Saturday, 14th December 2024

ಮಾಂಡೌಸ್ ಚಂಡಮಾರುತ: ಚೆನ್ನೈನಲ್ಲಿ 16 ವಿಮಾನಗಳ ರದ್ದು

ಚೆನ್ನೈ: ಮಾಂಡೌಸ್ ಚಂಡಮಾರುತದ ಗಾಳಿ ಚೆನ್ನೈನ ಕರಾವಳಿಯ ಮೇಲೆ ಹಾದು ಹೋಗುವುದರ ಜೊತೆಗೆ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಚಂಡಮಾರುತವು ನೆರೆಯ ರಾಜ್ಯವಾದ ತಮಿಳುನಾಡಿಗೆ ಅಪ್ಪಳಿಸುವ ಸಾಧ್ಯತೆ ಯಿದೆ.

ಹೀಗಾಗಿ, ಕೆಟ್ಟ ಹವಾಮಾನದಿಂದಾಗಿ ಚೆನ್ನೈ ವಿಮಾನ ನಿಲ್ದಾಣದಲ್ಲಿ 16 ವಿಮಾನಗಳನ್ನು ರದ್ದುಗೊಳಿಸಲಾಗಿದೆ.

ಚಂಡಮಾರುತದ ಭೀತಿಯಿಂದಾಗಿ ತಮಿಳುನಾಡು ಸರ್ಕಾರ ಸಹಾಯವಾಣಿ ಸಂಖ್ಯೆ: 044-2538-4530 ಬಿಡುಗಡೆ ಮಾಡಿದೆ. ಚಂಡಮಾರುತದ ತೀವ್ರತೆ ಕಡಿಮೆ ಇರಲಿದ್ದು, 3 ಜಿಲ್ಲೆಗಳಲ್ಲಿ ರೆಡ್ ಅಲರ್ಟ್​ ಘೋಷಿಸಲಾಗಿದೆ. ಚೆಂಗಲ್ಪಟ್ಟು, ಕಾಂಚೀಪುರಂ, ವಿಲ್ಲುಪುರಂ ಜಿಲ್ಲೆಗಳಲ್ಲಿ ರೆಡ್ ಅಲರ್ಟ್​ ಘೋಷಿಸಲಾಗಿದೆ. ಚೆನ್ನೈ ಸೇರಿದಂತೆ ತಮಿಳುನಾಡಿನ 12 ಜಿಲ್ಲೆಗಳಲ್ಲಿಳೆ ಕೂಡ ಶಾಲಾ-ಕಾಲೇಜುಗಳನ್ನು ಮುಚ್ಚಲಾಗುವುದು.

ಚಂಡಮಾರುತದ ಗಾಳಿಯು ಚೆನ್ನೈ ಕರಾವಳಿಯ ಮೇಲೆ ಹಾದು ಹೋಗುವುದರ ಜೊತೆಗೆ ಭಾರೀ ಮಳೆಯ ಮುನ್ಸೂಚನೆ ಇದೆ. ಪುದುಚೇರಿ ಬಂದರಿನಲ್ಲಿ ಚಂಡಮಾರುತದ ಹೈ ಅಲರ್ಟ್​ ಘೋಷಿಸಲಾಗಿದ್ದು, ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ತಿಳಿಸಲಾಗಿದೆ.