Saturday, 14th December 2024

ಗಂಗಾನದಿಯಲ್ಲಿ ಮಗುಚಿದ ದೋಣಿ: 11 ಮಂದಿ ರಕ್ಷಣೆ, ಇಬ್ಬರು ನಾಪತ್ತೆ

ಪಾಟ್ನಾ: ದಿಘಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ಗಂಗಾನದಿಯಲ್ಲಿ ದೋಣಿ ಮಗುಚಿದ್ದು, ಅದರಲ್ಲಿದ್ದ 11 ಮಂದಿ ಯನ್ನು ರಕ್ಷಿಸಲಾಗಿದ್ದು, ಇಬ್ಬರು ನಾಪತ್ತೆಯಾಗಿ ದ್ದಾರೆ.

ದೋಣಿ ಮುಳುಗುತ್ತಿದ್ದುದ್ದನ್ನು ಗಮನಿಸಿದ ಗಂಗಾ ಘಾಟ್ ಅನ್ನು ಸ್ವಚ್ಛಗೊಳಿಸುವ ಸಿಬ್ಬಂದಿ, ಸ್ಥಳೀಯರ ಸಹಾಯದಿಂದ ದೋಣಿಯಲ್ಲಿದ್ದ ಜನರನ್ನು ರಕ್ಷಿಸಿದ್ದಾರೆ.

13 ಜನರಿದ್ದ ದೋಣಿಯೊಂದು ಜೆಪಿ ಸೇತುವಿನ ಪಾಯಾ ಸಂಖ್ಯೆ 10 ರ ಬಳಿ ಇದ್ದಕ್ಕಿದ್ದಂತೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಅದ ರಲ್ಲಿದ್ದ 11 ಜನರನ್ನು ರಕ್ಷಿಸಲಾಗಿದೆ. ಇನ್ನೂ ಇಬ್ಬರು ನಾಪತ್ತೆಯಾಗಿದ್ದಾರೆ.

ಗಂಗಾನದಿಯ ನೀರಿನ ಮಟ್ಟ ಹೆಚ್ಚಿದ್ದು, ನಾಪತ್ತೆಯಾಗಿರುವ ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಎಸ್ಪಿ ತಿಳಿಸಿದ್ದಾರೆ.