Friday, 13th December 2024

ಆರ್‌ಪಿಎಫ್ ಸಿಬ್ಬಂದಿ ಇದ್ದ ಬಸ್‌ ಪಲ್ಟಿ: 13 ಮಂದಿಗೆ ಗಾಯ

ಸವಾಯಿ ಮಾಧೋಪುರ್ : ಚೌತ್ ಕಾ ಬರ್ವಾರಾ ಪ್ರದೇಶದ ಎಚೆರ್ ಗ್ರಾಮದ ಬಳಿ ೨೦ ಆರ್‌ಪಿಎಫ್ ಸಿಬ್ಬಂದಿಯನ್ನು ಹೊತ್ತೊಯ್ಯು ತ್ತಿದ್ದ ಬಸ್ ಪಲ್ಟಿಯಾಗಿ ಮೂವರು ಮಹಿಳೆಯರು ಸೇರಿದಂತೆ 13 ಆರ್‌ಪಿಎಫ್ ಯೋಧರು ಗಾಯಗೊಂಡಿದ್ದಾರೆ.

ಈ ವಾಹನವು ಜೈಪುರದಿಂದ ಸುರೇಲಿಗೆ ಬರಬೇಕಿತ್ತು ಎಂದು ಹೇಳಲಾ ಗುತ್ತಿದ್ದು, ಟ್ರ್ಯಾಕ್ಟರ್-ಟ್ರಾಲಿಯಿಂದ ಡಿಕ್ಕಿಯಾಗುವುದನ್ನು ತಪ್ಪಿ ಸಲು ಬಸ್ ಚಾಲಕ ಹಠಾತ್ ಬ್ರೇಕ್ ಹಾಕಿದಾಗ ಅದು ಪಲ್ಟಿಯಾಗಿದೆ ಎನ್ನಲಾಗಿದೆ.

ಚೌತ್ ಕಾ ಬರ್ವಾರಾ ಪೊಲೀಸರು ಸ್ಥಳಕ್ಕಾಗಮಿಸಿ ಗಾಯಗೊಂಡ 13 ಮಂದಿ ಆರ್‌ಪಿಎಫ್‌ ಸಿಬ್ಬಂದಿಯನ್ನು ಸವಾಯಿ ಮಾಧೋಪುರ್‌ ಪ್ರಧಾನ ಕಚೇರಿಯ ಜನರಲ್‌ ಆಸ್ಪತ್ರೆಗೆ ರವಾನಿಸಿದ್ದಾರೆ ಹಾಗೂ ಎಲ್ಲ ಗಾಯಾಳುಗಳ ಸ್ಥಿತಿ ಸ್ಥಿರವಾಗಿದೆ.