Saturday, 23rd November 2024

ಸಂವೇದಿ ಸೂಚ್ಯಂಕ 254.33 ಅಂಕ ಕುಸಿತ

ಮುಂಬೈ: ಬುಧವಾರ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ 254.33 ಅಂಕಗಳಷ್ಟು ಇಳಿಕೆಯೊಂದಿಗೆ ದಿನಾಂತ್ಯದ ವಹಿವಾಟನ್ನು ಕೊನೆಗೊಳಿಸಿದೆ.

ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ 254.33 ಅಂಕಗಳಷ್ಟು ಇಳಿಕೆಯಾಗಿದ್ದು, 59,413.27 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ. ಎನ್ ಎಸ್ ಇ ನಿಫ್ಟಿ 37.30 ಅಂಕಗಳಷ್ಟು ಇಳಿಕೆಯಾಗಿದ್ದು, 17, 711.30 ಅಂಕಗಳಲ್ಲಿ ವಹಿವಾಟು ಕೊನೆಗೊಂಡಿದೆ.

ಸೆನ್ಸೆಕ್ಸ್, ನಿಫ್ಟಿ ಇಳಿಕೆಯಿಂದ ಎಚ್ ಡಿಎಫ್ ಸಿ, ಕೋಟಕ್ ಮಹೀಂದ್ರ ಬ್ಯಾಂಕ್, ಏಷ್ಯನ್ ಪೇಂಟ್ಸ್, ಆಲ್ಟ್ರಾ ಟೆಕ್ ಸಿಮೆಂಟ್ ಮತ್ತು ಎಚ್ ಯುಎಲ್ ಷೇರುಗಳು ನಷ್ಟ, ಏತನ್ಮಧ್ಯೆ ಕೋಲ್ ಇಂಡಿಯಾ, ಎನ್ ಟಿಪಿಸಿ, ಪವರ್ ಗ್ರಿಡ್ ಕಾರ್ಪೋರೇಶನ್, ಸನ್ ಫಾರ್ಮಾ ಮತ್ತು ಐಒಸಿ ಷೇರುಗಳು ಲಾಭ ಗಳಿಸಿದೆ.

ಮಂಗಳವಾರ ಬಾಂಬೆ ಷೇರು ಪೇಟೆಯಲ್ಲಿ ಸೂಚ್ಯಂಕ 410.28 ಅಂಕಗಳಷ್ಟು ಕುಸಿತ ಕಂಡಿದ್ದು, 59,667.60 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಮುಕ್ತಾಯವಾಗಿತ್ತು.