Sunday, 13th October 2024

ಉತ್ತಮ ವಹಿವಾಟು: ಷೇರುಪೇಟೆ ಸೆನ್ಸೆಕ್ಸ್‌ 101 ಪಾಯಿಂಟ್ಸ್ ಹೆಚ್ಚಳ

ಮುಂಬೈ: ಭಾರತೀಯ ಷೇರುಪೇಟೆ ಶುಕ್ರವಾರ ಉತ್ತಮ ವಹಿವಾಟು ನಡೆಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್‌ 101 ಪಾಯಿಂಟ್ಸ್, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 37 ಪಾಯಿಂಟ್ಸ್ ಹೆಚ್ಚಳಗೊಂಡಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 101.62 ಪಾಯಿಂಟ್ಸ್‌ ಏರಿಕೆಗೊಂಡು 52,938.83 ಪಾಯಿಂಟ್ಸ್‌ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 37.40 ಪಾಯಿಂಟ್ಸ್‌ ಹೆಚ್ಚಾಗಿ 15861.40 ಪಾಯಿಂಟ್ಸ್‌ ಮುಟ್ಟಿದೆ. ದಿನದ ವಹಿ ವಾಟು ಅಂತ್ಯಕ್ಕೆ 1585 ಷೇರುಗಳು ಏರಿಕೆಗೊಂಡರೆ, 412 ಷೇರುಗಳು ಕುಸಿದಿವೆ ಮತ್ತು 69 ಷೇರುಗಳ ಮೌಲ್ಯ ದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಅಲ್ಟ್ರಾಟೆಕ್ ಸಿಮೆಂಟ್‌ನ ಷೇರು 141 ರೂ.ಗಳ ಏರಿಕೆ ಕಂಡು 7,599.95 ರೂ., ಜೆಎಸ್‌ಡಬ್ಲ್ಯು ಸ್ಟೀಲ್‌ನ ಷೇರು ಗಳು 7 ರೂ.ಗಳ ಲಾಭದೊಂದಿಗೆ 723.05 ರೂ., ಬಜಾಜ್ ಆಟೋ ಷೇರುಗಳು 35 ರೂ.ಗಳ ಏರಿಕೆ ಕಂಡು 3,888.30 ರೂ., ಟೈಟಾನ್ ಕಂಪನಿಯ ಷೇರು 17 ರೂ. ಹೆಚ್ಚಾಗಿ 1,718.30 ರೂ.ಗೆ ಪ್ರಾರಂಭವಾಯಿತು.

ಟೆಕ್ ಮಹೀಂದ್ರಾ ಷೇರುಗಳು ಸುಮಾರು 25 ರೂ.ಗಳಷ್ಟು ಇಳಿಕೆಯಾಗಿ 1,123.15 ರೂ., ಯುಪಿಎಲ್ ಷೇರು ಸುಮಾರು 4 ರೂ. ಇಳಿಕೆಗೊಂಡು 824.00 ರೂ.ಗೆ ಪ್ರಾರಂಭವಾಯಿತು.

ಲಾರ್ಸೆನ್ ಷೇರು 3 ರೂ. ಕುಸಿದು 1,639.40 ರೂ.ಗೆ ಪ್ರಾರಂಭವಾಯಿತು, ಐಸಿಐಸಿಐ ಬ್ಯಾಂಕಿನ ಷೇರುಗಳು ಸುಮಾರು 2 ರೂ.ಗಳಷ್ಟು ಇಳಿಕೆಯಾಗಿ 654.45 ರೂ. ತಲುಪಿದೆ.