Saturday, 14th December 2024

ಕಂದರಕ್ಕೆ ಬಿದ್ದ ಖಾಸಗಿ ಬಸ್: 16 ಜನರ ಸಾವು

ಧರ್ಮಶಾಲ: ಹಿಮಾಚಲ ಪ್ರದೇಶದ ಕುಲುವಿನ ಸೈನ್ಸ್ ಕಣಿವೆಯಲ್ಲಿ ಸೋಮವಾರ ಬೆಳಿಗ್ಗೆ ಖಾಸಗಿ ಬಸ್ ಆಳವಾದ ಕಂದರಕ್ಕೆ ಬಿದ್ದ ಪರಿಣಾಮ ಶಾಲಾ ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಮೃತಪಟ್ಟಿದ್ದಾರೆ.

ಬಸ್ಸಿನಲ್ಲಿ ಸುಮಾರು 45 ಮಂದಿ ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದ್ದು ಕೆಲವರು ಅಚ್ಚರಿ ರೀತಿಯಲ್ಲಿ ಅಪಾಯದಿಂದ ಪಾರಾಗಿದ್ದಾರೆ.

ಘಟನೆಯಲ್ಲಿ 20ಕ್ಕೂ ಹಚ್ಚು ಮಂದಿಗೆ ಗಾಯಗೊಂಡಿರುವ ಶಂಕೆ ವ್ಯಕ್ತವಾ ಗಿದೆ. ಅಪಘಾತದ ಸ್ಥಳವು ಶಿಮ್ಳ ಜಿಲ್ಲಾ ಕೇಂದ್ರದಿಂದ ಸುಮಾರು 60 ಕಿ.ಮೀ ದೂರದಲ್ಲಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.