ಮುಂಬೈ: ಭಾರತೀಯ ಷೇರುಪೇಟೆ ಕುಸಿತದ ಬಳಿಕ ಗುರುವಾರ ಸಕಾರಾತ್ಮಕವಾಗಿ ವಹಿವಾಟು ಆರಂಭಿಸಿದೆ. ಮುಂಬೈ ಷೇರು ಪೇಟೆ ಸೆನ್ಸೆಕ್ಸ್ 159 ಪಾಯಿಂಟ್ಸ್ ಏರಿಕೆಗೊಂಡರೆ, ನಿಫ್ಟಿ 30 ಪಾಯಿಂಟ್ಸ್ ಹೆಚ್ಚಳಗೊಂಡು 15 ಸಾವಿರ ಗಡಿಯಲ್ಲಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 159.12 ಪಾಯಿಂಟ್ಸ್ ಏರಿಕೆಗೊಂಡು 50061.76ಗೆ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 30.50 ಪಾಯಿಂಟ್ ಏರಿಕೆಗೊಂಡು 15060.70 ಕ್ಕೆ ಏರಿದೆ. ವಹಿವಾಟು ಆರಂಭಗೊಂಡಾಗ 1133 ಷೇರುಗಳು ಏರಿಕೆಗೊಂಡರೆ, 304 ಷೇರುಗಳು ಕುಸಿದವು ಮತ್ತು 64 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಏರಿಕೆಗೊಂಡ ಷೇರುಗಳು:
ಟೈಟಾನ್ ಕಂಪನಿಯ ಷೇರುಗಳು ತಲಾ 15 ರೂ.ಗಳಷ್ಟು ಏರಿಕೆಯಾಗಿ 1,536.60 ರೂ., ಐಒಸಿ ಷೇರುಗಳು1 ರೂ.ಗಳ ಏರಿಕೆ ಕಂಡು 107.90 ರೂ., ಲಾರ್ಸೆನ್ ಷೇರು 14 ರೂ.ಗಳಿಂದ 1,417.00 ರೂ., ಐಸಿಐಸಿಐ ಬ್ಯಾಂಕ್ ಷೇರುಗಳು 5 ರೂ.ಗಳ ಏರಿಕೆ ಕಂಡು 630.70 ರೂ. ಗಳ ಲಾಭದೊಂದಿಗೆ ತೆರೆಯಿತು.
ಇಳಿಕೆಗೊಂಡ ಷೇರುಗಳು:
ಟಾಟಾ ಸ್ಟೀಲ್ ಷೇರುಗಳು 32 ರೂ.ಗಳ ಕುಸಿತ ಕಂಡು 1,132.60 ರೂ., ಜೆಎಸ್‌ಡಬ್ಲ್ಯೂ ಸ್ಟೀಲ್ ಷೇರುಗಳು 11 ರೂ.ಗಳ ಕುಸಿತ ಕಂಡು 694.45 ರೂ., ಆಕ್ಸಿಸ್ ಬ್ಯಾಂಕ್ ಷೇರುಗಳು 6 ರೂ.ಗಳ ಕುಸಿತ ಕಂಡು 710.95 ರೂ., ಬ್ರಿಟಾನಿಯದ ಷೇರುಗಳು 30 ರೂ.ಗಳಿಂದ 3,504.90 ರೂ. ತಲುಪಿದೆ.