Saturday, 23rd November 2024

ಸಂವೇದಿ ಸೂಚ್ಯಂಕ 364.54 ಅಂಕಗಳ ಏರಿಕೆ

ಮುಂಬೈ: ಜಾಗತಿಕ ಹಾಗೂ ಏಷ್ಯನ್ ಷೇರುಮಾರುಕಟ್ಟೆಯಲ್ಲಿನ ಮಿಶ್ರ ವಹಿವಾಟಿನ ಪರಿಣಾಮ ಶುಕ್ರವಾರ ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕ 350ಕ್ಕೂ ಅಧಿಕ ಅಂಕಗಳ ವಹಿವಾಟು ನಡೆಸಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 364.54 ಅಂಕಗಳಷ್ಟು ಏರಿಕೆಯೊಂದಿಗೆ 58,158.54 ಅಂಕಗಳಲ್ಲಿ ವಹಿವಾಟು ಮುಂದು ವರಿಸಿದೆ. ಎನ್ ಎಸ್ ಇ ನಿಫ್ಟಿ 104.05 ಅಂಕಗಳಷ್ಟು ಏರಿಕೆಯಾಗಿದ್ದು, 17,308 ಅಂಕಗಳ ಮಟ್ಟ ತಲುಪಿದೆ.

ಟೈಟಾನ್, ಆಯಕ್ಸಿಸ್ ಬ್ಯಾಂಕ್, ಕೋಟಕ್ ಬ್ಯಾಂಕ್, ಆಲ್ಟ್ರಾಟೆಕ್ ಸಿಮೆಂಟ್, ಐಸಿಐಸಿಐ ಬ್ಯಾಂಕ್, ಮಹೀಂದ್ರ ಆಯಂಡ್ ಮಹೀಂದ್ರ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಎಚ್ ಡಿಎಫ್ ಸಿ ಷೇರುಗಳು ಲಾಭ ಗಳಿಸಿದೆ. ಎನ್ ಟಿಪಿಸಿ, ಟೆಕ್ ಮಹೀಂದ್ರ, ಇಂಡಸ್ ಇಂಡ್ ಬ್ಯಾಂಕ್ ಮತ್ತು ಇನ್ಫೋಸಿಸ್ ಷೇರುಗಳು ನಷ್ಟ ಕಂಡಿದೆ.

ಮುಂಬೈ ಷೇರುಪೇಟೆಯ ಸೆನ್ಸೆಕ್ಸ್ 12.17 ಅಂಕಗಳಷ್ಟು ಅಲ್ಪ ಕುಸಿತದೊಂದಿಗೆ 57,794.32 ಅಂಕಗಳಲ್ಲಿ ವಹಿವಾಟು ಕೊನೆಗೊಳಿ ಸಿತ್ತು. ಎನ್ ಎಸ್ ಇ ನಿಫ್ಟಿ 9.65 ಅಂಕಗಳಷ್ಟು ಇಳಿಕೆಯೊಂದಿಗೆ 17, 203.95 ಅಂಕಗಳ ಮಟ್ಟದಲ್ಲಿ ವಹಿವಾಟು ಅಂತ್ಯಗೊಂಡಿತ್ತು.