ಮುಂಬೈ: ಷೇರು ವಹಿವಾಟಿನಲ್ಲಿ ಭಾರೀ ಇಳಿಕೆ ಕಂಡಿದ್ದ ಮುಂಬೈ ಷೇರುಪೇಟೆ ಬುಧವಾರ ಉತ್ತಮ ವಹಿವಾಟು ನಡೆಸಿದ್ದು, ಸಂವೇದಿ ಸೂಚ್ಯಂಕ 187 ಅಂಕ ಏರಿಕೆ ಕಂಡಿದೆ.
ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕ ಆರಂಭಿಕ ವಹಿವಾಟಿನಲ್ಲಿ 187.89 ಅಂಕ ಏರಿಕೆಯಾಗಿದ್ದು, 58,852.22 ಅಂಕಗಳಲ್ಲಿ ವಹಿವಾಟು ನಡೆಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 59.85 ಅಂಕ ಏರಿಕೆಯೊಂದಿಗೆ 17,563.20ರ ಗಡಿ ತಲುಪಿದೆ.
ಸನ್ ಫಾರ್ಮಾ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಲಾಭಗಳಿಸಿದೆ. ಮತ್ತೊಂದೆಡೆ ಬಜಾಜ್ ಫಿನ್ ಸರ್ವ್, ಟೆಕ್ ಮಹೀಂದ್ರ, ಮಾರುತಿ, ಏಷ್ಯನ್ ಪೇಂಟ್ಸ್, ಇನ್ಫೋಸಿಸ್ ಷೇರು ನಷ್ಟ ಕಂಡಿದೆ.
ಕಳೆದ ಮಂಗಳವಾರ ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 198.44 ಅಂಕ ಏರಿಕೆಯೊಂದಿಗೆ 58,664.33 ಅಂಕಗಳಲ್ಲಿ ವಹಿವಾಟು ಮುಕ್ತಾಯಗೊಂಡಿತ್ತು.
ಎನ್ ಎಸ್ ಇ ನಿಫ್ಟಿ 86.80 ಅಂಕ ಏರಿಕೆಯೊಂದಿಗೆ 17,503.35 ಅಂಕಗಳ ಗಡಿ ಮುಟ್ಟಿತ್ತು.