Friday, 13th December 2024

ಪ್ರೇಕ್ಷಕರ ಗ್ಯಾಲರಿ ಕುಸಿದು 200 ಮಂದಿಗೆ ಗಾಯ

ಮಲಪ್ಪುರಂ : ಕೇರಳದ ಮಲಪ್ಪುರಂನ ಪೂಂಗೋಡ್ನಲ್ಲಿ ಫುಟ್ ಬಾಲ್ ಪಂದ್ಯ ವೀಕ್ಷಣೆ ವೇಳೆ ಭೀಕರ ದುರಂತ ಸಂಭವಿಸಿದೆ.

ಪ್ರೇಕ್ಷಕರ ಗ್ಯಾಲರಿ ಕುಸಿದು ಬಿದ್ದು 200 ಮಂದಿಗೆ ಗಾಯಗೊಂಡಿರುವ ಘಟನೆ ನಡೆದಿದೆ.

ಮಲಪ್ಪುರಂನ ಪೂಂಗೋಡ್ನಲ್ಲಿ ನಡೆದ ಫುಟ್ಬಾಲ್ ಪಂದ್ಯದ ವೀಕ್ಷಣೆಗೆ ತಾತ್ಕಾಲಿಕ ಪ್ರೇಕ್ಷಕರು ಕುಳಿತುಕೊಳ್ಳಲು ನಿರ್ಮಿಸಿದ್ದ ಗ್ಯಾಲರಿ ಕುಸಿದು ಬಿದ್ದ ಪರಿಣಾಮ 200ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದ್ದು, ಐವರಿಗೆ ಗಂಭೀರ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.