Friday, 13th December 2024

ಸೋನಿಯಾ, ವೈಷ್ಣವ್ ಸೇರಿ 14 ರಾಜ್ಯಸಭಾ ಸದಸ್ಯರಿಂದ ಪ್ರಮಾಣ ವಚನ ಸ್ವೀಕಾರ

ವದೆಹಲಿ: ಕಾಂಗ್ರೆಸ್‍ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸೇರಿ 14 ಮಂದಿ ಗುರುವಾರ ರಾಜ್ಯಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ನೂತನ ಸಂಸತ್ ಭವನದಲ್ಲಿ ಉಪರಾಷ್ಟ್ರಪತಿ ಹಾಗೂ ರಾಜ್ಯ ಸಭಾಪತಿ ಜಗದೀಪ್ ಧನಕರ್ ಪ್ರಮಾಣ ವಚನ ಬೋಧಿಸಿದರು.

ಸೋನಿಯಾ ಗಾಂಧಿ ಅವರು ರಾಜಸ್ಥಾನದಿಂದ ಮೇಲ್ಮನೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರೆ, ವೈಷ್ಣವ್ ಒಡಿಶಾದಿಂದ ಅದೇ ಸದನದ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಕರ್ನಾಟಕದಿಂದ ಕಾಂಗ್ರೆಸ್ ನಾಯಕರಾದ ಅಜಯ್ ಮಾಕನ್ ಮತ್ತು ಸೈಯದ್ ನಾಸೀರ್ ಹುಸೇನ್, ಉತ್ತರಪ್ರದೇಶದ ಬಿಜೆಪಿ ನಾಯಕ ಆರ್‍ಪಿಎನ್ ಸಿಂಗ್ ಮತ್ತು ಪಶ್ಚಿಮ ಬಂಗಾಳದ ಬಿಜೆಪಿ ಸದಸ್ಯ ಸಮಿಕ್ ಭಟ್ಟಾಚಾರ್ಯ ಸೇರಿದಂತೆ 14 ಮಂದಿ ರಾಜ್ಯಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಜೆಡಿಯುನ ಸಂಜಯ್‍ಕುಮಾರ್ ಝಾ ಬಿಹಾರದ ಸದಸ್ಯರಾಗಿಯೂ, ಬಿಜೆಡಿಯ ಸುಭಾಶಿಶ್ ಖುಂಟಿಯಾ ಮತ್ತು ದೇಬಾಶಿಶ್ ಸಮಂತರಾಯರೂ ಒಡಿಶಾದಿಂದ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರೆ, ಬಿಜೆಪಿಯ ಮದನ್ ರಾಥೋಡ್ ರಾಜಸ್ಥಾನ ವನ್ನು ಪ್ರತಿನಿಧಿಸುವ ಆರ್‍ಎಸ್‍ಎಸ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ವೈಎಸ್‍ಆರ್‍ಸಿಪಿ ನಾಯಕರಾದ ಗೊಲ್ಲ ಬಾಬುರಾವ್, ಮೇದಾ ರಘುನಾಥ ರೆಡ್ಡಿ ಮತ್ತು ಯರ್ರಂ ವೆಂಕಟ ಸುಬ್ಬಾ ರೆಡ್ಡಿ ಮತ್ತು ತೆಲಂಗಾಣದ ಬಿಆರ್‍ಎಸ್ ಮುಖಂಡ ರವಿಚಂದ್ರ ವಡ್ಡಿರಾಜು ಅವರು ಆಂಧ್ರಪ್ರದೇಶ ರಾಜ್ಯವನ್ನು ಪ್ರತಿನಿಧಿಸುವ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ನಂತರ ಅವರೆಲ್ಲರೂ ಆರ್‍ಎಸ್‍ಎಸ್ ಅಧ್ಯಕ್ಷರೊಂದಿಗೆ ಗುಂಪು ಛಾಯಾಚಿತ್ರ ತೆಗೆಸಿಕೊಂಡರು.

ಒಡಿಶಾ ಮತ್ತು ರಾಜಸ್ಥಾನದ ಸದಸ್ಯರ ಅವ ಗುರುವಾರದಿಂದ ಆರಂಭವಾಗಿದೆ ಎಂದು ರಾಜ್ಯಸಭಾ ಕಾರ್ಯದರ್ಶಿ ತಿಳಿಸಿದ್ದಾರೆ. ಉಳಿದವರೆಲ್ಲರೂ ಬುಧವಾರದಿಂದ ತಮ್ಮ ಅವಧಿಯನ್ನು ಆರಂಭಿಸಿದ್ದಾರೆ. ಸೋನಿಯಾ ಗಾಂಧಿ ಅವರು ಮೊದಲ ಬಾರಿಗೆ ರಾಜ್ಯಸಭಾ ಸದಸ್ಯೆಯಾಗಿದ್ದಾರೆ.