ನವದೆಹಲಿ : ಭಾರತವು ಮಂಗಳವಾರ 34,703 ತಾಜಾ ಕೋವಿಡ್-19 ಪ್ರಕರಣಗಳನ್ನು ವರದಿ ಮಾಡಿದೆ. ಸಕ್ರಿಯ ಪ್ರಕರಣಗಳು 4,64,357 ಕ್ಕೆ ಇಳಿಕೆ ಯಾಗಿದೆ. 553 ಸಾವುಗಳು ದಾಖಲಾಗಿವೆ.
ಗರಿಷ್ಠ ಪ್ರಕರಣಗಳನ್ನು ದಾಖಲಿಸಿರುವ ಮೊದಲ ಐದು ರಾಜ್ಯಗಳೆಂದರೆ 8,037 ಪ್ರಕರಣಗಳನ್ನು ಹೊಂದಿರುವ ಕೇರಳ, ನಂತರ ಮಹಾರಾಷ್ಟ್ರ 6,740 ಪ್ರಕರಣಗೆ, ತಮಿಳುನಾಡು 3,715 ಪ್ರಕರಣಗಳನ್ನು, ಕರ್ನಾಟಕವು 2,848 ಪ್ರಕರಣಗಳನ್ನು ಮತ್ತು ಒಡಿಶಾ2,803 ಪ್ರಕರಣಗಳನ್ನು ಹೊಂದಿದೆ.
553 ಸಾವುಗಳಲ್ಲಿ, ಮಹಾರಾಷ್ಟ್ರದಲ್ಲಿ (106) ಗರಿಷ್ಠ ಸಾವುನೋವುಗಳು ವರದಿಯಾಗಿವೆ. ನಂತರ ಕೇರಳದಲ್ಲಿ 102 ದೈನಂದಿನ ಸಾವುಗಳು ಸಂಭವಿಸಿವೆ.
ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದ ಅಡಿಯಲ್ಲಿ ದೇಶವು ಇಲ್ಲಿಯವರೆಗೆ 35.75 ಕೋಟಿ ಲಸಿಕೆ ಡೋಸ್ ಗಳನ್ನು ನೀಡಿದೆ.