Saturday, 23rd November 2024

ಸೆನ್ಸೆಕ್ಸ್ 125 ಪಾಯಿಂಟ್ಸ್ ಕುಸಿತ

ಮುಂಬೈ: ಏರುಮುಖದತ್ತ ಸಾಗುತ್ತಿದ್ದ ಭಾರತದ ಷೇರುಪೇಟೆ ಶುಕ್ರವಾರ ಸೆನ್ಸೆಕ್ಸ್ 125 ಪಾಯಿಂಟ್ಸ್ ಕುಸಿತಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 44 ಪಾಯಿಂಟ್ಸ್ ಇಳಿಕೆಗೊಂಡಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 125 ಪಾಯಿಂಟ್ಸ್ ಹೆಚ್ಚಾಗಿ 59,015.89 ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 44 ಪಾಯಿಂಟ್ಸ್ ಕುಸಿದು 17,585.15 ಮುಟ್ಟಿದೆ.

ಒಟ್ಟು 3,442 ಕಂಪನಿಗಳು ಇಂದು ಬಿಎಸ್‌ಇಯಲ್ಲಿ ವಹಿವಾಟು ನಡೆಸುತ್ತಿದ್ದು, ಸುಮಾರು 1,245 ಷೇರುಗಳು ಏರಿಕೆಯಾದವು ಮತ್ತು 2,047 ಷೇರುಗಳು ಕುಸಿದವು. 150 ಕಂಪನಿಗಳ ಷೇರಿನ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಿರಲಿಲ್ಲ. ಮತ್ತೊಂದೆಡೆ, ಇಂದು ಸಂಜೆ ಡಾಲರ್ ಎದುರು ರೂಪಾಯಿ 4 ಪೈಸೆ ಬಲಗೊಂಡು 73.48 ರೂ. ತಲುಪಿತು.