ಸಂವೇದಿ ಸೂಚ್ಯಂಕ 323.34 ಅಂಕ ಕುಸಿತಗೊಂಡಿದ್ದು, 58,340.99 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿದೆ. ಎನ್ ಎಸ್ ಇ ನಿಫ್ಟಿ 88.30 ಅಂಕ ಇಳಿಕೆಯಾಗಿದ್ದು, 17,415 ಅಂಕಗಳಲ್ಲಿ ವಹಿವಾಟು ಅಂತ್ಯ ಗೊಂಡಿದೆ.
ಟಾಟಾ ಕನ್ಸೂಮರ್ ಪ್ರಾಡಕ್ಟ್ಸ್, ಇಚರ್ ಮೋಟಾರ್ಸ್, ಇನ್ಫೋಸಿಸ್, ಮಾರುತಿ ಸುಜುಕಿ ಮತ್ತು ಗ್ರಾಸಿಮ್ ಇಂಡಸ್ಟ್ರೀಸ್ ಷೇರುಗಳು ನಷ್ಟ ಕಂಡಿದೆ. ಮತ್ತೊಂದೆಡೆ ಒಎನ್ ಜಿಸಿ, ಅದಾನಿ ಪೋರ್ಟ್ಸ್, ಕೋಲ್ ಇಂಡಿಯಾ, ಕೋಟಕ್ ಮತ್ತು ಬಿಪಿಸಿಎಲ್ ಷೇರು ಲಾಭಗಳಿಸಿದೆ.
ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕ ಆರಂಭಿಕ ವಹಿವಾಟಿನಲ್ಲಿ 187.89 ಅಂಕ ಏರಿಕೆಯಾಗಿದ್ದು, 58,852.22 ಅಂಕಗಳಲ್ಲಿ ವಹಿವಾಟು ನಡೆಸಿತ್ತು. ಎನ್ ಎಸ್ ಇ ನಿಫ್ಟಿ 59.85 ಅಂಕ ಏರಿಕೆಯೊಂದಿಗೆ 17,563.20 ಅಂಕಗಳಲ್ಲಿ ವಹಿವಾಟು ಮುಂದುವರಿಸಿತ್ತು.