ಟು ಕುಸಿದು, 33,600ಕ್ಕೆ ತಲುಪಿದೆ.

ಹೂಡಿಕೆದಾರರು ರಿಲಾಯನ್ಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಕೋಲ್ ಇಂಡಿಯಾ, ಮ್ಯಾಪ್‌ ಮೈಇಂಡಿಯಾ, ಐಐಎಫ್‌ಎಲ್ ಫಿನಾನ್ಸ್, ಕಿಮ್ಸ್ ಸ್ಟಾಕ್ ಮೇಲೆ ಹೆಚ್ಚು ಚಿತ್ತ ನೆಟ್ಟಿದ್ದಾರೆ. ಎಲ್ಲಾ ಮೂವತ್ತು ಸೆನ್ಸೆಕ್ಸ್ ಸ್ಟಾಕ್‌ಗಳು ನಷ್ಟದೊಂದಿಗೆ ವಹಿವಾಟು ಆರಂಭ ಮಾಡಿದೆ. ನಿಫ್ಟಿ ಬ್ಯಾಂಕ್ ಶೇಕಡ 3 ಕೆಳಕ್ಕೆ ಕುಸಿತ ಕಂಡಿದೆ. ಬ್ಯಾಂಕ್ ಆಫ್ ಬರೋಡಾ, ಐಸಿಐಸಿಐ ಬ್ಯಾಂಕ್ ಶೇಕಡ 5ರಷ್ಟು ಮೇಲಕ್ಕೆ ಏರಿದೆ.

ಬಜಾಜ್ ಟ್ವಿನ್ಸ್, ಐಸಿಐಸಿಐ ಬ್ಯಾಂಕ್, ಎಸ್‌ಬಿಐ, ಇಂಡಸ್‌ಇಂಡ್ ಬ್ಯಾಂಕ್, ರಿಲಾಯನ್ಸ್, ಎಲ್‌&ಟಿ, ಕೋಟಕ್ ಬ್ಯಾಂಕ್, ಎಚ್‌ಡಿಎಫ್‌ಸಿ, ಟೆಕ್ ಎಂ, ಇನ್ಫೋಸಿಸ್ ಷೇರುಗಳು ವಹಿವಾಟು ಆರಂಭವಾಗಿ ಕೊಂಚ ಸಮಯದ ಬಳಿಕ ಶೇಕಡ ಮೂರರಷ್ಟು ಕುಸಿದಿದೆ. ಪ್ರಮುಖವಾಗಿ ವೊಡಾಫೋನ್ ಐಡಿಯಾ, ಆರ್‌ಬಿಎಲ್ ಬ್ಯಾಂಕ್, ಯೆಸ್‌ ಬ್ಯಾಂಕ್ ಉತ್ತಮ ವಹಿವಾಟು ನಡೆಸುತ್ತಿದೆ.