Saturday, 14th December 2024

ಇಂದೇ ರಾಜ್ಯಗಳಿಗೆ 20 ಸಾವಿರ ಕೋಟಿ ರೂ. ಸೆಸ್ ವಿತರಣೆ: ಸಚಿವೆ ನಿರ್ಮಲಾ

ನವದೆಹಲಿ: ದೇಶದಲ್ಲಿ ಈ ವರ್ಷ ಇದುವರೆಗೆ ಸಂಗ್ರಹಿಸಿರುವ ಸೆಸ್ ನಲ್ಲಿ ಸುಮಾರು 20 ಸಾವಿರ ಕೋಟಿ ರೂಪಾಯಿ ಸೆಸ್ ಸೋಮವಾರ ರಾತ್ರಿಯಲ್ಲಿ ಎಲ್ಲಾ ರಾಜ್ಯಗಳಿಗೆ ವಿತರಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

42ನೇ ಸರಕು ಸೇವಾ ತೆರಿಗೆ ಮಂಡಳಿ- ಜಿಎಸ್ ಟಿ ಸಭೆಯ ಅಧ್ಯಕ್ಷತೆ ವಹಿಸಿ ರಾಜ್ಯಗಳೊಂದಿಗೆ ಚರ್ಚೆ ನಡೆಸಿದ ಬಳಿಕ ಸುದ್ದಿ ಗೋಷ್ಠಿಯಲ್ಲಿ ಈ ಮಾಹಿತಿ ತಿಳಿಸಿದ್ದಾರೆ. 2022ರ ಜೂನ್ ನಂತರವೂ ಸೆಸ್ ವಿತರಿಸುವುದನ್ನು ವಿಸ್ತರಿಸಲಾಗಿದೆ ಎಂದು ಹೇಳಿದ್ದಾರೆ.

ಸಭೆಯಲ್ಲಿ ಕೇಂದ್ರ ರಾಜ್ಯ ಹಣಕಾಸು ಸಚಿವ ಅನುರಾಗ್ ಸಿಂಗ್ ಠಾಕೂರ್ ಸೇರಿ ಹಲವರು ಉಪಸ್ಥಿತರಿದ್ದರು.