Friday, 13th December 2024

ಕಟ್ಟಡ ಕಾರ್ಮಿಕರಿಗೆ 1500 ಸಹಾಯಧನ: ಮಹಾ ಸರ್ಕಾರ

ಮುಂಬೈ: ಮಹಾರಾಷ್ಟ್ರದಲ್ಲಿ ಲಾಕ್ಡೌನ್ ಜಾರಿಯಲ್ಲಿ ದ್ದು, ಸಂಕಷ್ಟದಲ್ಲಿರುವ ನಿರ್ಮಾಣ ಕಾರ್ಮಿಕರಿಗೆ ಆರ್ಥಿಕ ನೆರವು ನೀಡಲು ಸರ್ಕಾರ ಮುಂದಾಗಿದೆ.

ನಿರ್ಮಾಣ ಕಾರ್ಮಿಕರ ಖಾತೆಗಳಿಗೆ ತಲಾ 1500 ರೂಪಾಯಿ ಜಮಾ ಮಾಡಲಾಗಿದೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ನೋಂದಾಯಿತ 13 ಲಕ್ಷ ಕಾರ್ಮಿಕರಲ್ಲಿ 9.17 ಲಕ್ಷ ನಿರ್ಮಾಣ ಕಾರ್ಮಿಕರ ಖಾತೆಗೆ ಹಣ ಜಮಾ ಮಾಡಿದೆ.

ಇನ್ನು ಮಹಾರಾಷ್ಟ್ರದಲ್ಲಿ ಮೇ 1 ರವರೆಗೆ ಲಾಕ್ ಡೌನ್ ಮಾದರಿ ನಿರ್ಬಂಧ ವಿಧಿಸಿದ್ದು ಇನ್ನು 15 ದಿನ ನಿರ್ಬಂಧ ವಿಸ್ತರಿಸಲು ಚಿಂತನೆ ನಡೆಸಿದೆ.