Friday, 13th December 2024

3 ಸಾವಿರದ 157 ಸೋಂಕಿತರು ಪತ್ತೆ

#corona

ನವದೆಹಲಿ: ಎರಡು ತಿಂಗಳ ನಂತರ ದೇಶದಲ್ಲಿ ಕೋವಿಡ್ ಪಾಸಿಟಿವ್ ದರ ಶೇ.1ರಷ್ಟು ಹೆಚ್ಚಾಗಿದೆ. ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 3 ಸಾವಿರದ 157 ಸೋಂಕಿತರು ಪತ್ತೆಯಾಗಿದ್ದು 26 ಮಂದಿ ಮೃತಪಟ್ಟಿದ್ದಾರೆ.

ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 4 ಕೋಟಿಯ 30 ಸಾವಿರದ 82 ಸಾವಿರದ 345ಕ್ಕೆ ಏರಿಕೆಯಾಗಿದ್ದು 5 ಲಕ್ಷದ 23 ಸಾವಿರದ 869 ಮಂದಿ ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಕಳೆದ 24 ಗಂಟೆಗಳಲ್ಲಿ 408ರಷ್ಟು ಏರಿಕೆಯಾಗಿ ಸಕ್ರಿಯ ಸೋಂಕಿತರು 19 ಸಾವಿರದ 500ಕ್ಕೆ ಏರಿಕೆಯಾಗಿದೆ.

ಎರಡು ತಿಂಗಳ ನಂತರ ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಶೇ.1.07ರಷ್ಟು ಹೆಚ್ಚಳವಾಗಿದೆ.