Saturday, 23rd November 2024

2 ಸಾವಿರದ 539 ಜನರಲ್ಲಿ ಹೊಸದಾಗಿ ಸೋಂಕು ಪತ್ತೆ

#corona

ನವದೆಹಲಿ : ದೇಶದಲ್ಲಿ ಕರೋನಾ ಸೊಂಕಿತರ ಸಂಖ್ಯೆ ಇನ್ನಷ್ಟು ಕುಸಿತಗೊಂಡಿದೆ. ಕಳೆದ 24 ಗಂಟೆಯಲ್ಲಿ 2,539 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸಾವಿನ ಸಂಖ್ಯೆಯಲ್ಲಿಯೂ ಇಳಿಕೆಯಾಗಿದ್ದು, 24 ಗಂಟೆಯಲ್ಲಿ 60 ಜನ ಮಹಾಮಾರಿಗೆ ಬಲಿಯಾಗಿದ್ದಾರೆ.

ಈವರೆಗೆ ಕೋವಿಡ್ ಗೆ ಬಲಿಯಾದವರ ಸಂಖ್ಯೆ 5,16,132 ಕ್ಕೆ ಏರಿಕೆಯಾಗಿದೆ.

ಇನ್ನು ದೇಶದಲ್ಲಿ 30,799 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, 24 ಗಂಟೆಯಲ್ಲಿ 4,491 ಜನರು ಕೋವಿಡ್ ನಿಂದ ಗುಣಮುಖರಾ ಗಿದ್ದಾರೆ.  ದೇಶದಲ್ಲಿ ಈವರೆಗೆ 1,80,80,24,147 ಡೋಸ್ ಲಸಿಕೆ ಹಾಕಲಾಗಿದೆ.