Wednesday, 11th December 2024

ಕೋವಿಡ್-19: 253 ಹೊಸ ಪ್ರಕರಣ ದೃಢ

ವದೆಹಲಿ: ದೇಶದಲ್ಲಿ ಕೋವಿಡ್-19 ದೃಢಪಟ್ಟ 253 ಹೊಸ ಪ್ರಕರಣಗಳು ಕಳೆದ 24 ಗಂಟೆಗಳಲ್ಲಿ ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಹೇಳಿದೆ.

ಸಚಿವಾಲಯ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಸಕ್ರಿಯ ಪ್ರಕರಣಗಳ ಸಂಖ್ಯೆ ಯಲ್ಲಿ ಅಲ್ಪ (75) ಇಳಿಕೆ ಕಂಡುಬಂದಿದೆ.

ಸದ್ಯ 4,597 ಪ್ರಕರಣಗಳು ದೇಶದಲ್ಲಿ ಸಕ್ರಿಯವಾಗಿವೆ. ಈ ಪ್ರಮಾಣ ಶುಕ್ರವಾರ 4,672 ಆಗಿತ್ತು. ದೇಶದಲ್ಲಿ ಇದುವರೆಗೆ ಪತ್ತೆ ಯಾಗಿರುವ ಪ್ರಕರಣಗಳ ಸಂಖ್ಯೆ 4,46,73,166ಕ್ಕೆ ತಲುಪಿದೆ. ಇದುವರೆಗೆ 219.93 ಕೋಟಿ ಡೋಸ್‌ ಕೋವಿಡ್ ಲಸಿಕೆ ವಿತರಿಸಲಾಗಿದೆ.

ಕೋವಿಡ್‌ ಪ್ರಕರಣಗಳ ಒಟ್ಟು ಸಂಖ್ಯೆ 2020ರ ಡಿಸೆಂಬರ್‌ 19ರಂದು ಒಂದು ಕೋಟಿ, 2021ರ ಮೇ 4 ರಂದು ಎರಡು ಕೋಟಿ ಹಾಗೂ ಜೂನ್‌ 23ರಂದು ಮೂರು ಕೋಟಿ ಗಡಿ ದಾಟಿತ್ತು.