Wednesday, 11th December 2024

13,596 ಹೊಸ ಕರೋನಾ ಸೋಂಕು ಪ್ರಕರಣ ದೃಢ

#covid

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 13,596 ಹೊಸ ಕರೋನಾ ಸೊಂಕು ಪ್ರಕರಣಗಳು ದಾಖಲಾಗಿದೆ. ಇದೇ ವೇಳೆ 1,89,694 ಮಂದಿ ಸಕ್ರೀಯ ಸೋಂಕಿತರು ಇದ್ದಾರೆ.

ಒಟ್ಟು ಕೇಸ್ ಲೋಡ್ ಈಗ 3,40,81,315 ಕ್ಕೆ ತಲುಪಿದೆ. ಗರಿಷ್ಠ ಪ್ರಕರಣಗಳನ್ನು ದಾಖಲಿಸಿದ ಮೊದಲ ಐದು ರಾಜ್ಯಗಳಲ್ಲಿ ಕೇರಳವು 7,555 ಪ್ರಕರಣ ಗಳನ್ನು ಹೊಂದಿದೆ. ಮಹಾರಾಷ್ಟ್ರವು 1,715 ಪ್ರಕರಣಗಳು, ತಮಿಳುನಾಡು 1,218 ಪ್ರಕರಣಗಳು, ಪಶ್ಚಿಮ ಬಂಗಾಳ 624 ಪ್ರಕರಣಗಳು ಮತ್ತು ಒಡಿಶಾ 443 ಪ್ರಕರಣಗಳು ಇವೆ.

ಐದು ರಾಜ್ಯಗಳು 84.99% ಹೊಸ ಪ್ರಕರಣಗಳನ್ನು ವರದಿ ಮಾಡಿದ್ದು, ಕೇರಳ ಮಾತ್ರ 55.57% ಪ್ರಕರಣಗಳಿಗೆ ಕಾರಣವಾಗಿದೆ.