Wednesday, 11th December 2024

ಡಾಲರ್ ಎದುರು ರೂಪಾಯಿ ಮೌಲ್ಯ 27 ಪೈಸೆ ಕುಸಿತ

ಮುಂಬೈ: ಹೂಡಿಕೆದಾರರ ನೀರಸ ಪ್ರತಿಕ್ರಿಯೆ ಹಿನ್ನಲೆಯಲ್ಲಿ ಬುಧವಾರವೂ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತಗೊಂಡಿದೆ.

ಬುಧವಾರ ಡಾಲರ್ ಎದುರು ರೂಪಾಯಿ ಮೌಲ್ಯ 27 ಪೈಸೆ ಕುಸಿದು ದಾಖಲೆಯ 78.40ಕ್ಕೆ ತಲುಪಿದೆ.

ವಿದೇಶಿ ನಿಧಿಯ ಹೊರಹರಿವು ಮತ್ತು ದೇಶೀಯ ಷೇರುಗಳಲ್ಲಿನ ನಷ್ಟದಿಂದಾಗಿ ಡಾಲರ್ ವಿರುದ್ಧ ರೂಪಾಯಿ ಮೌಲ್ಯ 27 ಪೈಸೆಗಳ ಕುಸಿದು 78.40 ದಾಖಲೆಯ ಕನಿಷ್ಠ ಮಟ್ಟಕ್ಕೆ ತಲುಪಿದೆ. ಗ್ರೀನ್‌ಬ್ಯಾಕ್ ಕೂಡ ರೂಪಾಯಿ ಮೌಲ್ಯ ಕುಸಿತದ ಮೇಲೆ ಪರಿಣಾಮ ಬೀರಿದೆ.

ಆದಾಗ್ಯೂ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಕಡಿಮೆಯಾಗು ತ್ತಿರುವುದು ರೂಪಾಯಿಯ ನಷ್ಟ ಪ್ರಮಾಣವನ್ನು ನಿರ್ಬಂಧಿಸಿದೆ ಎಂದು ಫಾರೆಕ್ಸ್ ವ್ಯಾಪಾರಿಗಳು ತಿಳಿಸಿದ್ದಾರೆ.

78.13 ರ ಇಂಟ್ರಾ-ಡೇ ಗರಿಷ್ಠ ಮತ್ತು 78.40 ರ ಕನಿಷ್ಠಕ್ಕೆ ಮಾರುಕಟ್ಟೆ ಸಾಕ್ಷಿಯಾಯಿತು. ದೇಶೀಯ ಘಟಕವು ಅಂತಿಮವಾಗಿ 78.40 ರ ದಾಖಲೆಯ ಕನಿಷ್ಠ ಮಟ್ಟದಲ್ಲಿ ವಹಿವಾಟು ಕೊನೆಗೊಳಿಸಿತು. ಇದು ಅದರ ಹಿಂದಿನ ಮುಕ್ತಾಯಕ್ಕಿಂತ 27 ಪೈಸೆ ಕಡಿಮೆಯಾಗಿದೆ.