ನವದೆಹಲಿ: ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಗುರುವಾರ ಏರಿಕೆಯೊಂದಿಗೆ ದಿನಾಂತ್ಯದ ವ್ಯವಹಾರ ಮುಕ್ತಾಯವಾಗಿದೆ.
ಸೆನ್ಸೆಕ್ಸ್ ಸೂಚ್ಯಂಕವು 223.13 ಪಾಯಿಂಟ್ ಹೆಚ್ಚಳವಾಗಿ, 51,531.52 ಪಾಯಿಂಟ್ಸ್ ಮತ್ತು ನಿಫ್ಟಿ 66.80 ಪಾಯಿಂಟ್ ಮೇಲೇರಿ, 15,173.30 ಪಾಯಿಂಟ್ ನೊಂದಿಗೆ ವಹಿವಾಟು ಚುಕ್ತಾ ಮಾಡಿದೆ.
ವಾಹನ ಮತ್ತು ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳ ಷೇರುಗಳನ್ನು ಹೊರತು ಪಡಿಸಿ ಉಳಿದ ವಲಯದ ಸೂಚ್ಯಂಕಗಳು ಏರಿಕೆಯಲ್ಲೇ ಮುಕ್ತಾಯಗೊಂಡಿವೆ.