Friday, 13th December 2024

‘ಮನ್ ಕೀ ಬಾತ್’ ಗೆ ಗೈರಾದ ವಿದ್ಯಾರ್ಥಿಗಳಿಗೆ ನೂರು ರೂಪಾಯಿ ದಂಡ..!

ಡೆಹ್ರಾಡೂನ್: ಏಪ್ರಿಲ್ 30 ರಂದು ಪ್ರಸಾರವಾದ 100ನೇ ಕಂತನ್ನು ಶಾಲೆಗಳಲ್ಲೂ ಸಹ ಆಯೋಜನೆ ಮಾಡಲಾಗಿದ್ದು, ಇದಕ್ಕೆ ಗೈರು ಹಾಜರಾದ ವಿದ್ಯಾರ್ಥಿಗಳಿಗೆ ಡೆಹ್ರಾಡೂನ್ ಜಿಆರ್‌ಡಿ ನಿರಂಜನ್ಪುರ್ ಅಕಾಡೆಮಿ ನೂರು ರೂಪಾಯಿ ದಂಡ ವಿಧಿಸಲು ಮುಂದಾಗಿದೆ. ಇದು ಈಗ ವಿವಾದಕ್ಕೆ ಕಾರಣವಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರು ನಡೆಸಿಕೊಡುವ ‘ಮನ್ ಕೀ ಬಾತ್’ ಈಗಾಗಲೇ ನೂರು ಸಂಚಿಕೆಗಳನ್ನು ಪೂರೈಸಿದೆ. ಏಪ್ರಿಲ್ 30 ರಂದು 100ನೇ ಕಂತು ಪ್ರಸಾರವಾಗಿದ್ದು, ಇದನ್ನು ಕೋಟ್ಯಾಂತರ ಮಂದಿ ಆಲಿಸಿದ್ದಾರೆ.

ಕಾರ್ಯಕ್ರಮಕ್ಕೆ ಗೈರು ಹಾಜರಾದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಲು ತಿಳಿಸಿದ್ದ ಶಾಲಾ ಆಡಳಿತ ಮಂಡಳಿ, ಇದಕ್ಕೆ ತಪ್ಪಿದಲ್ಲಿ ನೂರು ರೂಪಾಯಿ ದಂಡ ಪಾವತಿಸುವಂತೆ ಸೂಚಿಸಿದೆ.

ಇದೀಗ ಹಲವು ಪೋಷಕರು ಈ ಕುರಿತಂತೆ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.