Friday, 13th December 2024

ಉ.ಪ್ರದೇಶದಲ್ಲಿ 2,200 ಡೆಂಘಿ ಪ್ರಕರಣ ದಾಖಲು

ವದೆಹಲಿ : ಉತ್ತರ ಪ್ರದೇಶದಲ್ಲಿ 2,200ಕ್ಕೂ ಹೆಚ್ಚು ಡೆಂಘಿ ಪ್ರಕರಣಗಳು ದಾಖಲಾ ಗಿದ್ದು, ರಾಜ್ಯದ ರಾಜಧಾನಿ ಲಕ್ನೋದಲ್ಲಿ 380 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.

ಅಕ್ಟೋಬರ್ 1 ರಿಂದ 5 ರ ನಡುವೆ ದೆಹಲಿಯಲ್ಲಿ 300 ಕ್ಕೂ ಹೆಚ್ಚು ಪ್ರಕರಣಗಳು ದಾಖ ಲಾಗಿವೆ. ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚುತ್ತಿರುವ ಡೆಂಘೆ ಪ್ರಕರಣಗಳ ಹಿನ್ನೆಲೆಯಲ್ಲಿ, ದೆಹಲಿ ಸರ್ಕಾರವು ಎಲ್ಲಾ ದೆಹಲಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಶೇ.10-15 ಹಾಸಿಗೆಗಳನ್ನು ಕಾಯ್ದಿರಿಸುವಂತೆ’ ಆದೇಶಿಸಿದೆ.

ಫಿರೋಜಾಬಾದ್, ಆಗ್ರಾ ಮತ್ತು ಇಟಾವಾ ಜಿಲ್ಲೆಗಳಲ್ಲಿ ಡೆಂಘಿ ನಿರ್ವಹಣೆಗಾಗಿ ಸಾರ್ವ ಜನಿಕ ಆರೋಗ್ಯ ಕ್ರಮಗಳನ್ನು ತೆಗೆದು ಕೊಳ್ಳುವಲ್ಲಿ ಉತ್ತರ ಪ್ರದೇಶದ ಅಧಿಕಾರಿ ಗಳೊಂದಿಗೆ ಸಹಕರಿಸಲು ಕೇಂದ್ರ ಆರೋಗ್ಯ ಸಚಿವಾಲಯವು ಉನ್ನತ ಮಟ್ಟದ ಆರು ಸದಸ್ಯರ ತಂಡವನ್ನು ಕಳುಹಿಸಿದೆ.

ಬಿಹಾರದಲ್ಲೂ ಡೆಂಘಿ ಪ್ರಕರಣಗಳು ಹೆಚ್ಚಾಗುತ್ತಿವೆ. ರಾಜ್ಯವು 2022 ರಲ್ಲಿ ಇಲ್ಲಿಯವರೆಗೆ 3,965 ಡೆಂಘಿ ಪ್ರಕರಣಗಳನ್ನು ದಾಖಲಿಸಿದೆ. ಅದರಲ್ಲಿ 78 ಪ್ರತಿಶತ – ಅಥವಾ 3,107 ಪ್ರಕರಣಗಳು – ಪಾಟ್ನಾದಿಂದ ಬಂದಿವೆ.