Saturday, 14th December 2024

ಕುಲಾಧಿಪತಿ ಒಪ್ಪಿಗೆಯಿಲ್ಲದೆ ರಾಜ್ಯದ 25 ವಿವಿಗಳಿಗೆ ಕುಲಪತಿಗಳ ನೇಮಕ

ಕೋಲ್ಕತಾ: ಕುಲಾಧಿಪತಿಯಾಗಿ ತನ್ನ ಒಪ್ಪಿಗೆಯಿಲ್ಲದೆ ರಾಜ್ಯದ 25 ವಿವಿಗಳಿಗೆ ಈವರೆಗೆ ಕುಲಪತಿ ಗಳನ್ನು ನೇಮಕಗೊಳಿಸಲಾಗಿದೆ ಎಂದು ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧಂಕರ್ ಶನಿವಾರ ಆರೋಪಿಸಿದ್ದಾರೆ.

ಕುಲಾಧಿಪತಿಯಾಗಿ ಧಂಕರ್, ಕುಲಪತಿಗಳಾಗಿ ನೇಮಕಗೊಳಿಸಿದ್ದ ಆರ್ಟ್ಸ್ ಫ್ಯಾಕಲ್ಟಿಯ ಡೀನ್ ಪ್ರೊಫೆಸರ್ ತಪನ್ ಮಂಡಲ್ ಅವರು ವೈಯಕ್ತಿಕ ಕಾರಣಗಳಿಂದ ಹುದ್ದೆಯನ್ನು ಸ್ವೀಕರಿಸಲು ನಿರಾಕರಿಸಿದ ಬಳಿಕ ಮಮತಾ ಬ್ಯಾನರ್ಜಿ ಸರಕಾರ, ಪ್ರೊ.ಸೋಮ ಬಂಡೋಪಾಧ್ಯಾಯ ಅವರನ್ನು ಡೈಮಂಡ್ ಹಾರ್ಬರ್ ಮಹಿಳಾ ವಿವಿಯ ನೂತನ ಕುಲಪತಿಗಳಾಗಿ ನೇಮಕಗೊಳಿಸಿದ 24 ಗಂಟೆಗಳಲ್ಲಿ ಈ ಆರೋಪ ಹೊರಬಿದ್ದಿದೆ.

ಶೋಧ ಸಮಿತಿಯು ಆಯ್ಕೆ ಮಾಡಿದ್ದ ಕುಲಪತಿಗಳ ಹೆಸರುಗಳನ್ನು ರಾಜ್ಯಪಾಲರು ಒಪ್ಪಿಕೊಳ್ಳಬೇಕಿತ್ತು. ಅವರು ತನ್ನ ಒಪ್ಪಿಗೆ ನೀಡಲು ನಿರಾಕರಿಸಿದರೆ ಶಿಕ್ಷಣ ಇಲಾಖೆಗೆ ತನ್ನ ನಿರ್ಧಾರದೊಂದಿಗೆ ಮುಂದುವರಿಯುವ ಅಧಿಕಾರವಿದೆ ಎಂದು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಒತ್ತಿ ಹೇಳಿದೆ.

ಎರಡನೇ ಅವಧಿಗೆ ಕೋಲ್ಕತಾ ವಿವಿಯ ಕುಲಪತಿಗಳಾಗಿ ಪ್ರೊ.ಸೋನಾಲಿ ಚಕ್ರವರ್ತಿ ಬ್ಯಾನರ್ಜಿ ಅವರ ಮುಂದುವರಿಕೆ ಕುರಿತು ತಾನು 2021, ಆ.17ರಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಬರೆದಿದ್ದ ಪತ್ರವನ್ನು ಧಂಕರ್ ಶೇರ್ ಮಾಡಿಕೊಂಡಿದ್ದಾರೆ.

‘ಸೋನಾಲಿಯವರನ್ನು ಯಾವುದೇ ಆಯ್ಕೆಯಿಲ್ಲದೆ ಎರಡನೇ ಅವಧಿಗೆ ಮುಂದುವರಿಸಲಾಗಿದೆ. ಆ.17ರ ಪತ್ರಕ್ಕೆ ಮುಖ್ಯಮಂತ್ರಿಗಳು ಉತ್ತರಿಸಿಲ್ಲ. ಸೋನಾಲಿ ಯವರ ನೇಮಕದ ಆ.28ರ ಅಧಿಸೂಚನೆಯನ್ನು ಹಿಂದೆಗೆದುಕೊಳ್ಳುವಂತೆ ಕುಲಾಧಿಪತಿಗಳು ಸೆ.16ರಂದು ನಿರ್ದೇಶನ ನೀಡಿದ್ದರು.