Wednesday, 11th December 2024

ಬೆಂಕಿ ದುರಂತ: ಒಬ್ಬ ಕಾರ್ಮಿಕನ ಸಾವು, 20 ಮಂದಿಗೆ ಗಾಯ

ಸೂರತ್: ಗುಜರಾತಿನ ಸೂರತ್ ನಗರದಲ್ಲಿನ ರಾಸಾಯನಿಕ ಕಾರ್ಖಾನೆ ಯೊಂದರಲ್ಲಿ ಸಂಭವಿಸಿದ ಭಾರೀ ಬೆಂಕಿ ದುರಂತದಲ್ಲಿ ಒಬ್ಬ ಕಾರ್ಮಿಕ ಮೃತಪಟ್ಟು, 20 ಮಂದಿ ಗಾಯಗೊಂಡಿದ್ದಾರೆ.

ಶನಿವಾರ ರಾತ್ರಿ ಸಚಿನ್ ಗುಜರಾತ್ ಕೈಗಾರಿಕ ಅಭಿವೃದ್ಧಿ ಮಂಡಳಿ (ಜಿಐಡಿಸಿ) ಪ್ರದೇಶದಲ್ಲಿರುವ ಅನುಪಮ್ ರಸಾಯನ್ ಇಂಡಿಯಾ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸಂಗ್ರಹಿಸಿದ್ದ ರಾಸಾಯನಿಕ ಕಂಟೇನರ್ ಸ್ಫೋಟ ಗೊಂಡಿದೆ.

ಬೆಂಕಿಯು ಶೀಘ್ರದಲ್ಲೇ ಕಾರ್ಖಾನೆಯಾದ್ಯಂತ ಹರಡಿತು, ಒಬ್ಬ ಕಾರ್ಮಿಕ ದಹನಗೊಂಡಿದ್ದಾನೆ , ಮೃತದೇಹವನ್ನು ತಡರಾತ್ರಿ ಹೊರತೆಗೆಯಲಾಗಿದೆ ಸುಮಾರು 20 ಕಾರ್ಮಿಕರು ಗಾಯಗೊಂಡಿದ್ದು ಅವರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದರು.

ಮೂವರು ಕಾರ್ಮಿಕರು ನಾಪತ್ತೆಯಾಗಿದ್ದಾರೆ ಕಾರ್ಖಾನೆ ಆವರಣದಲ್ಲಿ ಶೋಧ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿ ಯೊಬ್ಬರು ತಿಳಿಸಿದ್ದಾರೆ.