Wednesday, 11th December 2024

ಕೆಮಿಕಲ್ ಫ್ಯಾಕ್ಟರಿಯಲ್ಲಿ ಸ್ಪೋಟ: 12 ಮಂದಿಗೆ ಗಾಯ

Blast

ಪಂಚಮಹಲ್ : ಗುಜರಾತ್​​ನ ಪಂಚಮಹಲ್​​ ಜಿಲ್ಲೆಯಲ್ಲಿರುವ ಗೋಘಾಂಬಾದಲ್ಲಿ ಫ್ಲೋರೋಕೆಮಿಕಲ್ಸ್ ಲಿಮಿಟೆಡ್​ ನಲ್ಲಿ ಸ್ಪೋಟ ಸಂಭವಿಸಿ 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಫ್ಯಾಕ್ಟರಿಯಲ್ಲಿ ಉಂಟಾದ ಸ್ಫೋಟದಿಂದ ಭಾರೀ ಶಬ್ದ ಕೇಳಿ ಬಂದಿದ್ದು, ಕಾರ್ಖಾನೆ ಹೊತ್ತಿ ಉರಿದಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿವೆ. ಕಾರ್ಖಾನೆಯ ಶೀತಲೀಕರಣ ಘಟಕದಲ್ಲಿ ಸ್ಫೋಟವಾಗಿದೆ.