Saturday, 14th December 2024

2000 ರೂ. ನೋಟುಗಳ ವಿನಿಮಯ/ಠೇವಣಿಗೆ ಇಂದು ಕೊನೆಯ ದಿನ

ಹೈದರಾಬಾದ್: ಎರಡು ಸಾವಿರ ಮುಖಬೆಲೆಯ ನೋಟುಗಳ ವಿನಿಮಯ ಮಾಡಿ ಕೊಳ್ಳಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ನೀಡಿದ್ದ ಗಡುವು ಶನಿವಾರ ಮುಕ್ತಾಯ ಗೊಳ್ಳಲಿದೆ.

ಕಳೆದ ಮೇ 19ರಂದು ರೂ.2000 ನೋಟುಗಳ ಚಲಾವಣೆಯನ್ನ ರದ್ದುಪಡಿಸಿ ಆರ್‌ಬಿಐ ಆದೇಶ ಮಾಡಿತ್ತು.

2018-19ರಲ್ಲಿ ಆರ್​ಬಿಐ ನೋಟುಗಳನ್ನು ಮುದ್ರಣ ನಿಲ್ಲಿಸಿತ್ತು. ಈ ನೋಟುಗಳನ್ನು ಠೇವಣಿ ಇಡಲು ಅಥವಾ ವಿನಿಮಯ ಮಾಡಿಕೊಳ್ಳಲು ಸುಮಾರು ನಾಲ್ಕು ತಿಂಗಳ ಕಾಲಾವಕಾಶ ನೀಡಿ ಸೆಪ್ಟೆಂಬರ್ 30 ಕೊನೆಯ ದಿನಾಂಕ ನಿಗದಿಪಡಿಸಿತ್ತು. 2016 ರಲ್ಲಿ ನೋಟು ಅಮಾನ್ಯೀಕರಣದ ಬಳಿಕ ಆರ್​ಬಿಐ ರೂ.2 ಸಾವಿರ ನೋಟುಗಳನ್ನು ಜಾರಿ ಗೊಳಿಸಿತ್ತು.

ಈ ಬಗ್ಗೆ ಮೇ 19ರಂದು ಆರ್​​ಬಿಐ ಪತ್ರಿಕಾ ಪ್ರಕಟಣೆಯಲ್ಲಿ, ರೂ.2000 ಮುಖಬೆಲೆಯ ನೋಟುಗಳನ್ನು ಠೇವಣಿ ಮಾಡುವ ಅಥವಾ ವಿನಿಮಯ ಮಾಡಿಕೊಳ್ಳಲು ಸೆಪ್ಟೆಂಬರ್ 30, 2023 ರವರೆಗೆ ಲಭ್ಯವಿರುತ್ತದೆ.

ಶೇ.93ರಷ್ಟು ನೋಟುಗಳನ್ನು ಜನರು ಬ್ಯಾಂಕ್‌ಗಳಿಗೆ ಹಿಂತಿರುಗಿಸಿದ್ದಾರೆ ಎಂದು ಸೆಪ್ಟೆಂಬರ್ 2ರಂದು ಆರ್‌ಬಿಐ ವರದಿ ಮಾಡಿತ್ತು.

ರೂ. 2000 ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಲು ರಿಸರ್ವ್ ಬ್ಯಾಂಕ್ ಇಂತಿಷ್ಟು ಮೊತ್ತವನ್ನು ನಿಗದಿಪಡಿಸಿದೆ. ವ್ಯಕ್ತಿಯೊಬ್ಬರು 20,000 ರೂ. ವರೆಗೆ ನೋಟುಗಳನ್ನು ಒಮ್ಮೆಗೆ ಬದಲಾಯಿಸಿಕೊಳ್ಳಲು ಅವಕಾಶ ಕಲ್ಪಿಸಿದೆ.

ಮೂಲಗಳ ಪ್ರಕಾರ ಕೊನೆಯ ದಿನವನ್ನು ಒಂದು ತಿಂಗಳ ಕಾಲ ವಿಸ್ತರಿಸುವ ಸಾಧ್ಯತೆ ಎಂದು ತಿಳಿದುಬಂದಿದೆ.