Tuesday, 10th September 2024

ದಟ್ಟವಾದ ಮಂಜು: 30 ವಿಮಾನ ವಿಳಂಬ, 17 ರದ್ದು

ವದೆಹಲಿ: ರಾಜಧಾನಿಯನ್ನು ದಟ್ಟವಾದ ಮಂಜು ಆವರಿಸಿದ್ದರಿಂದ ದೆಹಲಿಯಲ್ಲಿ ಶೀತ ಅಲೆಯ ಪರಿಸ್ಥಿತಿ ಮುಂದುವರೆದಿದೆ.

ರಾಜಧಾನಿಯಲ್ಲಿ ತಾಪಮಾನವು ಸಫ್ದರ್‌ಜಂಗ್‌ನಲ್ಲಿ 4.8 ಡಿಗ್ರಿ ಸೆಲ್ಸಿಯಸ್‌ನಲ್ಲಿ ದಾಖಲಾಗಿದ್ದರೆ, ಪಾಲಂನಲ್ಲಿ ತಾಪಮಾನವು 7.2 ಡಿಗ್ರಿ ಸೆಲ್ಸಿಯಸ್ ಆಗಿತ್ತು.

ಪಾಲಮ್ ವಿಮಾನ ನಿಲ್ದಾಣದಲ್ಲಿ 07;00 ಗಂಟೆಗಳ IST ನಲ್ಲಿ 100 ಮೀ ಗೋಚರತೆಯನ್ನು ವರದಿ ಮಾಡಲಾಗಿದೆ. ಸಫ್ದರ್‌ಜಂಗ್‌ ವಿಮಾನ ನಿಲ್ದಾಣ ದಲ್ಲಿ, 0700 ಗಂಟೆಗೆ 50 ಮೀ ಗೋಚರತೆ ಇತ್ತು ಎಂದು ಅದು ಹೇಳಿದೆ.

ದೆಹಲಿಯಿಂದ ಹೊರಡುವ ಸುಮಾರು 30 ವಿಮಾನಗಳು ವಿಳಂಬಗೊಂಡರೆ, 17 ಇತರ ವಿಮಾನಗಳನ್ನು ರದ್ದು ಗೊಳಿಸಲಾಗಿದೆ ಎಂದು ವಿಮಾನ ನಿಲ್ದಾಣದ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ದೆಹಲಿಗೆ ಬರಲಿದ್ದ 30 ರೈಲುಗಳು ತಡವಾಗಿ ಆಗಮಿಸಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಂಗಳವಾರ ದಟ್ಟವಾದ ಮಂಜು ವಿಮಾನ ಮತ್ತು ರೈಲು ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರಿದ್ದರಿಂದ ದೆಹಲಿ ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣದಲ್ಲಿ ಪ್ರಯಾಣಿಕರು ಕಾಯುವುದು ಮಾತ್ರ ಯಥಾ ಸ್ಥಿತಿಯಾಗಿದೆ.

Leave a Reply

Your email address will not be published. Required fields are marked *