Sunday, 13th October 2024

2 ದಿನಗಳಲ್ಲಿ 1458 ಭಾರತೀಯರು ತಾಯ್ನಾಡಿಗೆ

ದೆಹಲಿ:

ವಿದೇಶಲ್ಲಿ ಸಿಲುಕಿರುವ ಭಾರತೀಯನ್ನು ಮರಳಿ ಕರೆತರಲು ಪ್ರಾಾರಂಭಿಸಿದ ವಂದೇ ಭಾರತ್ ಮಿಷನ್ ಅಡಿಯಲ್ಲಿ ಮೊದಲ ಎರಡು ದಿನಗಳಲ್ಲಿ 17 ಮಕ್ಕಳು ಸೇರಿದಂತೆ 1,458 ಭಾರತೀಯರು ತಾಯ್ನಾಡಿಗೆ ಮರಳಿದ್ದಾರೆ.

ಮೇ.7 ರಂದು ವಿದೇಶದಲ್ಲಿ ಸಿಲುಕಿರುವವರನ್ನು ಕರೆತರುವ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಒಂಬತ್ತು ಶಿಶುಗಳು ಸೇರಿದಂತೆ 363 ಜನರು ಯುಎಇ ಯಿಂದ ಮೊದಲ ದಿನ ಎರಡು ವಿಮಾನಗಳಲ್ಲಿ ಮರಳಿದರು. ಶುಕ್ರವಾರ ಎಂಟು ಮಕ್ಕಳು ಸೇರಿದಂತೆ 1.095 ಭಾರತೀಯರನ್ನು ಏರ್ ಇಂಡಿಯಾದ ಎರಡು ವಿಮಾನಗಳು ಮತ್ತು ಏರ್ ಇಂಡಿಯಾ ಎಕ್‌ಸ್‌‌ಪ್ರೆಸ್‌ನ ನಾಲ್ಕು ವಿಮಾನಗಳಲ್ಲಿ ಮರಳಿ ಇಲ್ಲಿಗೆ ಕರೆತಂದಿವೆ. ಸಿಂಗಾಪುರದಿಂದ ಶುಕ್ರವಾರ 234 ಜನರನ್ನು ದೆಹಲಿಗೆ ಕರೆತರಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.