Saturday, 23rd November 2024

ಷೇರುಪೇಟೆ ಸೆನ್ಸೆಕ್ಸ್’ನಲ್ಲಿ 269 ಪಾಯಿಂಟ್ಸ್‌ ಏರಿಕೆ

ಮುಂಬೈ: ಜಾಗತಿಕ ಸಕಾರಾತ್ಮಕ ಸೂಚನೆಗಳ ಹಿನ್ನಲೆಯಲ್ಲಿ ಭಾರತೀಯ ಷೇರುಪೇಟೆ ಗುರುವಾರ ಜಿಗಿತ ಕಂಡಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 269 ಪಾಯಿಂಟ್ಸ್‌ ಏರಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 82 ಪಾಯಿಂಟ್ಸ್ ಹೆಚ್ಚಳಗೊಂಡಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 268.36 ಪಾಯಿಂಟ್ ಹೆಚ್ಚಾಗಿ 52117.84 ಮತ್ತು ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 82.20 ಪಾಯಿಂಟ್ ಏರಿಕೆಗೊಂಡು 15658.40 ಪಾಯಿಂಟ್ಸ್‌ಗೆ ಏರಿದೆ. ವಹಿವಾಟು ಆರಂಭಗೊಂಡಾಗ ಸುಮಾರು 1,528 ಷೇರುಗಳು ಏರಿಕೆಗೊಂಡರೆ, 278 ಷೇರುಗಳು ಕುಸಿದವು ಮತ್ತು 51 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ರಿಲಯನ್ಸ್ ಇಂಡಸ್ಟ್ರೀಸ್, ಇನ್ಫೋಸಿಸ್, ಟೈಟಾನ್ ಕಂಪನಿ, ಒಎನ್‌ಜಿಸಿ ಮತ್ತು ಪವರ್ ಗ್ರಿಡ್ ಕಾರ್ಪ್ , ಟಾಟಾ ಮೋಟಾರ್ಸ್‌ ಬಿಎಸ್‌ಇ ಸೆನ್ಸೆಕ್ಸ್‌ನಲ್ಲಿ ಪ್ರಮುಖ ಲಾಭ ಗಳಿಸಿದ ಷೇರುಗಳಾಗಿದ್ದು, ಮದರ್‌ಸುಮಿ, ಬಯೋಕಾನ್, ಟಾಟಾ ಸ್ಟೀಲ್ ಇಳಿಕೆ ಗೊಂಡಿವೆ.