Wednesday, 11th December 2024

ಪಾಕಿಸ್ತಾನ ಪರ ಘೋಷಣೆ: ಮೂವರ ಬಂಧನ

ರಾಂಚಿ: ಜಾರ್ಖಂಡ್ ಗಿರಿದಿಹ್ ಜಿಲ್ಲೆಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಿದ್ದು, ಘಟನೆಯಲ್ಲಿ ಮೂವರನ್ನು ಬಂಧಿಸಲಾಗಿದೆ.

ಜಾರ್ಖಂಡ್ ನಲ್ಲಿ ಪಂಚಾಯತ್ ಚುನಾವಣೆ ಆರಂಭವಾಗಿದೆ. ಈ ವೇಳೆ ಜಾರ್ಖಂಡ್‌ನ ಗಿರಿದಿಹ್ ಜಿಲ್ಲೆಯ ಗಂಡೆ ಬ್ಲಾಕ್‌ನಲ್ಲಿ ಮುಖ್ಯ ಅಭ್ಯರ್ಥಿಯೊಬ್ಬರ ನಾಮನಿರ್ದೇಶನಕ್ಕೆ ತೆರಳಿದ್ದರು. ಬೃಹತ್ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ಪಾಕಿಸ್ತಾನದ ಪರ ಘೋಷಣೆಗಳ ಪ್ರಕರಣವು ಮುನ್ನೆಲೆಗೆ ಬಂದಿದೆ.

ಇದನ್ನು ಗಾಂಡೇಯ ಸರ್ಕಲ್ ಆಫೀಸರ್ ರಫಿ ಆಲಂ ಮತ್ತು ಗಂಡೆ ಠಾಣೆ ಪ್ರಭಾರಿ ಹಸನೈನ್ ಕೂಡ ಖಚಿತ ಪಡಿಸಿದ್ದಾರೆ. ಗಾಂಧಿ ಪಿಎಸ್ ಪ್ರದೇಶದಲ್ಲಿ ಪಂಚಾಯತ್ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮೆರವಣಿಗೆಯಲ್ಲಿ ಪಾಕಿಸ್ತಾನದ ಪರ ಘೋಷಣೆ (ಪಾಕಿಸ್ತಾನ ಜಿಂದಾಬಾದ್) ಕೇಳಿಬಂದ ವಿಡಿಯೋ ವೈರಲ್ ಆಗಿದೆ.

ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗಿದ ವೈರಲ್ ವಿಡಿಯೊಗೆ ಸಂಬಂಧಿಸಿದಂತೆ ಎಫ್‌ಐಆರ್‌ನಲ್ಲಿ ಒಟ್ಟು 10 ಜನರನ್ನು ಹೆಸರಿಸಲಾಗಿದೆ. ಮೊದಲ ಸುತ್ತಿನ ನಾಮನಿರ್ದೇಶನವು ಏ.23 ರಂದು ಮುಕ್ತಾಯಗೊಳ್ಳಲಿದೆ.