Friday, 4th October 2024

ಗಡಿಯಲ್ಲಿ ರೈತರ 14 ತಿಂಗಳ ಪ್ರತಿಭಟನೆ ಅಂತ್ಯ

farmer Protest

ನವದೆಹಲಿ: ರಾಷ್ಟ್ರ ರಾಜಧಾನಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಅಂತಿಮವಾಗಿ ಚಳವಳಿಯನ್ನು ಕೊನೆ farmer Protestಗೊಳಿಸಲು ನಿರ್ಧರಿಸಿದ್ದಾರೆ .

ಪ್ರತಿಭಟನೆಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳನ್ನು ಹಿಂಪಡೆಯುವುದು ಮತ್ತು ವಿವಾದಿತ ಕೃಷಿ ಕಾನೂನುಗಳ ವಿರುದ್ಧದ ಚಳವಳಿಯ ಸಂದರ್ಭದಲ್ಲಿ ಮೃತ ಪಟ್ಟಿದ್ದ ರೈತರ ಕುಟುಂಬಗಳಿಗೆ ಪರಿಹಾರ ಸೇರಿದಂತೆ ಪ್ರತಿಭಟನಾ ನಿರತ ರೈತರು ಮಂಡಿಸಿದ ಎಲ್ಲಾ ಬೇಡಿಕೆಗಳನ್ನು ಕೇಂದ್ರವು ಅಂಗೀಕರಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಬಂದಿದೆ.

ಪ್ರತಿಭಟನೆಯ ನೇತೃತ್ವ ವಹಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ ಬುಧವಾರ ತಮ್ಮ 14 ತಿಂಗಳ ಪ್ರತಿಭಟನೆಯನ್ನು ಗುರುವಾರ ಮಧ್ಯಾಹ್ನ ಹಿಂತೆಗೆದುಕೊಳ್ಳಲಾಗುವುದು ಎಂದು ತಿಳಿಸಿತ್ತು.

ಪ್ರತಿಭಟನಾ ನಿರತ ರೈತರ ಬೇಡಿಕೆಗಳು ಇಂತಿವೆ.

ಪ್ರತಿಭಟನೆಯ ಸಂದರ್ಭದಲ್ಲಿ ಸಾವನ್ನಪ್ಪಿದ ಧರಣಿ ನಿರತ ರೈತರ ಎಲ್ಲಾ ಕುಟುಂಬ ಗಳಿಗೆ ಪರಿಹಾರ.

ಹುಲ್ಲು ಸುಡುವ ಪ್ರಕರಣಗಳಲ್ಲಿ ರೈತರಿಗೆ ಯಾವುದೇ ಕ್ರಿಮಿನಲ್ ಮೊಕದ್ದಮೆ ಹೂಡಬಾರದು

ಸರ್ಕಾರವು ವಿದ್ಯುತ್ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವ ಮೊದಲು SKM ಅಥವಾ ಇತರ ರೈತ ಸಂಘಗಳೊಂದಿಗೆ ಚರ್ಚಿಸಬೇಕು.

ಕನಿಷ್ಠ ಬೆಂಬಲ ಬೆಲೆ ಕುರಿತು ಚರ್ಚಿಸಲು ಸಮಿತಿ ರಚಿಸುವುದು; ಸಮಿತಿಯಲ್ಲಿ ತಮ್ಮ ಸದಸ್ಯರನ್ನು ಪಟ್ಟಿ ಮಾಡುತ್ತದೆ ಮತ್ತು ಅದನ್ನು ರೈತರಿಗೆ ನೀಡುತ್ತದೆ.

ದೇಶದಲ್ಲಿ ಎಂಎಸ್‌ಪಿ ಮತ್ತು ಅದರ ಸಂಗ್ರಹಣೆಯಲ್ಲಿ ನಡೆಯುತ್ತಿರುವ ನೀತಿಯು ಹಾಗೆಯೇ ಮುಂದುವರಿಯುತ್ತದೆ.